ಡಾ. ಜಗಜೀವನರಾಂ ಅವರು ಶೋಷಿತ ಸಮಾಜಕ್ಕಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳು ಜನಿಸದೇ ಹೋಗಿದ್ದರೆ ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಡಿಎಸ್ಎಸ್ ರಾಜ್ಯ ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ ಸ್ಮರಿಸಿದರು.
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಡಿಎಸ್ಎಸ್ ಹಾಗೂ ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಮಾಜ ಸುಧಾರಕ, ಹಸಿರು ಕ್ರಾಂತಿ ಹರಿಕಾರ ಹಾಗೂ ಅಸ್ಪೃಶ್ಯತೆ ನಿವಾರಣೆಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರ 37ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಶೋಷಿತ ಸಮಾಜದ ಏಳಿಗೆಯೊಂದಿಗೆ ಸರ್ವ ಸಮಾಜದ ಉದ್ಧಾರಕ್ಕಾಗಿ ಹಾಗೂ ಅಸಮಾನತೆ ಹೋಗಲಾಡಿಸಲು ಸಂವಿಧಾನದ ಅನೇಕ ಹುದ್ದೆಗಳಿಗೆ ರಾಜೀನಾಮೆ ನೀಡಿ ಶೋಷಿತರ, ನೊಂದವರ ಧ್ವನಿಯಾಗಿ ಜನಸಾಮಾನ್ಯರ ಜೀವನದ ಉದ್ಧಾರಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ದೇಶದ ಒಬ್ಬ ಮಹಾನ್ ಪುರುಷ, ಉಪಪ್ರಧಾನಿ ಡಾ. ಜಗಜೀವನರಾಂ ಅವರ ಪುಣ್ಯಸ್ಮರಣೆ ಆಚರಣೆ ಮುಂದುವರೆಸಿಕೊಂಡು ಹೋಗುವುದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೇಕೆದಾಟು ಯೋಜನೆಗೆ ಕರ್ನಾಟಕಕ್ಕೆ ಅವಕಾಶ ನೀಡುವುದಿಲ್ಲ: ತಮಿಳುನಾಡು ಸಚಿವ
ದಲಿತ ಮುಖಂಡ ಮಂಜಪ್ಪ ಮರೋಳ, ವಿಭೂತಿ ಶೆಟ್ಟಿ, ಮಲ್ಲೇಶ ಕಡಕೋಳ, ಶಿವರಾಜ ಹರಿಜನ, ಜಗದೀಶ ಹರಿಜನ, ರಮೇಶ ಸೀತಗೊಂಡ, ಬಸವರಾಜ ಹರಿಜನ, ಬಸವಣ್ಣೆಪ್ಪ ಹಳಿಹಾಳ, ಹನುಮಂತಪ್ಪ ಹಂಸಿ, ವಿವೇಕಾನಂದ ಇಂಗಳಗಿ ಸೇರಿದಂತೆ ಬಹುತೇಕ ಸಾಮಾಜಿಕ ಚಳವಳಿ ಮುಖಂಡರು ಇದ್ದರು.