ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಅಪರೇಟರ್ ಚೋಳ್ಳಪ್ಪ ( DO ) ಅವರ ಕೆಲಸದಿಂದ ವಜಾಗೊಳಿಸಬೇಕು ಎಂದು ಶಾಸಕ ಯು ಬಿ ಬಣಕಾರ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕರ ವಿಭಾಗದ ವತಿಯಿಂದ ಆರೋಪಿಸಿ, ಮನವಿ ಸಲ್ಲಿಸಿದರು.
ಚೋಳಪ್ಪ ನೈಜ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಹಣ ಆಮಿಷಕ್ಕೆ ನಕಲಿ ಕಾರ್ಮಿಕ ಕಾರ್ಡ್ ನೀಡುತ್ತಿದ್ದಾರೆ. ನೈಜ ಫಲಾನುಭಾವಿಗಳಿಗಾಗಿ ಬಂದಿರುವ ಕಿಟ್ ಗಳನ್ನು ನಕಲಿ ಕಾರ್ಮಿಕರಿಂದ ಹಣ ಪಡೆದು ಕಾರ್ಮಿಕ ಸೌಲಭ್ಯ ಒದಗಿಸುವ ಆಸೆ ತೋರಿಸುತ್ತಾರೆ. ಹಿರೇಕೆರೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕರು ನಕಲಿ ಕಾರ್ಮಿಕ ಕಾರ್ಡನ್ನು ಪಡೆದಿದ್ದು, ಸ್ವತಃ ಡಾಟಾ ಅಪರೇಟರ್ ಆನ್ ಲೈನ್ ಅರ್ಜಿಯನ್ನು ಹಾಕಿಸಿ ಅನೋಮೋದನೆ ಮಾಡಿತ್ತಾರೆ.
ಇದನ್ನು ಓದಿದ್ದೀರಾ? ಹಾವೇರಿ | ಹಣ ಕಟ್ಟಿಸಿಕೊಂಡು, ಬಡವರಿಗೆ ನಿವೇಶನ ನೀಡಿಲ್ಲ: ಕರವೇ ಗಜಪಡೆ ಆರೋಪ
ನೈಜ ಕಾರ್ಮಿಕರು ಕಾರ್ಮೀಕ ಕಛೇರಿಗೆ ಹೋದರೆ ಅವರಿಗೆ ಸರಿಯಾಗಿ ಸ್ಪಂದನೆ ಕೊಡುವುದಿಲ್ಲ. ಆದ್ದರಿಂದ ಡಾಟಾ ಅಪರೇಟರ್ ಚೋಳಪ್ಪ ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು. ವಜಾಗೊಳಿಸದಿದ್ದರೆ; ಪಟ್ಟಣದ ಎಲ್ಲಾ ಕಟ್ಟಡ ಕಾರ್ಮಿಕರ ಸಂಘಟನೆಯ ಒಕ್ಕೂಟದಿಂದ ಬೃಹತ್ ಪ್ರತಿಭಟನೆಯನ್ನು ಮಾಡಾಲಾಗುವುದು ಎಂದು ಆಗ್ರಹಿಸಿದರು.