ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಶಾಲೆಯಲ್ಲಿ ಒಂದನೆ ತರಗತಿಗೆ ಪ್ರವೇಶ ಪಡೆದ 33 ಮಕ್ಕಳಿಗೆ ಒಂದು ಸಾವಿರ ಠೇವಣಿ ಹಾಗೂ ಕಲಿಕಾ ಸಾಮಗ್ರಿಗಳನ್ನು ಶಾಸಕ ಶ್ರೀನಿವಾಸ ಮಾನೆ ವಿತರಿಸಿದರು.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಪೂರ್ವ ಪ್ರಾಥಮಿಕ ವಿಭಾಗ (ಎಲ್.ಕೆ.ಜಿ.) ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸಿ ಮಾತನಾಡಿದರು.
“ತಾಲೂಕಿನ ಮಕ್ಕಳ ಭವಿಷ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ಹತ್ತಾರು ಮಾದರಿ ಕ್ರಮಗಳನ್ನು ಅನುಸರಿಸಲಾಗಿದೆ. ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ 30 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲಾಗಿದೆ” ಎಂದು ಶ್ರೀನಿವಾಸ ಮಾನೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ನೂತನ ತಹಸೀಲ್ದಾರರಿಗೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸನ್ಮಾನ
ತಾಲೂಕಾ ಬಗರ್ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಗಾಪಂ ಅಧ್ಯಕ್ಷ ಜಾಫರಸಾಬ ಮುಲ್ಲಾ, ಬಿಇಒ ವಿ.ವಿ.ಸಾಲಿಮಠ, ತಾಲೂಕಾ ಶೈಕ್ಷಣಿಕ ಸುಧಾರಣಾ ಸಮಿತಿ ಸದಸ್ಯ ಅಬ್ದುಲಗನಿ ಪಟೇಲ, ಎಸ್.ಡಿ.ಎಂ.ಸಿಅಧ್ಯಕ್ಷ ಮಂಜುನಾಥ ಭಾಗವಾನ್, ಮುಖ್ಯಶಿಕ್ಷಕ ಮಲ್ಲಯ್ಯ ಹಿರೇಮಠ, ಸಿ.ಆರ್.ಪಿ. ಖಾಜಾಮೊಹಿದ್ದೀನ ಕೆ, ಮುಖಂಡರಾದ ಎಂ.ಎ.ನೆಗಳೂರ, ಕಲವೀರಪ್ಪ ಪವಾಡಿ, ಆಶೋಕ ಹಲಸೂರ, ಫಕ್ಕಿರೇಶ ಮಾವಿನಮರದ ಸೇರಿದಂತೆ ಗ್ರಾಪಂ ಮತ್ತು ಎಸ್.ಡಿ.ಎಂ.ಸಿ. ಸದಸ್ಯರು, ಗಾಮಸ್ಥರು ಇದ್ದರು.