ಎತ್ತಿನಹೊಳೆ ಯೋಜನೆಯಿಂದ ರೈತರ ಜಮೀನಿಗೆ ಹಾನಿಯಾಗಿದೆ. ತೋಟದೊಳಗೆ, ಮನೆಯೊಳಕ್ಕೆ ನೇರವಾಗಿ ನೀರು ಹರಿಯುತ್ತಿದೆ ಎಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರೈತ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಎಲ್ಲೆಲ್ಲಿ ಎತ್ತಿನಹೊಳೆಯ ಸೆಕ್ಷನ್ ಇದೆಯೋ ಅಲ್ಲೆಲ್ಲಾ ನೀರು ಹರಿಯುತ್ತಿದೆ. ಕೆಲವು ಕಡೆ ತೋಟದೊಳಕ್ಕೂ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಕೆಲವು ಮನೆಗಳಿಗೂ ನೀರು ನುಗ್ಗುತ್ತಿದೆ. ಈಗಾಗಲೇ ಹಲವು ಕಡೆ ಗುಡ್ಡ ಕುಸಿಯುತ್ತಿದ್ದು, ಬದುಕು ಅಸ್ತವ್ಯಸ್ತವಾಗಿದೆ. ಹೀಗಿರುವಾಗ ಎತ್ತಿನಹೊಳೆ ಯೋಜನೆ ಮತ್ತೆ ಮುನ್ನಲೆಗೆ ಬರುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸರ್ಕಾರಿ ಶಾಲೆಯಲ್ಲಿ ನೀರಿಗೆ ಹಾಹಾಕಾರ; ಮನವಿಗೂ ಸ್ಪಂದಿಸದ ಶಿಕ್ಷಣ ಇಲಾಖೆ, ಅಧಿಕಾರಿಗಳು
“ಈ ಯೋಜನೆಯಿಂದ ನಮಗೆ ಯಾವುದೇ ರೀತಿಯ ಅನುಕೂಲವಿಲ್ಲ. ಎತ್ತಿನಹೊಳೆ ಯೋಜನೆ ಕೈಗೊಳ್ಳುವುದರಿಂದ ನಾವು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಈ ಯೋಜನೆಯ ಮುಂದುವರಿಕೆಯನ್ನು ನಿಲ್ಲಿಸಬೇಕು” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ