ಕನಕದಾಸರು ಸಮಾಜದಲ್ಲಿನ ಅನಿಷ್ಠ ಮೂಢನಂಬಿಕೆ ಹಾಗೂ ಅಜ್ಞಾನದ ವಿರುದ್ಧ ದಾಸಸಾಹಿತ್ಯದ ಮೂಲಕ ಜನರಿಗೆ ಅರ್ಥವಾಗುವ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಆ ಕಾಲದಲ್ಲಿಯೇ ಮಾಡಿದ್ದರು. ಸಮಸಮಾಜದ ನಿರ್ಮಾಣದ ಅವರ ಕನಸನ್ನು ಡಾ.ಬಿ ಆರ್ ಅಂಬೇಡ್ಕರ್ ಅವರು ನಮಗೆಲ್ಲರಿಗೂ ಸಂವಿಧಾನ ನೀಡುವ ಮೂಲಕ ಸಾಕಾರಗೊಳಿಸುವ ಕೆಲಸ ಮಾಡಿದ್ದಾರೆ. ಕನಕದಾಸರ ವಿಚಾರಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದು ಲಿಡ್ಕರ್ ಮಾಜಿ ಉಪಾಧ್ಯಕ್ಷ ಡಿ ಎಸ್ ಮಾಳಗಿ ಹೇಳಿದರು.
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಾನವತಾವಾದಿ ಕನಕದಾಸರ 536ನೇ ಜಯಂತಿಯಲ್ಲಿ ಮಾತನಾಡಿದರು.
ಸಮಿತಿಯ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ, “ನಾವುಗಳು ಕುಲ-ಕುಲವೆಂದು ಹೊಡಿದಾಡಿದರೆ ಏನು ಫಲ? ಎಂದು ಜನರಿಗೆ ಸಾಹಿತ್ಯದ ಮೂಲಕ ಪ್ರಶ್ನೆ ಮಾಡುತ್ತಾ ಕನಕದಾಸರು ಸರಳ ಸಾಹಿತ್ಯದ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ. ಅವರ ತತ್ವ ಸಿದ್ದಾಂತ ಹಾಗೂ ವಿಚಾರಧಾರೆಗಳನ್ನು ನಾವು ಪಾಲಿಸುವುದು ಅಗತ್ಯವಾಗಿದೆ. ಮಾನವೀಯತೆಯಿಂದ ಸಮಾಜದಲ್ಲಿ ನಾವೆಲ್ಲರೂ ಬಾಳಬೇಕಾಗಿದೆ. ಕನಕರ ಜೀವನ ಸಂದೇಶ ನಮ್ಮೊಳಗೆ ಅಳವಡಿಸಿಕೊಳ್ಳೋಣ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕನಕದಾಸನಾದ ತಿಮ್ಮಪ್ಪ ನಾಯಕ: ಮುಖ್ಯ ಶಿಕ್ಷಕ ಖಾಜಿ
ಮಂಜುನಾಥ ಮಡಿವಾಳರ, ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ವಿಭೂತಿ ಶೆಟ್ಟಿ, ಡಿಎಸ್‌ಎಸ್ ಮಂಜಪ್ಪ ಮರೋಳ, ಜಗದೀಶ ಡೊಳ್ಳೇಶ್ವರ, ಜಗದೀಶ ಹರಿಜನ, ಹನಮಂತಪ್ಪ ಸಿಡಿ, ಶಿವಲಿಂಗಪ್ಪ ನಿಂಗಪ್ಪನವರ, ಮಂಜಪ್ಪ ದೊಡ್ಡಮರೆಮ್ಮನವರ, ಮಹೇಶಪ್ಪ ಹರಿಜನ, ಮಂಜುನಾಥ ವೇಷಗಾರ, ಪ್ರಕಾಶ ಹರಿಜನ, ನಾಗರಾಜ ಬಾಲಣ್ಣನವರ, ಈರಪ್ಪ ಹರಿಜನ ಇದ್ದರು.