ಹಾವೇರಿ | ನಾಡು, ನುಡಿಗಾಗಿ ಹೋರಾಡಿದ ಧೀಮಂತ ವ್ಯಕ್ತಿತ್ವದ ಗಟ್ಟಿ ಧ್ವನಿ ಡಾ. ಪಾಟೀಲ್ ಪುಟ್ಟಪ್ಪ: ಸಾಹಿತಿ ಸಂಕಮ್ಮ ಸಂಕಣ್ಣವರ

Date:

Advertisements

“ಕನ್ನಡ ನಾಡು, ನುಡಿಗಾಗಿ ಹೋರಾಡಿದ ಧೀಮಂತ ವ್ಯಕ್ತಿತ್ವದ ಗಟ್ಟಿ ಧ್ವನಿ ಡಾ. ಪಾಟೀಲ್ ಪುಟ್ಟಪ್ಪ.  ನುಡಿದಂತೆ ನಡೆದ ಪಾಪು ಅವರ ಘರ್ಜನೆಗೆ ಭ್ರಷ್ಠ ಅಧಿಕಾರಿಗಳು ನಡಗುತ್ತಿದ್ದರು” ಎಂದು ಸಾಹಿತಿ ಸಂಕಮ್ಮ ಸಂಕಣ್ಣನವರ ಹೇಳಿದರು.

ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ರವಿವಾರ ಪಾಪು ಅಭಿಮಾನಿಗಳ ಬಳಗದ ವತಿಯಿಂದ ನಡೆದ ಐದನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

“ಪಾಪು ಅವರು ನಾಡಿನ ಜ್ವಲಂತ ಸಮಸ್ಯೆಗಳಿಗೆ ಪ್ರಶ್ನೆಗಳನ್ನು ಎತ್ತಿ ಏರು ಧ್ವನಿಯಲ್ಲಿ ನಿರ್ಬಿಡೆಯಿಂದ ಪ್ರತಿರೋಧಿಸುತ್ತಿದ್ದರು. ಅತ್ಯಂತ ನಿಷ್ಠುರವಾಗಿದ್ದ ಅವರು ಎಂದೂ ನಿಷ್ಕರುಣಿಯಾಗಿರಲಿಲ್ಲ” ಎಂದು ಹೇಳಿದರು.

Advertisements

“ಕನ್ನಡ ಕಾವಲು ಸಮಿತಿ ಸದಸ್ಯರಿದ್ದಾಗ ಆಡಳಿತ ಭಾಷೆ ಕನ್ನಡವಾಗಲು ಸಾಕಷ್ಟು ಕೆಲಸ ಮಾಡಿದ್ದರು. ಅದಕ್ಕಾಗಿ ಆರು ಸಾವಿರ ಪತ್ರಗಳನ್ನು ಬರೆದಿದ್ದರು. ಹೀಗಾಗಿ ಇವರ ಖಡಕ್ ವ್ಯಕ್ತಿತ್ವಕ್ಕೆ ರಾಜಕಾರಣಿಗಳು ಸಹ ಅಂಜುತ್ತಿದ್ದರು” ಎಂದು ಹೇಳಿದರು.

ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, “ಕನ್ನಡ ಕಟ್ಟುವ ಕೆಲಸಕ್ಕಾಗಿ ಪಾಪು ಅವರು ಅತ್ಯಂತ ಬದ್ಧತೆಯಿಂದ ದುಡಿದರು. ನಾಡು ನುಡಿಯ ಏಳಿಗೆಗಾಗಿ ಕೆಲಸ ಮಾಡುವಾಗ ದೊಡ್ಡ ದೊಡ್ಡ ರಾಜಕಾರಣಿಗಳನ್ನು ಎದುರು ಹಾಕಿಕೊಂಡಂತಹ ಮಹಾನ ವ್ಯಕ್ತಿತ್ವ ಹೊಂದಿದ್ದರು. ಅವರ ದೃಡತೆ, ಬದ್ಧತೆ ಹಾಗೂ ನಿರ್ಬಿಡೆ ವ್ಯಕ್ತಿತ್ವಗಳನ್ನು ಮಾದರಿಯಾಗಿಸಿಕೊಳ್ಳಬೇಕು” ಎಂದು ಯುವಕರಿಗೆ ಸಲಹೆ ನೀಡಿದರು.

ಸತೀಶ ಎಂ.ಬಿ, ಪೃಥ್ವಿರಾಜ ಬೆಟಗೇರಿ ಹಾಗೂ ಸುಶೀಲಾ‌ ಪಾಟೀಲ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಪಾಪು ಅವರ ಪ್ರತಿಮೆಗೆ ಪುಷ್ಪಾರ್ಪಣೆ ಸಲ್ಲಿಸಲಾಯ್ತು.

ಕಾರ್ಯಕ್ರಮದಲ್ಲಿ ಬಸವರಾಜ ಪೂಜಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು.

ಈ ಸುದ್ದಿ ಓದಿದ್ದೀರಾ? ರೋಣ ಸೀಮೆಯ ಕನ್ನಡ | ಬೇ ಯವ್ವಾ ಬಾರ್ಬೆ, ಅವ್ವಕ್ಕನ ಕರ್ಕಂಡ ಬಾ, ಚಿಗವನ್ನ ಕರ್ಕಂಡ ಬಾ, ಹೊತ್ತಾತ ಬಾರ್ಬೆ ಕಡ್ಲಿ ಕೀಳಾಕ..

ಪಾಪು ಅಭಿಮಾನಿ ಬಳಗದ ಪರಿಮಳ ಜೈನ, ಉಡಚಪ್ಪ ಮಾಳಗಿ, ಶೆಟ್ಟಿ ವಿಭೂತಿ ನಾಯ್ಕ, ಸಿ.ಆರ್ ಮಾಳಗಿ, ರೇಣುಕಾ ಗುಡಿಮನಿ, ಬಸವರಾಜ ಎಸ್, ಎಸ್.ಆರ್ ಹಿರೇಮಠ, ರಮೇಶ ತಳವಾರ, ವಿಠ್ಠಲ ಗೌಳಿ, ಬಸನಗೌಡ ಎನ್. ಭರಮಗೌಡ್ರ, ಎಂ.ಕೆ ಮಕಬುಲ್, ಮಧು ನೆಗಳೂರು, ಖಲಂದರ್ ಅಲ್ಲಿಗೌಡ್ರ, ರೇಷ್ಮಾ ಅಲ್ಲಿಗೌಡ್ರ, ರಾಜೇಂದ್ರ ಹೆಗಡೆ, ಕೆ.ಆರ್ ಹಿರೇಮಠ, ಶಿಲ್ಪಾ ಎಚ್. ಗದಿಗೇರ, ತಿಪ್ಪೇಸ್ವಾಮಿ ಹೊಸಮನಿ, ಸಂಜಯಗಾಂಧಿ ಸಂಜೀವಣ್ಣನವರ, ಎಸ್.ಜಿ ಹೊನ್ನಪ್ಪನವರ, ಶಶಿಕಲಾ ಅಕ್ಕಿ, ಬಸವರಾಜ ಸಾವಕ್ಕನವರ ಇದ್ದರು. ರಾಧಾ ಎಚ್.ಎಂ ವಂದಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X