ರಾಜ್ಯದಲ್ಲಿ ನಿರಂತರ ಮಳೆ ಸುರಿದ ಪರಿಣಾಮವಾಗಿ ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ನಾಶವಾಗಿದ್ದು, ರೈತ ಗೋಳಾಟ ಕೇಳ ತೀರದಂತಾಗಿದೆ.
ಹಾವೇರಿ ಜಿಲ್ಲೆಯ ದೇವಗಿರಿ ಗ್ರಾಮದ ರೈತ ದುರಗಪ್ಪ ಹೆಡಿಗ್ಗೊಂಡ ಅವರು ಟೊಮೆಟೊ ಬೆಳೆದಿದ್ದರು. ಆದರೆ, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ದೇವಗಿರಿ ಬಳಿಯ ವರದಾ ನದಿ ಉಕ್ಕಿ ಹರಿದಿದ್ದು, ಟೊಮೆಟೊ ಬೆಳೆ ಜಲಾವೃತಗೊಂಡು ನಾಶವಾಗಿದೆ.
ಟೊಮೆಟೊ ಬೆಳೆಗೆ ಜಲಾವೃತಗೊಂಡ ಪರಿಣಾಮ ಸರಿಸುಮಾರು ಎರಡೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದ ಬೆಳೆ ನಾಶವಾಗಿದೆ. ಟೊಮೆಟೊ ದರ ಏರಿಕೆಯಿಂದ ಉತ್ತಮ ಲಾಭಗಳಿಸುವ ನಿರೀಕ್ಷೆಯಲ್ಲಿದ್ದ ರೈತನಿಗೆ ಆಘಾತವಾಗಿದೆ.