“ಗೋವಾ ರಾಜ್ಯದಲ್ಲಿ ಫ್ರೇಡ್ನೆ ಹತ್ತಿರದ ರಸ್ತೆಯಲ್ಲಿ ಟ್ರಕ್ ಅಡ್ಡಗಟ್ಟಿ ಕನ್ನಡಿಗರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೆಯ” ಎಂದು ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಕಿಡಿಕಾರಿದರು.
ಹಾವೇರಿ ಪಟ್ಟಣದ ಜಿಲ್ಲಾಡಳಿತ ಭವನದ ಎದುರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ಗೋವಾ ರಾಜ್ಯದಲ್ಲಿ ಕನ್ನಡಿಗರ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಕೆಲವೊಂದು ಗೋವ ಗುಂಡಾಗಳು ಕನ್ನಡಿಗರನ್ನೇ ಟಾರ್ಗೆಟ್ ಮಾಡಿ ಇಂತಹ ಕೃತ್ಯವನ್ನು ಎಸೆಸುತ್ತಿದ್ದಾರೆ. ಇದೆಲ್ಲಾ ಗೊತ್ತಿದ್ದರೂ ಗೋವಾ ಸರ್ಕಾರ ಮೌನಕ್ಕೆ ಶರಣಾಗಿದೆ. ಕೂಡಲೇ ಗೋವಾ ಸರ್ಕಾರ ಇಂಥಾ ಗುಂಡಾಗಳಿಗೆ ಕಡಿವಾಣ ಹಾಕಬೇಕು. ಇದಕ್ಕೆ ಸಂಬಂಧಿಸಿದಂತೆ ನಮ್ಮ ರಾಜ್ಯ ಸರ್ಕಾರ ಗೋವಾ ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಿ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಗೋವಾ ರಾಜ್ಯದಲ್ಲಿ ಇರುವ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕು” ಎಂದು ಒತ್ತಾಯಿಸಿದರು.
“ಮುಂದಿನ ದಿನಗಳಲ್ಲಿ ಹೀಗೆ ಕನ್ನಡಿಗ ಕಾರ್ಮಿಕರ ಮೇಲೆ ಹಲ್ಲೆ ನಡೆದರೆ ಅಥವಾ ಅಲ್ಲಿ ವಾಸವಾಗಿರುವ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆದರೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಂಸ್ಥಾಪಕರಾಧ್ಯಕ್ಷರ ಪಿ ಕೃಷ್ಣೇಗೌಡರ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರುಗಳ ಒಳಗೊಂಡಂತೆ ಗೋವಾದಲ್ಲಿ ಹಲ್ಲೆ ಮಾಡಿರುವವರಿಗೆ ಸರಿಯಾದ ಪಾಠವನ್ನು ಕಲಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮಹಿಳೆಯರ ಸುರಕ್ಷತೆಗೆ ತಗಡುಗಳೇ ಆಸರೆ: ಮೂಲಸೌಕರ್ಯ ಒದಗಿಸುವಲ್ಲಿ ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ
ಈ ಮನವಿ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷru ಗೀತಾಬಾಯಿ ಲಮಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೊಸುಫ್ ಸೈಕಲಗಾರ, ಜಿಲ್ಲಾ ಉಪಾಧ್ಯಕ್ಷರು ರಾಜೇಸಾಬ ಮನೆಗಾರ್, ಜಿಲ್ಲಾ ಯುವ ಘಟಕದ ಅಧ್ಯಕ್ಷರು ಕಲಂದರ್ ಎಲೆದಹಳ್ಳಿ , ಹಾವೇರಿ ತಾಲೂಕ ಮಹಿಳಾ ಅಧ್ಯಕ್ಷೆ ನಾಗಮ್ಮ ಕಾಳೇರ, ಹಾನಗಲ್ ತಾಲೂಕ್ ಅಧ್ಯಕ್ಷೆ ನೇತ್ರಾ ಕಟ್ಟೀಮನಿ, ಹಜರತ್ ತಳಗೇರಿ, ಅನಿಲ್ ಮಾವರ್ಕರ್, ದಾದಾಪೀರ್ ಮಲ್ಲಾಡ, ಎಂ ಎ ಬಳೆಗಾರ, ಲಲಿತಾ ವಾಲ್ಮೀಕಿ, ವೀಣಾ ಕಲಾಲ್, ಶಾಂತ ಬಡಿಗೇರ್, ನೀಲವ್ವ ಕಟ್ಟಿಮನಿ, ಚನ್ನಬಸವ ಕುಸುನೂರ, ಭಾಷಾ ಬಾಳೂರು, ಕಮಲಾ ಲಕ್ಷ್ಮಪುರ್, ಚಂದ್ರಕಲಾ ಕಟ್ಟೀಮನಿ, ಶರೀಫ್ ತಳಕೇರಿ, ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.