ಹಾಸನ ನಗರದಲ್ಲಿ ಡಿಸೆಂಬರ್ 5ರಂದು ಕಾಂಗ್ರೆಸ್ ಸರ್ಕಾರದಿಂದ ಸ್ವಾಭಿಮಾನಿ ಸಮಾವೇಶ ನಡೆಸುತ್ತಿರುವುದನ್ನು ಖಂಡಿಸುತ್ತೇವೆ ಎಂದು ಹಾಸನದ ಜೆಡಿಎಸ್ ಶಾಸಕ ಎಚ್ ಪಿ ಸ್ವರೂಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದರೂ ಕೂಡ ನಮ್ಮ ಸರ್ಕಾರದಲ್ಲಿ ಜನಕಲ್ಯಾಣ ಮಾಡಿದ್ದೇವದು ಸುಳ್ಳು ಹೇಳಿಕೊಂಡು ಹಾಸನದಲ್ಲಿ ಮಾಡುತ್ತಿರುವ ಸ್ವಾಭಿಮಾನಿ ಸಮಾವೇಶವನ್ನು ಜೆಡಿಎಸ್ ಪಕ್ಷದಿಂದ ಖಂಡಿಸುತ್ತೇವೆ” ಎಂದರು.
ಇದನ್ನೂ ಓದಿದ್ದೀರಾ?ಹಾಸನ | ಬಗರ್ ಹುಕುಂ ಕಡತಗಳ ವಿಲೇವಾರಿಗೆ ಕ್ರಮ: ಶಾಸಕ ಸಿಮೆಂಟ್ ಮಂಜು
“ಮೂರು ಉಪಚುನಾವಣೆ ಗೆದ್ದಿದ್ದೇವೆ. ಮಂಡ್ಯದಲ್ಲಿ ಒಬ್ಬರೂ ಮಾತ್ರ ಜೆಡಿಎಸ್ ಶಾಸಕರು ಬಿಟ್ಟರೆ ಉಳಿದ ಎಲ್ಲರೂ ಕಾಂಗ್ರೆಸ್ ಶಾಸಕರೇ ಇದ್ದೇವೆ. ಹಳೆ ಮೈಸೂರಿನಲ್ಲಿಯೂ ಕೂಡ ಕಾಂಗ್ರೆಸ್ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ಹಾಸನದಲ್ಲಿ ಒಬ್ಬರು ಕಾಂಗ್ರೆಸ್ ಶಾಸಕರು ಮತ್ತು ಸಂಸದರು ಇದ್ದು, ಶಕ್ತಿ ತುಂಬುವ ನಿಟ್ಟಿನಲ್ಲಿ ಇಲ್ಲೇ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದೇವೆಂದು ಕಾಂಗ್ರೆಸ್ ಹೇಳಿಕೊಂಡಿರುವುದು ಹಾಸ್ಯಸ್ಪದ ಹೇಳಿಕೆಯಾಗಿದೆ” ಎಂದರು.
“ಹಾಸನ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆಯೇ? ಇದರ ಕುರಿತು ಡಿಸೆಂಬರ್ 5ರ ಸಮಾವೇಶದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಉತ್ತರ ಹೇಳಬೇಕು” ಎಂದು ಶಾಸಕ ಎಚ್ ಪಿ ಸ್ವರೂಪ್ ಸವಾಲು ಹಾಕಿದರು.
