ರಾಷ್ಟೀಯ ಹೆದ್ದಾರಿ ಸಾರ್ವಜನಿಕರಿಗೆ ಮತ್ತು ರೈತರಿಗೆ ಹೆಚ್ಚಿನ ಹಣ ವಸೂಲಿ ಮಾಡಿ ಸವಾರರಿಗೆ ಕಿರಿ ಕಿರಿ ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಯಾವುದೇ ಕಾರಣಕ್ಕೂ ಟೋಲ್ ನಾಕದಲ್ಲಿ ವಸೂಲಿ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಅಧ್ಯಕ್ಷ ಹಣಮಂತಪ್ಪ ಕಬ್ಬಾರ ಅಸಮಾಧಾನ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ರಾಷ್ಟೀಯ ಹೆದ್ದಾರಿ ಸಾರ್ವಜನಿಕರು ಮತ್ತು ರೈತರಿಂದ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘವು ಹೆದ್ದಾರಿ ಬಂದ್ ಮಾಡಿ ಮಾತನಾಡಿದರು.
“ಠಾಣೇಬೆನ್ನೂರು ತಾಲ್ಲೂಕ ಚಳಗೇರಿ ಗ್ರಾಮ ಪಂಚಾಯತ ಮತ್ತು ಶಿಗ್ಗಾಂವ ತಾಲೂಕ ಬಂಕಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಟೋಲ್ನಾಕ ನಿರ್ಮಾಣವಾಗಿದ್ದು ಈಗಾಗಲೇ ನಾಲ್ಕೈದು ತಿಂಗಳಿಂದ ಸ್ಥಳೀಯ ಸಾರ್ವಜನಿಕರು ಹಾಗೂ ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ವಸೂಲಿಯನ್ನು ಬಿಡಬೇಕು” ಎಂದರು.
“ಇನ್ನೂ ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ರಸ್ತೆ ಸರಿಪಡಿಸುವವರೆಗೂ ಯಾವುದೇ ಕಾರಣಕ್ಕೂ ಟೋಲ್ ಫೀ ವಸೂಲಿ ಮಾಡಬಾರದು. ಟೋಲ್ ನಾಕಾದಲ್ಲಿ ಸಾರ್ವಜನಿಕರಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ರಾಷ್ಟೀಯ ಹೆದ್ದಾರಿ ಸಂಬಂಧಪಟ್ಟ ನಿಯಮಾವಳಿಗಳ ಪ್ರಕಾರ ಸ್ಥಳೀಯ ಸಾರ್ವಜನಿಕರಿಗೂ ಮತ್ತು ರೈತರಿಗೂ ಹಣ ವಸೂಲಿ ಮಾಡುವಂತಿಲ್ಲ. ಆದರೆ ಹಣ ವಸೂಲಿ ಮಾಡುವುದರ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಇದು ನಿಲ್ಲಬೇಕು” ಎಂದು ಒತ್ತಾಯಿಸಿದರು.
“ಒಂದು ವೇಳೆ ಸರಿಪಡಿಸದಿದ್ದರೆ ಅಹೋರಾತ್ರಿ ಧರಣಿ ಮಾಡಲಾಗುವುದು” ಎಂದು ಹಣಮಂತಪ್ಪ ಕಬ್ಬಾರ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸೌಹಾರ್ದತೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ಸಾಧ್ಯ : ಬಾ.ಹ.ರಮಾಕುಮಾರಿ
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಕರ್ತರು, ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.