ಹಾವೇರಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆರ್.ಬಿ.ಐ ಮಾರ್ಗದರ್ಶನದಡಿಯಲ್ಲಿ ಕೆಲಸ ಮಾಡುತ್ತಿವೆ. ನೈಜವಾದ ಗ್ರಾಹಕರಿಗೆ ಯಾವುದೇ ರೀತಿ ತೊಂದರೆ ಉಂಟಾಗದಂತೆ ಕೋಡ್ ಆಫ್ ಕಂಡಕ್ಟ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಕೆಲವು ಮಧ್ಯವರ್ತಿಗಳು ಗ್ರಾಹಕರಲ್ಲಿ ಗೊಂದಲ ಮೂಡಿಸಿ ದಿಕ್ಕುತಪ್ಪಿಸುವ ಮೂಲಕ ಮೈಕ್ರೋ ಫೈನಾನ್ಸ್ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ನವಚೇತನ ಮೈಕ್ರೋ ಫೈನಾನ್ಸ್ ಮುಖ್ಯಸ್ಥ ಕೊಟ್ರಗೌಡ ಸಿ ಆರೋಪಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕೆಲಸಕ್ಕೆ ಅಡ್ಡಿಪಡಿಸುತ್ತಿರುವ ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮುಖ್ಯಸ್ಥರುಗಳು ಹಾವೇರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಈ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕಗಳಿಂದ ಸೌಲಭ್ಯ ವಂಚಿತ ಬಡ ಕುಟುಂಬಗಳಿಗೆ ಯಾವುದೇ ಅಡಮಾನ ತೆಗೆದುಕೊಳ್ಳದೆ, ಆಧಾರ್ ಕಾರ್ಡ್ ಆಧಾರದ ಮೇಲೆ ಸಾಲ ನೀಡುತ್ತೇವೆ. ನಮ್ಮ ಭಾರತ ದೇಶದಲ್ಲಿ ಅತೀ ಹೆಚ್ಚು ಬಡತನ ಎದ್ದು ಕಾಣುತ್ತಿದೆ. ಬಡತನ ಕಡಿಮೆ ಮಾಡಿ, ಆರ್ಥಿಕ ಪರಿಸ್ಥಿತಿ ಸುಧಾರಣೆಯ ಉದ್ದೇಶ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹೊಂದಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಾವೇರಿ ಆರತಿಗಲ್ಲ – ನದಿ ಸಂರಕ್ಷಣೆಗೆ ಆದ್ಯತೆ ಕೊಡಿ!
“ಗ್ರಾಹಕರ ಮನೆಗೆ ಹೋಗಿ ಅವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಹೈ ಮಾರ್ಕ್ ಪರಿಶೀಲನೆ ಮಾಡಿ ಗ್ರಾಹಕರು ಸಾಲವನ್ನು ತೆಗೆದುಕೊಳ್ಳಲು ಎಷ್ಟು ಅರ್ಹರು? ಎಷ್ಟು ಮೊತ್ತದ ಸಾಲ ನೀಡಬಹುದು ಎಂಬುದನ್ನು ಪರಿಶೀಲಿಸುತ್ತೇವೆ. ನಂತರ ಗ್ರಾಹಕರಿಗೆ ಹೆಚ್ಚು ಹೊರೆಯಾಗದಂತೆ ಸಾಲವನ್ನು ಅಧಿಕೃತ ವಾಗಿ ಮಂಜೂರು ಮಾಡುತ್ತಿವೆ. ಆದರೆ ಇದನ್ನೆಲ್ಲಾ ಮಧ್ಯವರ್ತಿಗಳು ಕೆಲ ಆಮಿಷಕ್ಕೆ ದುರುಪಯೋಗ ಮಾಡುವುದರಿಂದ ನೈಜ ಗ್ರಾಹಕರಿಗೆ ತೊಂದರರೆ ಆಗುತ್ತದೆ” ಎಂದು ಆರೋಪಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಫೈನಾನ್ಸ್‌ನ ಗಂಗಾಧರ, ಗ್ರಾಮೀಣ ಕೂಟ ಫೈನಾನ್ಸ್‌ನ ವಿಶ್ವನಾಥ್, ಚೈತನ್ಯ ಫೈನಾನ್ಸ್‌ನ ಮುತ್ತಣ್ಣ, ಫ್ಯೂಷನ್ ಫೈನಾನ್ಸ್‌ನ ಝಾಕೀರ್, ಇಕ್ವಿಟಾಸ್ ನದಾಫ್ ಸೇರಿದಂತೆ ಜಿಲ್ಲೆಯ ಎಲ್ಲಾ ಮೈಕ್ರೋಫೈನಾನ್ಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
