“ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣದ ಎಸ್.ಐ.ಟಿ ತನಿಖೆಯ ವರದಿಯನ್ನು ನಡೆಸುತ್ತಿದ ಸ್ವತಂತ್ರ ಪತ್ರಕರ್ತರ ಮೇಲೆ ಗೂಂಡಾ ವರ್ತನೆ ದಾಳಿಯನ್ನು ಖಂಡನೀಯ” ಎಂದು ಡಿ ವೈ ಎಫ್ ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಅಸಮಾಧಾನ ವ್ಯಕ್ತಪಡಿಸಿದರು.
ಹಾವೇರಿ ಪಟ್ಟಣದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ವತಿಯಿಂದ ಧರ್ಮಸದಲ್ಲಿ ಸ್ವತಂತ್ರ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟಯಲ್ಲಿ ಮಾತನಾಡಿದರು.
“ಧರ್ಮಸ್ಥಳದಲ್ಲಿ ಸ್ವತಂತ್ರ ಪತ್ರಕರ್ತರ ಮೇಲೆ ನಡೆದ ಗೂಂಡಾಗಳ ದಾಳಿಯನ್ನು ಜೀವಪರ ಮನಸುಳ್ಳವರೆಲ್ಲರೂ ತೀವ್ರವಾಗಿ ಖಂಡಿಸುತ್ತೇವೆ. ದಶಕಗಳಿಂದ ನಡೆದ ಅತ್ಯಾಚಾರ, ದೌರ್ಜನ್ಯ , ಕೊಲೆ, ಸುಲಿಗೆಗಳಿಂದ ಜನರು ತತ್ತರಿಸಿ ಹೋಗಿದ್ದಾರೆ. ಸಾಕ್ಷಿದಾರರೊಬ್ಬರ ಹೇಳಿಕೆಯ ಮೇಲೆ ಉತ್ಕನನ ನಡೆಯುತ್ತಿದೆ. ಸತ್ಯ ಹೊರಬರುವ ಭಯದಿಂದ ಮಾದ್ಯಮದವರ ಮೇಲೆ ಹಲ್ಲೆ ದೌರ್ಜನ್ಯದಂತಹ ಕೃತ್ಯಗಳಿಗೆ ಮುಂದಾಗಿರುವುದರಲ್ಲಿ ಅನುಮಾನವೇ ಇಲ್ಲ. ಈ ಹಲ್ಲೆಯಲ್ಲಿ ನಾಲ್ವರು ಸ್ವತಂತ್ರ ಪತ್ರಕರ್ತರಿಗೆ ತೀವ್ರ ಗಾಯಗಳಾಗಿವೆ. ಒಬ್ಬ ಪತ್ರಕರ್ತ ಮಾರಣಾಂತಿಕ ದಾಳಿಗೆ ಒಳಗಾಗಿದ್ದಾನೆ. ಇದೊಂದು ಎಲ್ಲರೂ ಖಂಡಿಸಬೇಕಾದ ಘಟನೆಯಾಗಿದೆ” ಎಂದು ಹೇಳಿದರು.
ಮುಂದುವರೆದು “ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರವಲ್ಲ ಜೀವಹಾನಿಗೆ ಪ್ರಯತ್ನವೆಂದೇ ಹೇಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ನ್ಯಾಯದ ಪರ, ಅಭಿವ್ಯಕ್ತಿ ಸ್ವಾತಂತ್ರ್ಯದ ಪರ, ಬದುಕುವ ಹಕ್ಕಿನ ಪರ ಮತ್ತು ಅತ್ಯಾಚಾರ, ದೌರ್ಜನ್ಯಕ್ಕೆ ಕೊಲೆಗೆ ಒಳಗಾದವರ ಪರ ನಿಲ್ಲಬೇಕಾದದ್ದು ಮನುಷ್ಯರಾದವರ ಕರ್ತವ್ಯವವಾಗಿದೆ. ರಾಜ್ಯ ಸರಕಾರ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು. ಮಾಧ್ಯಮದ ಮೇಲೆ ಮಾಡಿದ ಹಲ್ಲೆ ಅತ್ಯಂತ ಖಂಡನೀಯವಾಗಿದ್ದು. ಘಟನೆಗೆ ಕಾರಣರಾದವರು ಮತ್ತು ಪ್ರಚೋದನೆ ಮಾಡಿದವರನ್ನುತಕ್ಷಣವೇ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಬೇಕು” ಎಂದು ಒತ್ತಾಯಿಸಿದರು.
ಬಿಎಸ್ಎಸ್ ಮಹಿಳಾ ರಾಜ್ಯಾಧ್ಯಕ್ಷೆ ಮಂಜುಳಾ ಎಸ್ ಅಕ್ಕಿ ಮಾತನಾಡಿ, ಧರ್ಮಸ್ಥಳದ ಪತ್ರಕರ್ತರ ಮೇಲೆ ನಡೆದ ಹಲ್ಲೆ ಖಂಡನೀಯ. ಅದೇ ಊರಿನ ಮಹಿಳೆಯರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಪತ್ರಕರ್ತರ ವರದಿ ಮಾಡುತ್ತಿದವರ ಮೇಲೆ ಹಲ್ಲೆ ಮಾಡುವುದು ಎಷ್ಟು ಸರಿ ಕೂಡಲೇ ಸರ್ಕಾರಗಳು ಮಧ್ಯೆ ಪ್ರವೇಶ ಮಾಡಬೇಕು” ಎಂದು ಒತ್ತಾಯಿಸಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ಧರ್ಮಸ್ಥಳದ ಪದ್ಮಲತಾ ವೇದವಲ್ಲಿ ಸೌಜನ್ಯ ಸೇರಿದಂತೆ ಇತರ ಎಲ್ಲ ನ್ಯಾಯಕ್ಕಾಗಿ ಕಾದಿರುವ ಸಾವುಗಳ ಸಮಗ್ರ ತನಿಖೆಯನ್ನು ಮಾಡಬೇಕು. ದಮನಿತರಿಗಾಗಿ ಮೀಸಲಿಟ್ಟ ಭೂಮಿ ಬಗ್ಗೆ, ಭೂಮಿಗಾಗಿ ಅಮಾಯಕರ ಹತ್ಯೆ, ಅನೇಕರಿಗೆ ಹಿಂಸೆ ಮತ್ತು ಬಹಳಷ್ಟು ಜನರಿಗೆ ಬೆದರಿಸು ಓಡಿಸಿದ ಎಲ್ಲಾ ಪ್ರಕರಣಗಳನ್ನು ಎಸ್.ಐ.ಟಿ ತನಿಖೆ ನಡೆಸಬೇಕು. ಎಸ್.ಐ.ಟಿಯ ಕೆಲಸಗಳಿಗೆ ಅಡ್ಡಿಯಾಗದಂತೆ ಮತ್ತು ಸತ್ಯ ವನ್ನು ಹೊರಗೆ ತೆಗೆಯಲು ಬೇಕಾದ ಎಲ್ಲ ರಕ್ಷಣಾ ವ್ಯವಸ್ಥೆ ಗಳನ್ನು ಮಾಡಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಪದ್ಮಲತಾ, ವೇದವಲ್ಲಿ, ಸೌಜನ್ಯ ಪ್ರಕರಣಗಳನ್ನು SIT ತನಿಖೆಗೊಳಪಡಿಸಲು ಎಸ್ಎಫ್ಐ ಒತ್ತಾಯ
ಪ್ರತಿಭಟನೆಯಲ್ಲಿ ಕೆ.ಎಸ್.ಡಿ.ಎಫ್ ಮುಖಂಡರಾದ ತಿಪ್ಪೇಸ್ವಾಮಿ ಹೊಸಮನಿ, ಬಿಎಸ್ಎಸ್ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಎಸ್ಎಫ್ಐ ಮುಖಂಡರಾದ ಹಜರತ್ ಬಿ ಮಾತನಾಡಿದರು. ಮುಖಂಡರಾದ ಸುನೀಲ್ ಕುಮಾರ್ ಎಲ್, ಅರುಣ ಕುಮಾರ ನಾಗವತ್, ಫಕ್ಕರೇಶ್ ಮ್ಯಗಳಮನಿ, ಸುದೀಪ್ ಲಮಾಣಿ, ನವೀನ್ ರಾಥೋಡ್, ಚೇತನ್ ಲಮಾಣಿ ,ಮುತ್ತಪ್ಪ ಲಮಾಣಿ, ವಿಜಯ್ ಎನ್, ಸಂಜೀವ ಕೆ, ವಿನಾಯಕ್, ಶಿವು ,ರಾಹುಲ ಲಮಾಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.