“ಗ್ರಾಮೀಣ ಬಡ ಕೂಲಿಕಾರಿಗೆ ಸಂಪೂರ್ಣ ಸಹಕಾರ ನೀಡಿ ಅವರ ಜೀವನೋಪಯ ಸುಧಾರಣೆಗಾಗಿ ಸರಕಾರದ ಮೇಲೆ 150 ಮಾನವ ದಿನಕ್ಕೆ ಕೂಲಿ ದಿನ, 400ರೂ ಕೊಲಿ ಹೆಚ್ಚಳಕ್ಕೆ ಒತ್ತಡ ತರುವದಾಗಿ” ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ನರೇಗಾ ಕಾರ್ಮಿಕ ರಿಗೆ ಪ್ರಮಾಣ ಪತ್ರ ನೀಡಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಗ್ರಾಮ ಸ್ವರಾಜ್ ಅಭಿಯಾನ, ಜಿಲ್ಲಾ ಪಂಚಾಯತ್ ತಾಲೂಕ ಪಂಚಾಯತ್, ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಸಹಕಾರದೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ಮಾಡುವ 279 ಮೆಟ್ ಗಳಿಗೆ ಈ ಹಿಂದೆ ಮೂರು ದಿನ ತರಬೇತಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.
“ಈ ಸಮಾರಂಭದಲ್ಲಿ ಕಾರ್ಮಿಕರ ಸಂಘಟನೆಗೆ ನಿವೇಶನ ನೀಡಲು ಅಧಿಕಾರಿಗಳ ಸಭೆ ಮಾಡಿ ಸಮುದಾಯ ಭವನ ನಿರ್ಮಿಸಲಾಗುವುದು” ಎಂದರು.
“ಜಿಲ್ಲೆಯಲ್ಲಿ ಕಾರ್ಮಿಕರ ಸಮಾವೇಶ ಮಾಡಿದರೆ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ಅವರಿಗೆ ನಮ್ಮ ಸಂಘಟನೆಗೆ ಭೇಟಿ ಮಾಡಿಸಿ, ಜಿಲ್ಲಾ ಮಟ್ಟದ ನರೇಗಾ ಕಾರ್ಮಿಕರ ಸಮಾವೇಶದಲ್ಲಿ ಕುಂದು ಕೊರೆತೆ ಅಲಿಸಲಾಗುವದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಅದ ಶ್ರೀ ಮಲ್ಲಿಕಾರ್ಜುನ ಕೆ, ಎಮ್ ಹಾಗೂ ಸಹಾಯಕ ನಿರ್ದೇಶಕರಾದ ಶ್ರೀ ಪರಶುರಾಮ್ ಅಗಸನಹಳ್ಳಿ,ವನಸಿರಿ ಗ್ರಾಮೀಣ ಅಭಿರುದ್ದಿ ಸಂಸ್ಥೆ ಶ್ರೀ ಎಸ್, ಡಿ, ಬಳಿಗಾರ್, ಸಂಪನ್ಮೂಲ ವೆಕ್ತಿ ದಾದಾಪಿರ್ ತಿಳವಳ್ಳಿ, ನಾಗರಾಜ್ ಬಿದರಿ, ಇತರೆ ಜಿಲ್ಲಾ ಸಂಪನ್ಮೂಲ ವೆಕ್ತಿ ಗಳು,ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು ತರಬೇತಿ ಪಡೆದ ತಾಲೂಕಿನ ಮೆಟ್ ಗಳು ಪಾಲ್ಗೊಂಡಿದ್ದರು,
