“ಕೊಲೆ, ಅತ್ಯಾಚಾರ, ಹಲ್ಲೆ, ಸುಲಿಗೆ, ಹಿಂಸಾಚಾರಗಳು ದಿನೇ ದಿನೇ ಹಾವೇರಿ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ,ಜಿಲ್ಲೆಯ ಜನರು ಭಯಭೀತರಾಗಿ ಜೀವನ ನಡೆಸುವಂತ ಸ್ಥಿತಿ ಜಿಲ್ಲೆಯ ಜನರಿಗೆ ಬಂದೊದಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು” ಎಂದು ಡಿ.ಎಸ್.ಎಸ್ ಅಂಬೇಡ್ಕರ್ ಧ್ವನಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಗುಡ್ಡಪ್ಪನವರ ಒತ್ತಾಯಿಸಿದರು.
ಹಾವೇರಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ (ಚಂದ್ರಕಾಂತ ಬಣ) ವತಿಯಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ, ಕೃತ್ಯಗಳನ್ನು ನಡೆಸುತ್ತಿರುವ ಕ್ರಿಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಹಾವೇರಿ ನಗರದಲ್ಲಿ ಜೂನ್ 9 ರಂದು ಪೌರಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಅಪರಾಧಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಆರೋಪಿಗಳು ಜಾಮೀನು ಮೇಲೆ ಬಿಡುಗಡೆಗೊಂಡರೆ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಯ 23 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ: ಜಿಲ್ಲಾಧಿಕಾರಿ ಆದೇಶ
ಈ ಸಂದರ್ಭದಲ್ಲಿ ಕೆ.ಆರ್.ಡಿ.ಎಸ್.ಎಸ್ ಅಂಬೇಡ್ಕರ್ ದ್ವನಿ ಜಿಲ್ಲಾ ಅಧ್ಯಕ್ಷರು ಫಕ್ಕಿರೇಶ್ ಪುರದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಬಣಕಾರ್, ಜಿಲ್ಲಾ ಗೌರವ ಅಧ್ಯಕ್ಷರು ಮಾಲತೇಶ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷರು ಚನ್ನಪ್ಪ ಹರಿಜನ, ಜಿಲ್ಲಾ ಯುವ ಘಟಕ ಅಧ್ಯಕ್ಷರು ಲಕ್ಷ್ಮಣ್ ರಾಮಣ್ಣನವರ್, ಹಾವೇರಿ ತಾಲೂಕ ಅಧ್ಯಕ್ಷರುಮಾಲ್ತೇಶ್ ತಳಗೇರಿ, ಬ್ಯಾಡಗಿ ತಾಲೂಕ ಅಧ್ಯಕ್ಷರು ಕುಮಾರ್ ಮಾಳಗಿ, ಬ್ಯಾಡಗಿ ತಾಲೂಕ ಎಸ್ ಟಿ ಘಟಕದ ಅಧ್ಯಕ್ಷರು ರಮೇಶ್ ಹೇಡಿಗೊಂಡ, ಹಾನಗಲ್ ತಾಲೂಕ ಅಧ್ಯಕ್ಷರು ಮಂಜುನಾಥ ಹರಿಜನ್, ಹಾನಗಲ್ ತಾಲೂಕ ಯುವ ಘಟಕ ಅಧ್ಯಕ್ಷರು ಮೈಲಾರಪ್ಪ ಹರಿಜನ ಇನ್ನೂ ಅನೇಕರು ಉಪಸ್ಥಿತರಿದ್ದರು.