“ಬಸವಣ್ಣನವರು ಕಂಡ ವರ್ಣರಹಿತ, ವರ್ಗರಹಿತ, ಧಾರ್ಮಿಕ ಸಮಾನತೆಯ ಸಮಾಜ ನಮ್ಮೆಲ್ಲರ ಇಂದಿನ ಆಶಯವಾಗಬೇಕಾಗಿದೆ. ಬಸವಣ್ಣನವರ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯೋಣ. ಸಮಾಜದಲ್ಲಿ ಶಾಂತಿಯನ್ನು ಕಾಪಾಡೋಣ” ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಹೇಳಿದರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ವತಿಯಿಂದ ಆಯೋಜಿಸಿದ ವಿಶ್ವಗುರು ಬಸವಣ್ಣ ಅವರ 892 ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಸಮಾನತೆಯ ಹರಿಕಾರರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮದೆಯಾದ ಕೊಡುಗೆ ನೀಡಿದ ಬಸವಣ್ಣನವರು ತಮ್ಮ ವಚನಗಳ ಮೂಲಕ ಬದುಕಿನ ದಾರಿ ತೋರಿಸಿದವರು. ಬಸವಣ್ಣನವರ ವಾಣಿಯಂತೆ ಶರಣ ಧರ್ಮದ ಮೂಲ ಆಧಾರವೇ ದಯೆ. ಶರಣ ಧರ್ಮದ ಮೂಲ ತಳಹದಿಯೇ ದಯೆ. ಪರಸ್ಪರ ಪ್ರೀತಿ, ಪ್ರೇಮ, ದಯೆಯಂತಹ ಮಾನವೀಯ ಗುಣಗಳಿಂದಾಗಿ ಶರಣರು ಪ್ರತಿಪಾದಿಸಿದ ಧರ್ಮ ಮಾನವ ಧರ್ಮವಾಯಿತು. ಎಲ್ಲಾ ಮಾನವರು ಶ್ರೇಷ್ಠ ಎಂಬ ಭಾವನೆ ಆಶಯ ಬಸವಣ್ಣನವರ ಬದುಕಿನಲ್ಲಿ ಕಾಣಬಹುದಾಗಿತ್ತು. ಅವರ ಜೀವನದ ಆಶಯಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಬದುಕನ್ನು ಶ್ರೇಷ್ಠವನ್ನಾಗಿಸಿಕೊಳ್ಳೋಣ” ಎಂದು ಉಡಚಪ್ಪ ಮಾಳಗಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸೂಪರ್ ಮಾರುಕಟ್ಟೆ ಕಾಂಪೌಂಡ್, ಪಿಲ್ಲರುಗಳಲ್ಲಿ ಬಿರುಕು: ಕಳಪೆ ಕಾಮಗಾರಿ ಆರೋಪ
ಈ ಸಂದರ್ಭದಲ್ಲಿ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ರೇಣುಕಾ ಬಡಕ್ಕಣ್ಣನವರ, ಮುಖಂಡರಾದ ಶೆಟ್ಟಿ ಯುವತಿ. ಮಂಜುನಾಥ ಕಚವಿ, ನಗೀನಾ ಬಾನು, ಬಸವರಾಜ ದೇವವರಮನಿ, ಹಾನಗಲ್ ತಾಲ್ಲೂಕಾಧ್ಯಕ್ಷರು ಜಗದೀಶ ಹರಿಜನ, ಬ್ಯಾಡಗಿ ತಾಲ್ಲೂಕಾಧ್ಯಕ್ಷ ಹನಮಂತಪ್ಪ ಸಿ.ಡಿ, ಶೇಖಪ್ಪ ಹಲಸೂರ, ಮುಸ್ತಾಪ ಅಗಸನಹಳ್ಳಿ, ಬಸವಣ್ಣೆಪ್ಪ ಅಳ್ಳಳ್ಳಿ, ಪ್ರವೀಣ ಭಾಂಡಗೆ. ಮಹೇಶಪ್ಪ ಹರಿಜನ, ಅನ್ನಪೂರ್ಣ ಅರಕೇರಿ, ನೇತ್ರಾ ಕಾಂತೇಶ ದೊಡ್ಮನಿ, ಗೀತಾ ಶೀಡೆನೂರ, ಮಂಜವ್ವ ಶಿಡೇನೂರ, ಮಾಯವ್ವ ಶಿಡೇನೂರ, ಸುನೀತಾ ಶಿಡೇನೂರ, ಸುಮಂಗವ್ವ ಕೃಷ್ಣಾಪೂರ, ದುರಗಮ್ಮ, ಗೀತಮ್ಮ ಕಡೆಮನಿ, ಗೀತವ್ವ ಒಳಗುಡ್ಡಿ,ಎಲ್ಲಮ್ಮ ಸಣ್ಣಮನಿ, ಸುಮಂಗಲ ರಾಣೆಬೆನ್ನೂರು, ಶಿಡೇನೂರ ಸೇರಿದಂತೆ ಅನೇಕರಿದ್ದರು.