“ಸರಕಾರಿ ಉದ್ಯೋಗಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರದ 3ನೇ ಬ್ಯಾಚ್ ಶೀಘ್ರ ಆರಂಭವಾಗುತ್ತಿದ್ದು, ಆಸಕ್ತರು ಸಂಪರ್ಕಿಸಬಹುದು” ಎಂದು ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನಾ ಸಂಸ್ಥೆಯ ಸಂಸ್ಥಾಪಕಿ ಸ್ವಾತಿ ಮಾಳಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
“ಶಾಸಕ ಶ್ರೀನಿವಾಸ ಮಾನೆ ಅವರ ಸಾರಥ್ಯದಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನಾ ಕೇಂದ್ರದಲ್ಲಿ ಪರಿವರ್ತನಾ ಕಲಿಕಾ ಕೇಂದ್ರದಿಂದ ಈಗಾಗಲೇ ಎರಡು ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗಿದೆ. ಅಲ್ಲದೆ, ಇದರೊಂದಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ, ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ, ಸ್ಪೋಕನ್ ಇಂಗ್ಲಿಷ್ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅಣ್ಣ ತಮ್ಮಂದಿರ ನಡುವಿನ ಜಗಳ ಕೊಲೆಯಲ್ಲಿ…
“ಅಕ್ಟೋಬರ್ ಎರಡನೆ ವಾರದಲ್ಲಿ ಐಎಎಸ್, ಕೆಎಎಸ್, ಪಿಎಸ್‌ಐ ಸೇರಿದಂತೆ ಸರಕಾರಿ ಉದ್ಯೋಗಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಆರಂಭಿಸುತ್ತಿದ್ದು, ಆಸಕ್ತರು, ಪರಿವರ್ತನಾ ಕಲಿಕಾ ಕೇಂದ್ರ, ಗುರುಭವನ ಹಾನಗಲ್ ಭೇಟಿ ನೀಡಿ. ಅಥವಾ ಗಿರೀಶ್ ಮೊ. 6361154867 ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ” ಎಂದು ಸ್ವಾತಿ ಮಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
