ಹಾವೇರಿ | ಚಂಸು ವಿಶಾಲ ವ್ಯಾಪ್ತಿಯ ಕವಿ: ಸಾಹಿತಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ

Date:

“ಚಂಸು ಅವರ ಕವಿತೆಗಳನ್ನು ಒಂದು ಚೌಕಟ್ಟಿನಲ್ಲಿ ಇಟ್ಟು ಮಾತನಾಡುವುದೇ ಅಸಾಧ್ಯ. ಚಂಸು ವಿಶಾಲ ವ್ಯಾಪ್ತಿಯ ಕವಿ. ಅವನೊಳಗೊಬ್ಬ ಪತ್ರಕರ್ತ ಇರುವಂತೆ, ತನ್ನ ಜನರನ್ನು ಪ್ರೀತಿಸುವ ರೈತನೂ ಇದ್ದಾನೆ” ಎಂದು ಸಾಹಿತಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಹೇಳಿದರು.

- Advertisement -

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಗರದಲ್ಲಿ ರವಿವಾರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಾತೋಶ್ರೀ ಮಹದೇವಕ್ಕ ಮಂಗಳವಾದ್ಯ ಮತ್ತು ತರಬೇತಿ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮ ಘಟಕ ಮೇಡ್ಲೆರಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕವಿ ಚಂಸು ಪಾಟೀಲರ ‘ಕುಳದ ಸಂಗಾತ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

“ವರ್ತಮಾನದ ಬದುಕನ್ನು ತೀವ್ರವಾಗಿ ವಿಡಂಬಿಸುತ್ತಲೇ ಅಚ್ಚರಿ ಹುಟ್ಟಿಸುವ ಚಂಸು ಕಾವ್ಯ ಎಚ್ಚರದ ಗಂಟೆಯಾಗಿಯೂ ಮಾರ್ದನಿಸುತ್ತದೆ ಎಂದರು.

“ಸಮಕಾಲೀನ ಜಗತ್ತಿನ ಎಲ್ಲ ಆಗುಹೋಗುಗಳನ್ನು ಸಾಮಾನ್ಯನೊಬ್ಬನ ಕಣ್ಣಿನಿಂದ ನೋಡಿ, ಜನಪರವಾಗಿ ಪ್ರತಿನುಡಿಯುವ ಧಾವಂತ ಕುಳದ ಸಂಗಾತದ ಕವಿತೆಗಳಲ್ಲಿದೆ. ಕೃಷಿ ಸಮಸ್ಯೆಗಳೂ ಸೇರಿದಂತೆ, ಜನಸಾಮಾನ್ಯರ ದೈನಂದಿನ ನಿಟ್ಟುಸಿರನ್ನೆ ಪಿಸುಗುಡುವಂತೆ ಇಲ್ಲಿನ ಕವಿತೆಗಳು ಎದೆ ತಟ್ಟುತ್ತವೆ. ಕಾವ್ಯದ ವಿನ್ಯಾಸದಲ್ಲಿ ಹೊಸ ಪ್ರಯೋಗ ಹಾಗೂ ವಸ್ತುವಿಷಯ ವೈವಿಧ್ಯತೆಗಳಿಂದ ‘ಕುಳದ ಸಂಗಾತ’ ವಿಶೇಷ ಎನಿಸುತ್ತದೆ” ಎಂದು ಅವರು ವಿವರಿಸಿದರು.

“ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ಜೊತೆಗೇ ಸ್ಥಳೀಯ ಘಟನಾವಳಿಗಳೂ ಇಲ್ಲಿ ಕಾವ್ಯಕ್ಕೆ ವಸ್ತು ಆಗಿವೆ. ಚಂಸು ಅವರ ಕವಿತೆಗಳು ಸಮಕಾಲೀನ ರಾಜಕೀಯದ ಬಗ್ಗೆ ಮಾತನಾಡುತ್ತಲೇ ಬಂಡವಾಳಶಾಹಿಯ ಧೋರಣೆಗಳ ಬಗ್ಗೆ ಎಚ್ಚರಿಸುತ್ತವೆ” ಎಂದು ಹೇಳಿದರು.

ಹಿರಿಯ ರೈತರೂ, ಪಿಎಲ್‌ಡಿ ಬ್ಯಾಂಕಿನ ಮಾಜಿ ನಿರ್ದೆಶಕರಾದ ಶಿವಪುತ್ರಪ್ಪ ಕೊಪ್ಪದ ಅವರು ಪುಸ್ತಕ ಬಿಡುಗಡೆ ಮಾಡಿದರು.

ಕಸಾಪ ತಾಲೂಕ ಅಧ್ಯಕ್ಷರಾದ ಪ್ರಭಾಕರ್ ಶಿಗ್ಲಿ, ಎಸ್ ಎಫ್ ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಶ್ರೀಮತಿ ಮಾದೇವಮ್ಮ ಸಾವಕ್ಕನವರ್, ಕಸಾಪ ಮೆಡ್ಲೇರಿ ಗ್ರಾಮ ಘಟಕದ ಅಧ್ಯಕ್ಷರಾದ ಮಾರುತಿ ತಳವಾರ್, ಸಂಗೀತ ತರಬೇತಿ ಸಂಸ್ಥೆಯ  ಅಧ್ಯಕ್ಷರಾದ ಬಸವರಾಜ್ ಸಾವಕ್ಕನವರ್, ಕವಿ ಚಂಸು ಪಾಟೀಲ, ಮಲ್ಲೇಶಪ್ಪ ಮದ್ಲೇರ ಮೊದಲಾದವರು ಉಪಸ್ಥಿತರಿದ್ದರು.

ಇದನ್ನು ಓದಿದ್ದೀರಾ? ದ್ವೇಷ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ನೋಟಿಸ್ ಜಾರಿ, ಪ್ರಕರಣ ದಾಖಲು

ಇದೇ ಸಂದರ್ಭದಲ್ಲಿ ಪಿಎಚ್‌ಡಿ ಪುರಸ್ಕೃತ ಡಾ. ಮಂಜಪ್ಪ ಚಲವಾದಿ, ಡಾ. ಗುರು ಎಸ್ ಚಲವಾದಿ ಹಾಗೂ ಕಲಾವಿದರು ಮೈಲಾರಪ್ಪ ಚಲವಾದಿ, ಸಂಜೀವಪ್ಪ ದೊಡ್ಡ ಕಾಳೇರ್, ಹನುಮಂತಪ್ಪ ದೊಡ್ಡ ಕಾಳೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...