“ಬ್ಯಾಡಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಅನೇಕ ವರ್ಷಗಳಿಂದ ಕಿವಿ ಮೂಗು ಹಾಗೂ ಗಂಟಲು ತಜ್ಞರಾದ ಡಾ// ಪುಟ್ಟರಾಜ ವೈದ್ಯರನ್ನ ಏಕಾ-ಏಕಿ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದು ಖಂಡನೀಯ” ಎಂದು ಕರವೇ ಗಜಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಹೇಳಿದರು.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯ daa// ಪುಟ್ಟರಾಜ ಅವರನ್ನು ವರ್ಗಾವಣೆ ಖಂಡಿಸಿ, ಮತ್ತೆ ವೈದ್ಯರನ್ನು ನಿಯೋಜನೆ ಮಾಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿ ಮಾತನಾಡಿದರು.
“ಡಾ// ಪುಟ್ಟರಾಜ ರವರು ಯಾವುದೇ ರೋಗಿಗಳಿಂದ ಪಲಾಪೆಕ್ಷವಿಲ್ಲದೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದರು ಅಂಥವರನ್ನ ಆರೋಗ್ಯ ಇಲಾಖೆ ವರ್ಗಾವಣೆ ಮಾಡಿರುವುದು ಸರಿಯಾದ ಕ್ರಮವಲ್ಲ. ಬ್ಯಾಡಗಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಉತ್ತಮ ವೈದ್ಯರು ಎಂದು ಮಾತನಾಡುತ್ತಿದ್ದಾರೆ. ಎಂದರು.
“ಉತ್ತಮ ವೈದ್ಯರನ್ನು ತಮ್ಮ ಇಲಾಖೆ ಯಾವ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬ ಸ್ಪಷ್ಟೀಕರಣ ನೀಡಬೇಕು. ಅಲ್ಲದೆ ಈಗಾಗಲೆ ವರ್ಗಾವಣೆ ಮಾಡಿರುವ ಡಾಕ್ಟರ್ ಪುಟ್ಟರಾಜರವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ, ಪುನ: ಅವರನ್ನು ಬ್ಯಾಡಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ನಿಯೋಜಿಸಬೇಕು” ಎಂದು ಒತ್ತಾಯಿಸಿದರು.
“ವೈದ್ಯರನ್ನು ನಿಯೋಜನೆ ಮಾಡದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಬ್ಯಾಡಗಿ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಎದುರು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಬಂಜಾರ ಸಮುದಾಯದ ಶ್ರೀಮತ ಸಾಹಿತ್ಯ ಕಲೆ ಸಂಸ್ಕೃತಿ ಮಾದರಿಯದು: ಪ್ರೊ. ಎಸ್. ವ್ಹಿ. ಸಂಕನೂರ
ಈ ಸಂದರ್ಬದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟಪ್ಪ ಹಿತ್ತಲಮನಿ, ಜಿಲ್ಲಾ ಉಪಾಧ್ಯಕ್ಷ ಫಕೀರೇಶ ಕಟ್ಟಿಮನಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷಣಿ ಮಮತಾ ಕಟ್ಟೆಪ್ಪನವರ, ಉತ್ತರ ಕರ್ನಾಟಕ ವಿಭಾಗದ ಸಂಚಾಲಕಿ ಸುಧಾ ಪಾಟೀಲ, ಉತ್ತರ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಗೌರಮ್ಮ ಬೆಲ್ಲದ, ಉತ್ತರ ಕರ್ನಾಟಕ ಮಹಿಳಾ ಗೌರವಾಧ್ಯಕ್ಷ ಪ್ರೇಮ ನಾರಾಯಣಸ್ವಾಮಿ ಉತ್ತರ ಕರ್ನಾಟಕದ ಮಹಿಳಾ ಕಾರ್ಯದರ್ಶಿ, ಲತಾ ಕಳ್ಳಿಹಾಳ, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷಣಿ ಲಕ್ಷ್ಮಿ ಗಂಗಮ್ಮನವರು, ಜಿಲ್ಲಾ ಕಾರ್ಯದರ್ಶಿ ಪಾರ್ವತಿ ಕುಂಬಾರ, ಬ್ಯಾಡಗಿ ತಾಲೂಕ್ ಅಧ್ಯಕ್ಷ ಪವನ್ ವಡ್ಡರ, ಶಿಗ್ಗಾವಿ ತಾಲೂಕ ಅಧ್ಯಕ್ಷ ಶೇಕಪ್ಪ ದೀಪಾವಳಿ, ಬ್ಯಾಡಗಿ ತಾಲೂಕ ಯುವ ಘಟಕದ ಅಧ್ಯಕ್ಷ ಸಂದೀಪ್ ಹಂಸಭಾವಿ, ಪೃಥ್ವಿ ಒಳಗುಂದಿ, ವಿನೋದ ಮ್ಯಾಗಲಮನಿ, ಶಶಿಕುಮಾರ್ ಚಕ್ರಸಾಲಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.