ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ) ರಾಜ್ಯ ಮಟ್ಟದ 3 ದಿನಗಳ ಅಧ್ಯಯನ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಹೇಳಿದರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
“ರಾಜ್ಯ ಸಮಿತಿ ವತಿಯಿಂದ ಮಾರ್ಚ-17,18 ಮತ್ತು 19 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪೂರದ ಅನಿಬೆಸೆಂಟ್ ಪಾರ್ಕನಲ್ಲಿ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ” ಎಂದರು.
“ಈ ಕಾರ್ಯಾಗಾರದಲ್ಲಿ ಡಿಎಸ್ಎಸ್, ದಲಿತ ಚಳುವಳಿಯ ಹಾದಿ, ಡಾ. ಬಿ.ಆರ್ ಅಂಬೇಡರ್ ಆಶಯಗಳು, ಭಾರತ ಸಂವಿಧಾನ ಹಾಗೂ ಪ್ರೋ.ಬಿ ಕೃಷ್ಣಪ್ಪನವರ ತತ್ವ-ಸಿದ್ದಾಂತಗಳು, ಮುಂದಿನ ಹೋರಾಟಗಳ ಹಾದಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅಧ್ಯಯನ ಶಿಬಿರದಲ್ಲಿ ವಿಷಯಗಳ ಚರ್ಚೆ ಜರುಗಲಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಈಬಾರಿಯ ಬಜೆಟ್ ಜಿಲ್ಲೆಯ ಜನರ ನಿರೀಕ್ಷೆ ಹುಸಿಗೊಳಿಸಿದೆ
“ಈ ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ರಾಜ್ಯ ಸಮಿತಿಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಅವರು ಅಧ್ಯಕ್ಷತೆ ವಹಿಸುವರು. ಎಲ್ಲಾ ಪದಾಧಿಕಾರಿಗಳು, ದಲಿತ ಚಳುವಳಿಯ ನೇತಾರರು, ಮುಖಂಡರು, ಗಣ್ಯರು ಆಗಮಿಸಲಿದ್ದು, ಈ ಅಧ್ಯಯನ ಶಿಬಿರಕ್ಕೆ ಜಿಲ್ಲೆಯ ದಲಿತ ಚಳುವಳಿಯ ಮುಖಂಡರು, ತಾಲ್ಲೂಕ ಸಂಚಾಲಕರು, ಗ್ರಾಮ ಸಂಚಾಲಕರು, ಮಹಿಳೆಯರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಉಡಚಪ್ಪ ಮಾಳಗಿ ಮನವಿ ಮಾಡಿದರು.
