ಜಿಲ್ಲೆಯಲ್ಲಿ ಜನಗಣತಿ ಯಶಸ್ವಿಗೊಳಿಸಲು ಅಧಿಕಾರಿಗಳು ಗಮನಹರಿಸಬೇಕು. ಜಿಲ್ಲೆಯನ್ನು ಉತ್ತಮ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಲು ಪ್ರತಿದಿನ ಒಂದು ಗಂಟೆ ಮೀಸಲಿಟ್ಟು ಪರಿಶೀಲನೆ ನಡೆಸಬೇಕು” ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಎಂದು ಸೂಚಿಸಿದ್ದಾರೆ.
ಹಾಸನ ಪಟ್ಟಣದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, “ಸ್ವಯಂ ಗಣತಿಗೆ ಈಗಲೂ ಅವಕಾಶವಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಆಹ್ವಾನಿಸಿ ಸ್ವಯಂ ಗಣತಿಗೆ ಚಾಲನೆ ನೀಡಿಸಿ ಎಂದರಲ್ಲದೆ, ಎಸ್.ಹೆಚ್.ಜಿ. ಸದಸ್ಯರುಗಳನ್ನು ಸ್ವಯಂ ಗಣತಿ ಮಾಡಿಸಿ ಜೊತೆಗೆ ಪಶು ಸಖಿ ಮೂಲಕ ಕೂಡ ಸ್ವಯಂ ಗಣತಿಗೆ ಒತ್ತು ನೀಡಬೇಕು” ಎಂದು ಸೂಚಿಸಿದರು.
ಇದುವರೆಗೂ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳದೆ ಇರುವ ಮೇಲ್ವಿಚಾರಕರು ಹಾಗೂ ಗಣತಿದಾರರು ಇಂದೇ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಲಾಗಿನ್ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಿ” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಕಾಡಾನೆ ಸೆರೆ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ತಹಸೀಲ್ದಾರ್ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನಗರ ಸ್ಥಳೀಯ ಸಂಸ್ಥೆಗಳ ಎಸ್.ಹೆಚ್.ಜಿ. ಗುಂಪುಗಳ ಸದಸ್ಯರು ಸ್ವಯಂ ಗಣತಿ ಮಾಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.





