ಪಂಜಾಬ್‌ | ಒಂದೇ ದಿನದಲ್ಲಿ 147 ಬೆಂಕಿ ಅವಘಡ; ಗಾಳಿ ಗುಣಮಟ್ಟ ಕುಸಿತಕ್ಕೆ ಮೂಲ

Date:

ಪಂಜಾಬ್‌ನಲ್ಲಿ ಈ ವರ್ಷದ ಮಳೆ ಋತುವಿಲ್ಲಿ ಅತ್ಯಧಿಕ ಬೆಂಕಿ ಅವಘಡಗಳು (ಕೃಷಿ ಭೂಮಿಗೆ ಬೆಂಕಿ ಹಚ್ಚುವುದು) ಸೋಮವಾರ ಸಂಭವಿಸಿವೆ. ಒಂದೇ ದಿನ 147 ಬೆಂಕಿ ಅವಘಡಗಳು ಘಟಿಸಿವೆ. ಸೆಪ್ಟೆಂಬರ್ 15ರಿಂದ ಈಚೆಗೆ ಸಂಭವಿಸಿದ ಅವಘಡಗಳ ಒಟ್ಟು ಸಂಖ್ಯೆ 890ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

- Advertisement -

ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿ (ಪಿಪಿಸಿಬಿ) ದತ್ತಾಂಶದ ಪ್ರಕಾರ, ಹೆಚ್ಚಿನ ರೈತರು ಬೆಳೆ ತ್ಯಾಜ್ಯ ಸುಡುವುದನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದ್ದರೂ, ರೈತರು ನಿರ್ಲಕ್ಷಿಸುತ್ತಲೇ ಇದ್ದಾರೆ. ಅಕ್ಟೋಬರ್ 20ರ ವೇಳೆಗೆ 353 ಕೃಷಿ ಬೆಂಕಿ ಅವಘಡಗಳು ಸಂಭವಿಸಿದ್ದವು. ಕಳೆದ ಒಂದು ವಾರದಲ್ಲಿ ಅವಘಡಗಳ ಸಂಖ್ಯೆ 890ಕ್ಕೆ ಏರಿಕೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಅಂಕಿಅಂಶದ ಪ್ರಕಾರ, ಟಾರ್ನ್ ತರಣ್‌ನಲ್ಲಿ 249, ಅಮೃತಸರದಲ್ಲಿ 169, ಫಿರೋಜ್‌ಪುರದಲ್ಲಿ 87, ಸಂಗ್ರೂರ್‌ನಲ್ಲಿ 79, ಪಟಿಯಾಲದಲ್ಲಿ 46, ಗುರುದಾಸ್ಪುರದಲ್ಲಿ 41, ಬಟಿಂಡಾದಲ್ಲಿ 38 ಮತ್ತು ಕಪುರ್ತಲಾದಲ್ಲಿ 35 ಬೆಂಕಿ ಅವಘಡಗಳು ವರದಿಯಾಗಿವೆ.

ಪಠಾಣ್‌ಕೋಟ್ ಮತ್ತು ರೂಪನಗರ ಜಿಲ್ಲೆಗಳಲ್ಲಿ ಇದುವರೆಗೆ ಯಾವುದೇ ಕೃಷಿ ಹುಲ್ಲು ಸುಡುವ ಘಟನೆಗಳು ವರದಿಯಾಗಿಲ್ಲ. ಎಸ್‌ಬಿಎಸ್ ನಗರ ಮತ್ತು ಹೋಶಿಯಾರ್‌ಪುರದಲ್ಲಿ ಮೂರು, ಮಲೇರ್‌ಕೋಟ್ಲಾದಲ್ಲಿ ನಾಲ್ಕು ಮತ್ತು ಲುಧಿಯಾನದಲ್ಲಿ ಒಂಬತ್ತು ಪ್ರಕರಣಗಳು ವರದಿಯಾಗಿವೆ.

ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭತ್ತದ ಬೆಳೆ ಕೊಯ್ಲು ಮಾಡಿದ ನಂತರ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಲು ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಹುಲ್ಲು ಸುಡುತ್ತಿರುವುದೇ ಕಾರಣವೆಂದು ದೂಷಿಸಲಾಗುತ್ತದೆ.

ಭತ್ತದ ಕೊಯ್ಲಿನ ನಂತರ ರಬಿ ಬೆಳೆಯಾದ ಗೋಧಿ ಬಿತ್ತನೆ ಮಾಡಲು ಸಮಯ ಬಹಳ ಕಡಿಮೆ ಇರುತ್ತದೆ. ಹೀಗಾಗಿ, ಕೆಲವು ರೈತರು ಕೃಷಿ ಚಟುವಟಿಕೆಗಳನ್ನು ತ್ವರಿತವಾಗಿ ಆರಂಭಿಸಲು ತಮ್ಮ ಗದ್ದೆಗಳಿಗೆ ಹುಲ್ಲಿಗೆ ಬೆಂಕಿ ಹಚ್ಚುತ್ತಾರೆ.

ಈ ಲೇಖನ ಓದಿದ್ದೀರಾ?: ಸಂಘಿಗಳು ತುಂಬಿರುವ ಕಾಂಗ್ರೆಸ್ಸಿನಲ್ಲಿ ಸಿದ್ದು- ಖರ್ಗೆ-ಹರಿಪ್ರಸಾದ್-ಜಾರಕಿಹೊಳಿ ಸೈದ್ಧಾಂತಿಕ ಬದ್ಧತೆ

ಪಿಪಿಸಿಬಿ ಪ್ರಕಾರ, ಈ ವರ್ಷ ಪಂಜಾಬ್‌ನಲ್ಲಿ ಒಟ್ಟು 31.72 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಾಗಿದೆ. ಅಕ್ಟೋಬರ್ 26 ರವರೆಗೆ ಶೇ.59.82ರಷ್ಟು ಕಟಾವು ಮಾಡಲಾಗಿದೆ.

ಇಲ್ಲಿಯವರೆಗೆ, 386 ಬೆಂಕಿ ಹಚ್ಚಿದ ಪ್ರಕರಣಗಳಲ್ಲಿ ಪರಿಸರಕ್ಕೆ ಹಾನಿ ಆರೋಪದಲ್ಲಿ 19.80 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಒಟ್ಟು 13.40 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಪಿಪಿಸಿಬಿ ದತ್ತಾಂಶವು ತೋರಿಸಿದೆ.

ಕೃಷಿ ಭೂಮಿಯಲ್ಲಿ ಬೆಂಕಿ ಹಚ್ಚಿದ ಘಟನೆಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತದ ಸೆಕ್ಷನ್ 223 (ಸಾರ್ವಜನಿಕ ಸೇವಕರು ಘೋಷಿಸಿದ ಆದೇಶದ ಉಲ್ಲಂಘನೆ) ಅಡಿಯಲ್ಲಿ ಒಟ್ಟು 302 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪಿಪಿಸಿಬಿ ಹೇಳಿದೆ.

ಪಂಜಾಬ್ 2023ರಲ್ಲಿ 36,663 ಕೃಷಿ ಬೆಂಕಿ ಅವಘಡಗಳಿಗೆ ಹೋಲಿಸಿದರೆ 2024ರಲ್ಲಿ ಒಟ್ಟು 10,909 ಕೃಷಿ ಬೆಂಕಿ ಪ್ರಕರಣಗಳು ದಾಖಲಾಗಿದ್ದವು. ಅಂದರೆ, ಪ್ರಕರಣಗಳಲ್ಲಿ 70% ಇಳಿಕೆಯಾಗಿತ್ತು. ಈ ವರ್ಷ ಇನ್ನೂ ಕಡಿಮೆಯಾಗುವ ಸಾಧ್ಯತೆಗಳಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೇರಿ ಹಲವು ಮಂದಿ ದೆಹಲಿ ಪೊಲೀಸರ ವಶಕ್ಕೆ

ಚುನಾವಣಾ ಆಯೋಗದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌‌ಗೆ ಆಗಮಿಸಿದ್ದ...

ಸಿಜೆಪಿ ಬೆಂಬಲಕ್ಕೆ ನಿಂತ ಪಾಲ್ಘರ್ ವಕೀಲರ ಸಂಘ: ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ಘೋಷಣೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಕೀಲರ ಸಂಘವೊಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ)...

ಅಯೋಧ್ಯೆ ರಾಮಮಂದಿರ ಸಿಬ್ಬಂದಿಗೆ ಶೇ. 100ರಷ್ಟು ಪೊಲೀಸ್ ವೆರಿಫಿಕೇಷನ್; ಹಿನ್ನೆಲೆ ಪರಿಶೀಲನೆ ಕಡ್ಡಾಯ

ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು...

ಸಿಇಸಿ ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಅನುಮತಿ ನಿರಾಕರಣೆ; ಜಂತರ್ ಮಂತರ್‌ನಲ್ಲಿ ಬಿಗಿ ಭದ್ರತೆ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...