ಹಾವೇರಿ | ಅಧಿಕೃತ ಕಟ್ಟಡ ಕಾರ್ಮಿಕರಿಗೆ ಸರರ್ಕಾರದ ಸೌಲಭ್ಯಗಳು‌ ಸಿಗಬೇಕು: ಕರವೇ ಸ್ವಾಭಿಮಾನಿ ಬಣ

Date:

Advertisements

ಹಾವೇರಿ ಜಿಲ್ಲಾದ್ಯಂತ ಅಧಿಕೃತ ಕಟ್ಟಡ ಕಾರ್ಮಿಕರಿಗೆ ಸರರ್ಕಾರದ ಸೌಲಭ್ಯಗಳು‌ ಸಮರ್ಪಕವಾಗಿ ಸಿಗಬೇಕಾದಲ್ಲಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಬೃಹತ್ ಪ್ರತಿಭಟನೆ ಪ್ರತಿಭಟನೆ ನಡೆಸಿತು.

ಹಾವೇರಿ ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಒಟ್ಟುಗೂಡಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಇಲಾಖೆ ಅಧಿಕಾರಿ ತರುಂ ಅವರಿಗೆ ಮನವಿ ಸಲ್ಲಿಸಿದರು.

ಕರವೇ ಜಿಲ್ಲಾ ಅಧ್ಯಕ್ಷರಾದ ಯಲ್ಲಪ್ಪ ಮರಾಣಿ ಮಾತನಾಡಿ, “ಹಾವೇರಿ ಜಿಲ್ಲಾದ್ಯಂತ ಸರ್ಕಾರದಿಂದ ಪರವಾನಗಿ ಪಡೆದ ಕೆಲವೊಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಇಲಾಖೆಯಿಂದ ಸಂಘ ಸಂಸ್ಥೆಗಳು ಕಲವೊಂದು ಅಧಿಕಾರಿಗಳ ಜೊತೆ ಶಾಮೀಲಾಗಿದ್ದು, ನಿಜವಾದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಾರ್ಡ್‌ಗಳನ್ನು ಮಾಡಲು ಹಣದ ಬೇಡಿಕೆಯನ್ನು ಇಟ್ಟು, ₹1000ದಿಂದ ₹15,000ದವರೆಗೆ ಲಂಚ ಪಡೆದು ಕಾರ್ಡ್‌ಗಳನ್ನು ನೀಡುತ್ತಿವೆ” ಎಂದು ಆರೋಪಿಸಿದರು.

Advertisements

“ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಮದುವೆಗೆ ಹಾಗೂ ಹೆರಿಗೆ ಭತ್ಯೆ ಮಂಜೂರು ಮಾಡಿಸಿಕೊಳ್ಳಲು ₹10000 ₹15,000ದವರೆಗೆ ಹಣ ಪಡೆದುಕೊಳ್ಳುತ್ತಿದ್ದಾರೆ. ಆದ ಕಾರಣ ತಾವುಗಳು ಈ ಅಕ್ರಮದಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮಧ್ಯವರ್ತಿ ಸಂಘ ಸಂಸ್ಥೆಗಳ ಪರವಾನಗಿಯನ್ನು ರದ್ದುಗೊಳಿಸಬೇಕು. ನಿಜವಾದ ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡಬೇಕು. ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಸರ್ಕಾರದ ಸೌಲಭ್ಯಗಳು ಕಾರ್ಮಿಕರಿಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಗೆ ಬರುವ ಅಧಿಕಾರಿಗಳಿಗೆ ನಿದೇಶನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಅಂತಹ ಅಕ್ರಮ ಎಸಗುವ ಮತ್ತು ಹಣದ ಬೇಡಿಕೆಯನ್ನು ಇಟ್ಟು ಬಡಕಾರ್ಮಿಕರಿಗೆ ತೊಂದರೆ ಕೊಡುವ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ವಿರುದ್ಧ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಕೋಲಾರ | ಸುಳ್ಳುಗಳೇ ಮೈತ್ರಿಯ ಮಾನದಂಡ: ಶಾಸಕ ಕೊತ್ತೂರು ಮಂಜುನಾಥ್

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾಬಾಯಿ ಲಮಾಣಿ, ಜಿಲ್ಲಾಪ್ರಧಾನ ಕಾರ್ಯದರ್ಶಿ ಯೊಸುವ ಸೈಕಲಗಾರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಖಲಂದರ ಎಲೆದಹಳ್ಳಿ, ಹಾವೇರಿ ತಾಲೂಕ ಮಹಿಳಾ ಅಧ್ಯಕ್ಷೆ ನಾಗಮ್ಮ ಕಾಳೇರ, ಹಾನಗಲ್‌ ತಾಲೂಕು ಮಹಿಳಾ ಅಧ್ಯಕ್ಷೆ ನೇತ್ರಾ ಕಟ್ಟಿಮನಿ, ಬ್ಯಾಡಗಿ ತಾಲೂಕು ಅಧ್ಯಕ್ಷ ಬಸವರಾಜ ಪಟ್ಟಿನಶೆಟ್ಟಿ, ದಾದಾಪೀಠ ಮಲ್ಲಾಡದ, ರಾಜಾಭಕ್ಷ ಮಾನೆಗಾರ, ಮೈಮುದ್ದಿನ ಸಾಬ ಮುಲ್ಲಾ, ಹಬೀಬ ದಾರುಗಾರ, ಚಂದ್ರಕಲಾ ಕಟ್ಟಿಮನಿ, ನೇತ್ರಾವತಿ ಕನವಳ್ಳಿ, ಮಮತಾ ಹೊನ್ನಜ್ಜಿಯವರ, ಸನ್ನಾವುಲ್ಲಾ ಪುರದಗೇರಿ, ದ್ಯಾಮಕ್ಕ ನಾಯಕರ, ಕಮಲ್ಲಮ್ಮ ಲಕಮಾಪುರ, ಹೊನ್ನುರಸಾಬ ಕೊಪ್ಪಳ, ಶರನಪ್ಪ ಲಕಮಾಪುರ, ರವಿ ಮಾಮುನಿ, ಯಲ್ಲಮ್ಮ ಹಂಚಿನಮನಿ, ನಿಂಗಮ್ಮ ಕಟ್ಟಿಮನಿ, ಶಾಂತಮ್ಮ ವಾಲ್ಮೀಕಿ ಸೇರಿದಂತೆ ಇತರೆ ಕಾರ್ಯಕರ್ತರು ಇದ್ದರು.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

ಮಂಡ್ಯ | ಹಿಂದುಳಿದ ಸಮುದಾಯದವರ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಡಾ.ಕುಮಾರ

ಸಾಮಾಜಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ಜನರಿಗೆ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್...

ಚಿಂತಾಮಣಿ | ವಿಶೇಷಚೇತನರಿಗೆ ಶೇ.5ರಷ್ಟೂ ಮೀಸಲಾಗದ ಅನುದಾನ; ಎಲ್ಲಿಯೂ ಕಾಣದ ರ್‍ಯಾಂಪ್‌ ವ್ಯವಸ್ಥೆ

ವಿಶೇಷಚೇತನರಿಗೆ ಅನುಕಂಪ ಬೇಡ. ಅವರಿಗೆ ಅವಕಾಶಗಳನ್ನು ರೂಪಿಸಿ ಎನ್ನುವುದು ಕೇವಲ ಬಾಯಿ...

Download Eedina App Android / iOS

X