ಹಾವೇರಿಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಫರ್ಧೆಯಲ್ಲಿ ಕಬ್ಬೂರ ಕಾಲೇಜಿನ ನಿವೇದಿತಾ ಬಡಿಗೇರ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶುಕ್ರವಾರ ಹಾವೇರಿಯಲ್ಲಿ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಬ್ಬರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿವೇದಿತಾ ಬಡಿಗೇರ ಅವರು ಪ್ರಥಮ ಸ್ಥಾನದಲ್ಲಿ ಗಣಿಸಿದ್ದಾರೆ.
ನಿವೇದಿತಾ ಅವರ ಸಾಧನೆಗೆ ಕಾಲೇಜು ಪ್ರಾಚಾರ್ಯ ಆನಂದ ಹಂಡೆ, ಉಪನ್ಯಾಸಕರಾದ ಅಶೋಕ ಕಹಾರ, ಎಫ್.ಎಂ ಅನ್ಸಾರಿ, ಜಿಎಚ್ ವಾಲ್ಮೀಕಿ, ಎಚ್.ಡಿ ಗಂಟೇರ, ರಮೇಶ ಲಮಾಣಿ, ಬಿ.ಬಿ ಕುರಬರ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು, ಕುಮಾರಿ ನಿವೇದಿತಾ ಬಡಿಗೇರ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದು ಜಯಶಾಲಿಯಾಗಲಿ ಎಂದು ಶುಭಕೋರಿ ಅಭಿನಂದಿಸಿದ್ದಾರೆ.