ಹಾಸನ | ಮದ್ಯ ಸೇವಿಸುವ ಪಂದ್ಯ; ಓರ್ವನ ಸಾವಿನಲ್ಲಿ ಅಂತ್ಯ

Date:

Advertisements

ಇಬ್ಬರು ವ್ಯಕ್ತಿಗಳ ನಡುವೆ ನಡೆದ ಮದ್ಯ ಸೇವಿಸುವ ಪಂದ್ಯ​​ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ತಿಮ್ಮೇಗೌಡ (60) ಎಂದು ಗುರುತಿಸಲಾಗಿದೆ. ಸಿಗರನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜು ಹಾಗೂ ತಿಮ್ಮೇಗೌಡ ಎಂಬುವವರ ನಡುವೆ ಪಂದ್ಯ ನಡೆದಿದ್ದು, ಮೂವತ್ತು ನಿಮಿಷದಲ್ಲಿ 90 ಎಂಲ್‌ನ ಹತ್ತು ಪ್ಯಾಕೆಟ್ ಮದ್ಯ ಕುಡಿಯುವಂತೆ ಪಂದ್ಯದಲ್ಲಿ ಸೂಚಿಸಲಾಗಿತ್ತು.

ಕೃಷ್ಣೇಗೌಡ ಎಂಬವರು ಇಬ್ಬರಿಗೂ ಮದ್ಯದ ಪ್ಯಾಕೆಟ್‌ಗಳನ್ನು ನೀಡಿದ್ದರು. ಚಾಲೆಂಜ್‌ಗಾಗಿ ಮದ್ಯ ಕುಡಿದು ರಕ್ತ ವಾಂತಿ ಮಾಡಿಕೊಂಡು ಬಸ್ ನಿಲ್ದಾಣದಲ್ಲೇ ತಿಮ್ಮೇಗೌಡ ಬಿದ್ದಿದ್ದಾರೆ. ತಿಮ್ಮೇಗೌಡ ವಾಂತಿ ಮಾಡುತ್ತಿದ್ದಂತೆಯೇ ದೇವರಾಜು ಮತ್ತು ಕೃಷ್ಣೇಗೌಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

Advertisements

ಗ್ರಾಮಸ್ಥರು ತಿಮ್ಮೇಗೌಡನನ್ನು ಎತ್ತಿಕೊಂಡು ಬಂದು ಮನೆಯಲ್ಲಿ ಮಲಗಿಸಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣ‌ ನಿತ್ರಾಣವಾಗಿದ್ದ ತಿಮ್ಮೇಗೌಡ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ತಿಮ್ಮೇಗೌಡನ ಪುತ್ರಿ ಹಬ್ಬಕ್ಕಾಗಿ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಗೆ ಬಂದು ತನ್ನ ತಂದೆ ರಕ್ತಕಾರಿ ಮಲಗಿದ್ದನ್ನ ಕಂಡು ಎಬ್ಬಿಸಲು ಯತ್ನಿಸಿದಾಗ ಮೃತಪಟ್ಟಿರುವುದು ತಿಳಿದಿದೆ.

ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ; ತಂಬಾಕು ಉತ್ಪನ್ನ ಖರೀದಿ ವಯೋಮಿತಿ 21 ವರ್ಷಕ್ಕೆ ಏರಿಕೆ: ದಿನೇಶ್ ಗುಂಡೂರಾವ್

ಘಟನೆ ಸಂಬಂಧ ತಿಮ್ಮೇಗೌಡನ ಪುತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹೊಳೆನರಸೀಪುರ ನಗರ ಠಾಣೆ ಪೊಲೀಸರು ದೇವರಾಜು ಹಾಗೂ ಕೃಷ್ಣೇಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಶಿರಾಡಿ ಘಾಟ್ ಬಳಿ ಗುಡ್ಡ ಕುಸಿತ: ವಾಹನ ಸಂಚಾರ ಸ್ಥಗಿತ, ಬದಲಿ ಮಾರ್ಗ ಬಳಕೆಗೆ ಸೂಚನೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ(NH-75)ಯ ದೊಡ್ಡತಪ್ಪಲೆಯಲ್ಲಿ ಭಾರೀ...

ಪಕ್ಷದ ವಿಪ್ ಉಲ್ಲಂಘನೆ; ಹಾಸನದ ಪ್ರಥಮ ಮೇಯರ್ ಚಂದ್ರೇಗೌಡ ಅನರ್ಹ

ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ವಿಚಾರವಾಗಿ ಹಾಸನ ಮಹಾ ನಗರ ಪಾಲಿಕೆ...

ಹಾಸನ | ವರ್ಷಾಂತ್ಯದ ವೇಳೆಗೆ 2 ಲಕ್ಷ ಮಂದಿಗೆ ಭೂಮಿ ಮಂಜೂರು ಗುರಿ: ಸಚಿವ ಕೃಷ್ಣ ಬೈರೇಗೌಡ

ಈ ವರ್ಷಾಂತ್ಯದ ವೇಳೆಗೆ ರಾಜ್ಯದಲ್ಲಿ 2 ಲಕ್ಷ ದರಕಾಸ್ತು ಪೋಡಿ ಸರ್ವೆ...

ಹಾಸನ | ಮಹನೀಯರ ತ್ಯಾಗ ಬಲಿದಾನದ ಫಲವೇ ಇಂದಿನ ಸ್ವಾತಂತ್ರ್ಯ: ಸಚಿವ ಕೃಷ್ಣ ಬೈರೇಗೌಡ

ದೇಶಕ್ಕೆ ಸ್ವಾತಂತ್ರ್ಯವನ್ನು ಬ್ರಿಟಿಷರು ಕೊಟ್ಟಿದ್ದಲ್ಲ, ಬದಲಾಗಿ ಭಾರತೀಯರು ಸತತ ಹೋರಾಟ, ಸಂಘರ್ಷ,...

Download Eedina App Android / iOS

X