30ಕ್ಕೂ ಹೆಚ್ಚು ವರ್ಷಗಳ ಕಾಲ ಹೋರಾಟ ಮಾಡುತ್ತಾ ಬರುತ್ತಿರುವ ಒಳಮೀಸಲಾತಿ ಹೋರಾಟಗಾರರಿಗೆ ಸುಪ್ರೀಂ ಕೋರ್ಟ್ ಸಿಹಿ ಸುದ್ದಿ ನೀಡಿದೆ. ರಾಜ್ಯದಲ್ಲಿ ಸದ್ಯಕ್ಕೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದು, ಸರ್ಕಾರ ಇದರ ಕುರಿತು ಅತಿ ಶೀಘ್ರವಾಗಿ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಳಗಿ ಹೇಳಿದರು.
ಹಾವೇರಿ ನಗರದ ಪ್ರವಾಸಿ ಮಂದಿರಲ್ಲಿ ಡಿಎಸ್‌ಎಸ್ ಜಿಲ್ಲಾ ಸಮಿತಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
2012ರಿಂದ ಕಾಂಗ್ರೆಸ್ ಬಹಿರಂಗವಾದ ರೀತಿಯಲ್ಲಿ ಒಳಮಿಸಲಾತಿ ವರ್ಗೀಕರಣದ ಪರವಾಗಿ ತನ್ನ ಧ್ವನಿಯನ್ನು ಸಿದ್ದರಾಮಯ್ಯನವರ ಮುಖಾಂತರ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಮುಖಾಂತರ ಹಾಗೂ ಮುಂಚೂಣಿ ನಾಯಕರು ಈ ಕುರಿತು ಭರವಸೆ ನೀಡುತ್ತಲೇ ಬಂದಿದ್ದಾರೆ. ನ್ಯಾಯಮೂರ್ತಿ ಸದಾಶಿವ ಅವರ ಆಯೋಗದ ವರದಿಯ ಹಿನ್ನೆಲೆಯಲ್ಲಿ ವರ್ಗೀಕರಣವನ್ನು ಜಾರಿಗೊಳಿಸಬೇಕಾಗಿದೆ. ರಾಜ್ಯ ಸರ್ಕಾರ ಈ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಶೀಘ್ರಗತಿಯಲ್ಲಿ ತೀರ್ಮಾನ ಕೈಗೊಳ್ಳುವಲ್ಲಿ ಕಾರ್ಯಪ್ರವೃತ್ತವಾಗಬೇಕು. 30 ವರ್ಷದಿಂದ ಒಳ ಮೀಸಲಾತಿ ಹೋರಾಟವನ್ನು ನಡೆಸಿಕೊಂಡು ಬೀದಿಗೆ ಬಂದವರು ಕೂಲಿಕಾರರು, ಚರ್ಮಕಾರರು, ಪೌರಕಾರ್ಮಿಕರು ಅತ್ಯಂತ ಕೆಳಸ್ಥರದ ಅನಕ್ಷರಸ್ಥರು ಬಡತನದಲ್ಲಿರುವ ಜನರು ಬೀದಿ ಹೋರಾಟವನ್ನು ಮಾಡುವ ಮೂಲಕ ಒಳಮೀಸಲಾತಿಯ ಹೋರಾಟ ಒಂದು ಹಂತಕ್ಕೆ ಮುಟ್ಟಲು ಕಾರಣೀಭೂತರಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಡಿಸಿಎಂ ಡಿಕೆ ಶಿವಕುಮಾರ ಅವರು ಒಳಮಿಸಲಾತಿಯ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಂಡು ನಮ್ಮ ಸಮುದಾಯಗಳಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು ಎಂದು ಉಡಚಪ್ಪ ಮಳಗಿ ತಿಳಿಸಿದರು.
ನ್ಯಾಯ ಕೊಡಿಸುವ ಪ್ರಯತ್ನ ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಬಹುದೊಡ್ಡ ನಷ್ಟವನ್ನು ಅನುಭವಿಸಿದರೂ ಆಶ್ಚರ್ಯವಿಲ್ಲ. ರಾಜ್ಯ ಮಟ್ಟದಲ್ಲಿ ಹಲವಾರು ತೀರ್ಮಾನಗಳು ಆಗಲಿವೆ. ನ್ಯಾಯಕ್ಕಾಗಿ ನಾವೆಲ್ಲರೂ ಮತ್ತೆ ಹೋರಾಟಕ್ಕೆ ಸಜ್ಜಾಗಬೇಕು ಎಂದು ಉಡಚಪ್ಪ ಮಾಳಗಿ ಹೇಳಿದರು.
ಡಿಎಸ್‌ಎಸ್ ಪದಾಧಿಕಾರಿಗಳಿಗೆ ಆದೇಶ ಪ್ರತಿ ನೀಡಿ,ಗುರುತಿನ ಚೀಟಿ ವಿತರಣೆ ಮಾಡಿ ಸಂಘಟನೆಗೆ ಸಜ್ಜಾಗುವಂತೆ ಜಿಲ್ಲಾ ಡಿಎಸ್‌ಎಸ್ ಸಂಚಾಲಕರಾದ ಮಂಜಪ್ಪ ಮರೋಳ ಅವರು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಫುಟ್ಬಾಲ್ ಪಂದ್ಯದ ದ್ವೇಷ; ವಿದ್ಯಾರ್ಥಿಗಳನ್ನು ಅಪಹರಣಗೈದು ಅರೆನಗ್ನಗೊಳಿಸಿ ಹಲ್ಲೆ; ಇಬ್ಬರ ಬಂಧನ
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವೈ. ಎನ್. ಮಾಸೂರ, ಕಲಾವಿದ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ ಕಾಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೇಣುಕಾ ಬಡಕಣ್ಣವರ, ಮುಖಂಡರಾದ ಜಗದೀಶ ಹರಿಜನ, ಹನುಮಂತ ಹೌಸಿ, ಶಂಬಣ್ಣ ದಿವಟರ, ಬಸವಣ್ಣೆಪ್ಪ ಹಳ್ಳಳ್ಳಿ, ರಾಜೀವ ಕರಿಯಣ್ಣವರ, ಮಂಜಪ್ಪ ದೊಡ್ಡಮರಿಮ್ಮನವರ, ಮಾಲತೇಶ ಡಿ ಮೈಲಾರ, ಗೀತಾ ಶೀಡೆನೂರ, ಗಿರಿಜಮ್ಮ ಮೇಗಳಮನಿ, ಅನ್ನಪೂರ್ಣ ವಡ್ಡಟ್ಟಿ, ಲಲಿತವ್ವ ಬಡಕಣ್ಣವರ, ಸುಮಂಗಲ ಕೃಷ್ಣಾಪುರ, ಅಶೋಕ ದೊಡ್ಡಮನಿ, ಮಂಜಪ್ಪ ದಾನಮ್ಮನವರ, ಮಾಯವ್ವ ಶೀಡೆನೂರ, ರತ್ನವ್ವ ಶೀಡೆನೂರ, ಕಾವ್ಯ, ರೇಣುಕಾ, ನಾಗವ್ವ ಶೀಡೆನೂರ, ರೂಪಾ,ಮಾಲತೇಶ ಮೈಲಾರ,ಕಿರಣ ಭಜಂತ್ರಿ, ಬಸವರಾಜ ದಾನಮ್ಮನವರ ಮತ್ತಿತರರಿದ್ದರು.
