ಲಿಡ್ಕರ್ ನಿಗಮದಿಂದ ತರಬೇತಿ ಪಡೆದ ಪಲಾನುಭವಿಗಳಿಗೆ ನಿಗಮದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಇದರಿಂದ ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲ ಆಗುತ್ತದೆ ಎಂದು ದಸಂಸ ಆಗ್ರಹಿಸಿದೆ.
ಈ ಸಂಬಂಧ ಹಾವೇರಿ ಲಿಡ್ಕರ್ ಜಿಲ್ಲಾ ಸಂಯೋಜಕರಿಗೆ ಮನವಿ ಸಲ್ಲಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಅವರ ನೇತೃತ್ವದಲ್ಲಿ ನಿಯೋಗವು ಮನವಿ ಸಲ್ಲಿಸಿದ ನಿಯೋಗವು, ಲಿಡ್ಕರ್ ನಿಗಮದಿಂದ ಸೌಲಭ್ಯಗಳನ್ನು ಒದಗಿಸಬೇಕೆಂದು ತಿಳಿಸಿದರು.
ನಗರದ ಶ್ರೀ ಹುಕ್ಕೇರಿಮಠ ಕಲ್ಯಾಣ ಮಂಟಪದಲ್ಲಿ ಚರ್ಮ ಕೈಗಾರಿಕೆ ಕೇಂದ್ರ 2022-23 ರಲ್ಲಿ ಪ್ರಾರಂಭ ಮಾಡಿ ಮುಕ್ತಾಯಗೊಳಿಸಿದ್ದು, ಸದರಿ ಪಲಾನುಭವಿಗಳಿಗೆ ಮಟರಿಯಲ್ ಹಾಗೂ ಮಶೀನಗಳನ್ನು ಕೂಡಲೇ ಇಲಾಖೆಯ ಅಧಿಕಾರಿಗಳು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಮಳೆ ಹಾನಿ : ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ಹಾನಗಲ್ ತಾಲೂಕು ಅಧ್ಯಕ್ಷರಾದ ಜಗದೀಶ್ ಉಪಸ್ಥಿತರಿದ್ದರು.
