ಬಡವರ ಹಸಿವನ್ನು ನೀಗಿಸುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಎರಡು ವರ್ಷಗಳಿಂದ ಆಮೆಗತಿ ಯಲ್ಲಿ ಸಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿಯ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿಯ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಇರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಳ್ಳದೆ ಆಮೆಗತಿಯಲ್ಲಿ ಕಾಮಗಾರಿ ಒಂದುವರೆ ವರ್ಷದ ಹಿಂದಿನಿಂದ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದವರ, ನಿರ್ಗತಿಕರ ಹಸಿವನ್ನು ನಿಗಿಸಬೇಕಿದ್ದ ಇಂದಿರಾ ಕ್ಯಾಂಟೀನ್ ಆಮೆಗತಿಯಲ್ಲಿ ಸಾಗಿದ್ದು, ಉದ್ಘಾಟನೆಗೊಳ್ಳದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ.
ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ, ಆಟೋ ಚಾಲಕರಿಗೆ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಬಡವರ ಹಸಿವನ್ನು ನೀಗಿಸುವ ಸಲುವಾಗಿ ಕಡಿಮೆ ಹಣದಲ್ಲಿ ಹೊಟ್ಟೆತುಂಬಾ ಊಟ ಮಾಡಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಆದರೆ ಇಲ್ಲೊಂದು ಇಂದಿರಾ ಕ್ಯಾಂಟೀನ್ ಕಾಮಗಾರಿ ನಿದಾನ ಗತಿಯಲ್ಲಿ ಸಾಗಿದ್ದು, ಕುಡುಕರ ಅಡ್ಡವಾಗುತ್ತಿದೆ.
ಶಿಗ್ಗಾವಿ ಪಟ್ಟಣಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ಕೂಲಿ ಕಾರ್ಮಿಕರು, ರೈತರು, ಶಾಲೆ-ಕಾಲೇಜಿಗೆ ಬರುವ ವಿದ್ಯಾರ್ಥಿಗಳು, ಆಟೋ ಚಾಲಕರು ಹೀಗೆ ಬೇರೆ ಬೇರೆ ದುಡಿಯುವ ವರ್ಗದವರು ಹೀಗೆ ಎಲ್ಲರನ್ನು ಕೇಂದ್ರೀಕರಿಸುವ ಬಸ್ ನಿಲ್ದಾಣದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಇದೆ. ಹೆಚ್ಚು ವಹಿವಾಟು ನಡೆಯುವ, ಹೆಚ್ಚು ಜನರು ಸೇರುವ ಸ್ಥಳವೂ ಆಗಿದೆ. ಹೀಗೆ ಪಟ್ಟಣಕ್ಕೆ ಬರುವ ಜನರ ಹಸಿವನ್ನು ನಿಗಿಸಬೇಕಿದ್ದ ಇಂದಿರಾ ಕ್ಯಾಂಟೀನ್ ಕುಡುಕರ ಅಡ್ಡವಾಗುತ್ತಿದೆ.
ಕುಡುಕರು ರಾತ್ರಿ ಹೊತ್ತಾದರೆ, ಇಂದಿರಾ ಕ್ಯಾಂಟೀನ್ ಗೆ ಬಂದು ಕುಡಿಯುವ ಕುಡುಕರು ಸಾರಾಯಿ ಬಾಟಲಿ, ನೀರಿನ ಪೌಚುಗಳು, ಸಿಗರೇಟು ಎಸೆದು ಹೋಗುತ್ತಾರೆ. ಇದರಿಂದ ಕ್ಯಾಂಟೀನ್ ಗಬ್ಬುನಾತ ಬೀರುತ್ತಿದೆ. ಸುತ್ತ-ಮುತ್ತಲೂ ಪ್ಲಾಸ್ಟಿಕ್ ಹಾಳೆ, ಕಸದ ರಾಶಿ, ಗಿಡ ಗಂಟಿ ಬೆಳೆದಿದೆ. ಇಂದಿರಾ ಕ್ಯಾಂಟೀನ್ ಕಿಡಕಿಗಳು ಅಲ್ಲಲ್ಲಿ ಒಡೆದಿವೆ.
ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಕಕ್ಯಾಂಟೀನ್ ಪಕ್ಕದಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಶೌಚಾಲಯವಾಗಿ ಮಾರ್ಪಡುತ್ತಿದೆ. ಇಲ್ಲಿಯ ಅಧಿಕಾರಿಗಳ, ಜನಪ್ರತಿನಿದಿಗಳ ನಿರ್ಲಕ್ಷ ದೋರಣೆಯಿಂದ ಇಂದಿರಾ ಕ್ಯಾಂಟೀನ್ ಹೀಗಾಗಿದೆ. ಇಂದಿರಾ ಕ್ಯಾಂಟೀನ್ ಆರಂಭವಾದರೆ ಎಷ್ಟೋ ಜನರ ಹಸಿವನ್ನು ನೀಗಿಸುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಈದಿನ.ಕಾಮ್ ಜೊತೆಗೆ ಕಾಲೇಜು ವಿದ್ಯಾರ್ಥಿನಿ ಸುಲೋಚನಾ ಮಾತನಾಡಿ, “ನಾವು ಹಳ್ಳಿಗಳಳಿಂದ ಕಾಲೇಜಿಗೆ ಬರ್ತಿವಿ. ಮದ್ಯಾನದ ಹೊತ್ತಿಗೆ ಹಸಿವು ಆಗಿದ್ರು, ಹೋಟೆಲುಗಳಿಗೆ ಹೋಗಿ ತಊಟ ಮಾಡೋಕೆ ಆಗಲ್ಲ. ಇಂದಿರಾ ಕ್ಯಾಂಟೀನ್ ಆರಂಭ ಆದ್ರ ಹಸಿವಿನಿಂದ ಬರೋ ನಮ್ಮಂತ ವಿದ್ಯಾರ್ಥಿಗಳು ಕಡಿಮೆ ಹಣದಲ್ಲಿ ಹೊಟ್ಟೆ ತುಂಬಾ ಊಟಮಾಡ್ತೀವಿ” ಎಂದು ಹೇಳಿದಳು.
ಈದಿನ.ಕಾಮ್ ನೊಂದಿಗೆ ಸಮತಾ ಸೈನಿಕ ದಳ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷರು ಧರ್ಮೇದ್ರ ಓಲೇಕಾರ್ ಮಾತನಾಡಿ, “ಬಡವರಿಗೆ, ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಎಲ್ಲ ವರ್ಗದವರಿಗೆ ಕಡಿಮೆ ವೆಚ್ಚದಲ್ಲಿ ಹಸಿವನ್ನು ನಿಗಿಸಿಕೊಳ್ಳಲು ಸಹಾಯವಾಗುತ್ತದೆ. ಆ ದೃಷ್ಟಿಯಿಂದ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೊಳಿಸಲಾಗಿದೆ.ಇಲ್ಲಿಯ ಜನಪ್ರತಿನಿದಿನಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದಿರಾ ಕ್ಯಾಂಟೀನ್ ಆರಂಭವಾಗದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಕೂಡಲೇ ಇಂದಿರಾ ಕ್ಯಾಂಟೀನ್ ಆರಂಭಿಸಿದರೆ ಬಡವರ ಅನುಕೂಲವಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಒತ್ತಾಯಿಸಿದ ಶಿಕ್ಷಕರಿಗೆ ನೋಟಿಸ್!
ಶಿಗ್ಗಾವಿ ಪುರಸಭೆ ಮುಖ್ಯಧಿಕಾರಿ ಮಲ್ಲೇಶ ಅವರಿಗೆ ಈದಿನ.ಕಾಮ್ ಫೋನ್ ಮೂಲಕ ಎರಡು ಮೂರು ಸಲ ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.
ಸ್ಥಳೀಯ ಶಾಸಕರು, ಅಧಿಕಾರಿಗಳು ರೋಣ ಪಟ್ಟಣದ ಇಂದಿರಾ ಕ್ಯಾಂಟೀನ್‌ನಲ್ಲಿ ನಡೆಯಿತ್ತಿರುವ ಅನೈತಿಕ ಚಟುವಟಿಕೆಗಳನ್ನು ನಿಲ್ಲಿಸಿ, ಶ್ರಮಿಕ ವರ್ಗದವರ ಹಸಿವನ್ನು ನೀಗಿಸಲು ಶೀಘ್ರದಲ್ಲಿಯೇ ಇಂದಿರಾ ಕ್ಯಾಂಟೀನ್ ಆರಂಭಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.