ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ಶಿವಣ್ಣ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 1,34,797 ಮತ ಪಡೆಯುವ ಮೂಲಕ 31,325 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಎರಡು ದಶಕಗಳಿಂದ ಬಿಜೆಪಿ ಪ್ರಾಬಲ್ಯವಿದ್ದ ಅನೇಕಲ್ ವಿಧಾನಸಭಾ ಕ್ಷೇತ್ರವು ದಶಕದಿಂದೀಚೆಗೆ ‘ಕೈ’ ವಶದಲ್ಲಿದೆ. ಸತತ ಎರಡು ಸಲ ಗೆದ್ದಿರುವ ಕಾಂಗ್ರೆಸ್‌ನ ಬಿ ಶಿವಣ್ಣ ಮುರನೇ ಬಾರಿಯೂ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ಪಡೆದು ಹ್ಯಾಟ್ರಿಕ್ ಗೆಲುವ ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಸಿ ಹುಲ್ಲಹಳ್ಳಿ 1,03,472 ಮತ ಪಡೆದು ಹಿನ್ನೆಡೆಯಾಗಿದ್ದಾರೆ. 21 ಸುತ್ತುಗಳಲ್ಲಿ ಮತ ಎಣಿಕೆಯಾಯಿತು. ಒಂದು ಸುತ್ತು ಹೊರತುಪಡಿಸಿ ಉಳಿದ 20 ಸುತ್ತುಗಳಲ್ಲಿಯೂ ಶಿವಣ್ಣ ಮುನ್ನೆಡೆ ಕಾಯ್ದುಕೊಂಡರು. ಕಸಬಾ ಹೋಬಳಿಯಲ್ಲಿ 11,419 ಮತಗಳ ಲೀಡ್ ಪಡೆದಿದ್ದಾರೆ.
“ರಾಹುಲ್ ಗಾಂಧಿ ಅವರ ರೋಡ್ ಶೋ ನಂತರ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಾಯಿತು. ಆನೇಕಲ್ ವಿಧಾನಸಭಾ ಕ್ಷೇತ್ರದ ಜನತೆ ಮೂರು ಬಾರಿ ಆಶೀರ್ವಾದ ಮಾಡುವ ಮೂಲಕ ನಮ್ಮ ಜವಾಬ್ದಾರಿ ಹೆಚ್ಚಿಸಿದ್ದಾರೆ” ಎಂದು ಕಾಂಗ್ರೆಸ್ ಅಭ್ಯರ್ಥಿ ಶಿವಣ್ಣ ಹೇಳಿದರು.
ಆನೇಕಲ್ ವಿಧಾನಸಭಾ ಕ್ಷೇತ್ರ ರಚನೆಯಾದ 1997 ರಿಂದ 1994ರವರೆಗೆ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. 1978ರಲ್ಲಿ ಮಾತ್ರ ಜೆಎನ್ ಪಿ ಅಭ್ಯರ್ಥಿ ವೈ ರಾಮಕೃಷ್ಣ ಗೆದ್ದಿದ್ದರು. 1983ರವರೆಗೆ ಬಿಜೆಪಿಯ ಸುಳಿವೇ ಇರಲಿಲ್ಲ. ಕ್ರಮೇಣ ಪಕ್ಷ ಸಂಘಟನೆ ಮೂಲಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಿತು. 1994 ರಿಂದ 2013ರವರೆಗೆ ಬಿಜೆಪಿ ಅಭ್ಯರ್ಥಿಗಳು ಕ್ಷೇತ್ರದ ಚುಕ್ಕಾಣಿ ಹಿಡಿದಿದ್ದರು. ಈಗ ಮತ್ತೆ ‘ಕೈ’ ತನ್ನ ಹಿಡಿತ ಸಾಧಿಸಿದೆ.
ಈ ಸುದ್ದಿ ಓದಿದ್ದೀರಾ? ಗದಗ | ನಾಲ್ಕು ಕೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ತಲಾ ಎರಡರಲ್ಲಿ ಗೆಲುವು