ಹಾಸನ | ಮನೆಯಲ್ಲಿಯೇ ವ್ಯಕ್ತಿ ಹತ್ಯೆ; ಪ್ರಕರಣ ದಾಖಲು 

Date:

ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಮಾರಕಾಸ್ತ್ರದಿಂದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ.

- Advertisement -

ಹತ್ಯೆಯಾದ ಮೃತ ವ್ಯಕ್ತಿ ಮಂಜುನಾಥಸ್ವಾಮಿ (58), ಎನ್ನಲಾಗಿದೆ. ಅವಿವಾಹಿತನಾಗಿದ್ದ ಮಂಜುನಾಥಸ್ವಾಮಿ ಕಲ್ಲಹಳ್ಳಿ ಗ್ರಾಮದಲ್ಲೇ ಒಂಟಿಯಾಗಿ ವಾಸವಾಗಿದ್ದ. ಮೂವತ್ತು ವರ್ಷಗಳ ಹಿಂದೆ ಅಪಹರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬಂದಿದ್ದ ಮಂಜುನಾಥಸ್ವಾಮಿ, ತನ್ನ ಹೆಸರಿನಲ್ಲಿದ್ದ ಬರೋಬ್ಬರಿ 15 ಎಕರೆ ಜಮೀನಿನಲ್ಲಿ ಬಿದಿರು ಬೆಳೆದಿದ್ದ ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಮಂಜುನಾಥಸ್ವಾಮಿ ಸ್ನೇಹಿತ ಅದೇ ಗ್ರಾಮದ ನಾಗಣ್ಣ ಎಂಬಾತ ಇಂದು ಬೆಳಿಗ್ಗೆ ಮನೆ ಬಳಿ ಬಂದಿದ್ದ, ಆದರೆ ಹೊರಗಿನಿಂದ ಮನೆಯ ಚಿಲಕ ಹಾಕಿದ್ದ ಕಾರಣ, ಮಂಜುನಾಥಸ್ವಾಮಿ ಎಲ್ಲೋ ಹೋಗಿದ್ದಾನೆ ಎಂದು ವಾಪಸಗಿದ್ದರು. ಆದರೇ, ಮನೆಯೊಳಗೆ ಟಿವಿ ಶಬ್ದ ಕೇಳಿ ಬಂದಿದರಿಂದ ಗ್ರಾಮದ ಮತ್ತೊಬ್ಬ ವ್ಯಕ್ತಿ ಜಗದೀಶ್ ಎಂಬಾತ ಕಿಟಕಿಯಲ್ಲಿ ನೋಡಿದರು. ನಂತರ ನಾಗಣ್ಣ, ಜಗದೀಶ್ ಇತರರು, ಚಿಲಕ ತೆಗೆದು ಒಳಗೆ ಹೋಗಿ ನೋಡಿದಾಗ ಮೃತ ಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಕುಳಿತ ಸ್ಥಿತಿಯಲ್ಲೇ ಮಂಜುನಾಥಸ್ವಾಮಿ ಸಾವನ್ನಪ್ಪಿರುವುದು ಬಯಲಾಗಿದೆ. ಮಂಜುನಾಥಸ್ವಾಮಿ ಸ್ವಲ್ಪ ದಪ್ಪವಿದ್ದ ಕಾರಣ, ಹೃದಯಾ ಹೃದಯಾ ಘಾತದಿಂದ ಸಾವನ್ನಪ್ಪಿ ದ್ದಾರೆ ಎಂದು ಸ್ಥಳೀಯರು ಹಾಗೂ ಕುಟುಂಬ ಸದಸ್ಯರು ಅಂದು ಕೊಂಡಿದ್ದರು. ಮುಂದುವರಿದು ಅಂತ್ಯಸಂಸ್ಕಾರಕ್ಕೂ ಸಿದ್ಧತೆ ನಡೆಸಿದ್ದರು. ಆದರೆ ಅನುಮಾನಗೊಂಡು ಸದಸ್ಯರು ಪೊಲೀಸರಿಗೆ ಕುಟುಂಬ ಮಾಹಿತಿ ನೀಡಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮಳೆ ಅಬ್ಬರ: ಜಾಲವೃತಗೊಂಡ ಪಟ್ಟಣ 

ಯಾರೋ ಸುದ್ದಿ ತಿಳಿದ ಗೊರೂರು ಪೊಲೀಸರು, ಸ್ಥಳಕ್ಕೆ ಬಂದು ಮೃತದೇಹ ಪರಿಶೀಲಿಸಿದಾಗ ದುಷ್ಕರ್ಮಿಗಳು ಮಂಜುನಾಥಸ್ವಾಮಿ ಕುತ್ತಿಗೆಗೆ ಚುಚ್ಚಿ, ತಲೆಗೆ ತಲೆಭಾಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಸೋಕೋ ತಂಡ ಭೇಟಿ, ಪರಿಶೀಲನೆ ನಡೆಸಿದ್ದು, ಒಂಟಿ ವ್ಯಕ್ತಿಯ ಕೊಲೆಗೆ ಕಾರಣ ಏನು ಎಂಬುದರ ಬಗ್ಗೆ ಗೊರೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ವಯಕ್ತಿಕ ದ್ವೇಷಕ್ಕೆ 150 ಅಡಿಕೆ ಗಿಡ ಕತ್ತರಿಸಿದ ಕಿಡಿಗೇಡಿಗಳು 

ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಅ.21ರ ಬುಧವಾರದಂದು ವೈಯಕ್ತಿಕ ದ್ವೇಷದ...

ಚಿಕ್ಕಮಗಳೂರು | ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಾಳಿಯಲ್ಲಿ ಗುಂಡು ಹಾರಿಸಿದಕ್ಕೆ ಪ್ರಕರಣ ದಾಖಲು 

ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯ ಜನವಸತಿ ಪ್ರದೇಶದಲ್ಲಿ ಬಿಜೆಪಿ ಯುವ ಮೋರ್ಚಾ...

ಹೃದಯದ ಮೇಲಿದ್ದ ಬೃಹತ್ ಗಡ್ಡೆ ಯಶಸ್ವಿ ತೆರವು; ಬಾಗಲಕೋಟೆಯ ಕೆರೂಡಿ ಆಸ್ಪತ್ರೆ ವೈದ್ಯರ ಅಪರೂಪದ ಸಾಧನೆ

ಎದೆಯ ಮಧ್ಯಭಾಗದಲ್ಲಿ ಬೆಳೆದು ಹೃದಯದ ಮೇಲೆ ತೀವ್ರ ಒತ್ತಡ ಉಂಟುಮಾಡುತ್ತಿದ್ದ ಬೃಹತ್...

ಬಾಗೇಪಲ್ಲಿ | ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಬಹುತೇಕಶಾಂತಿಯುತ ಹಾಗೂ ಬಿರುಸಿನ ಮತದಾನ

ಆಡಳಿತಾರೂಢ ಕಾಂಗ್ರೆಸ್‌‍ ಹಾಗೂ ಎನ್‌ಡಿಎ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿರುವ...