“ಕನ್ನಡ ಭಾಷೆ ಬೆಳೆದರೆ ಮಾತ್ರ ಕನ್ನಡ ಸಾಹಿತ್ಯ ಬೆಳೆಯಲು ಸಾಧ್ಯ. ಕವಿಗಳಿಗೆ ನಿರಂತರವಾದ ಅಭ್ಯಾಸ ಬೇಕು. ಅಂದಾಗ ಮಾತ್ರ ಭಾವ ಜಗತ್ತಿನ ಕಾವ್ಯ ಸೃಷ್ಟಿಸಲು ಸಾಧ್ಯ” ಲೇಖಕ ಕೋರಗಲ್ ವಿರೂಪಾಕ್ಷಪ್ಪ ಹೇಳಿದರು.
ಹಾವೇರಿ ಪಟ್ಟಣದ ಹೊರವಲಯದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾಧರ ನಂದಿ ಸಾಹಿತ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಹಾವೇರಿ ಹೋಬಳಿ ಘಟಕ’ದ ಉದ್ಘಾಟನಾ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಅನೇಕ ಯುವ ಕವಿಗಳ ಅಶ್ಲೀಲ ಕವಿತೆಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ವಿಕಾರ ಭಾವವನ್ನು ಹುಟ್ಟಿಸುವ ಇಂತಹ ಕಾವ್ಯ ಸಲ್ಲದು”ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ‘ಸಾಹಿತ್ಯ ಭವನದ ನಿರ್ಮಾಣ ಕೆಲಸ ನಡೆಯುತ್ತಿದ್ದು, ಅಲ್ಲಿ ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆಗಳು ನಡೆಯಲಿವೆ’ ಎಂದರು.
ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ ಗೀತಾ ಸುತ್ತಕೋಟಿ, ಕಾರ್ಯದರ್ಶಿಯಾಗಿ ನಾಗರಾಜ ಹುಡೇದ, ಕೋಶಾಧ್ಯಕ್ಷರಾಗಿ ರಾಜೇಂದ್ರ ಹೆಗಡೆ, ಸದಸ್ಯರಾಗಿ ಎಚ್.ಆರ್. ಹೊಸಮನಿ, ಚಂದ್ರಪ್ಪ ಸನದಿ, ಎಸ್.ವಿ. ಬಾರ್ಕಿ, ರಾಜಾಭಕ್ಷ ಹಾಗೂ ಅನಿತಾ ಟಿ.ಎಸ್. ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡರು.
ಕವಿಗೋಷ್ಠಿಯಲ್ಲಿ ಸಿ.ಎಸ್. ಮರಳಿಹಳ್ಳಿ, ಕೆ.ಆರ್. ಹಿರೇಮಠ, ಜುಬೇದಾ ನಾಯಕ್, ಶಿವಯೋಗಿ ಚರಂತಿಮಠ, ಅರುಣ ಬಂಕಾಪೂರ, ಮಣಿಕಂಠ ಗೊದಮನಿ, ಅಕ್ಕಮಹಾದೇವಿ ನೀರಲಗಿ, ನೀಲಕಂಠಯ್ಯ ಓದಿಸೋಮಠ, ಗುಡ್ಡಪ್ಪ ಚಟ್ರಮ್ಮನವರ, ಶಶಿಕಲಾ ಅಕ್ಕಿ, ಸುರೇಖಾ ನೇರಳಿಕರ, ಮೇಘನಾ ಟಿ.ಎಸ್., ಅಕ್ಕಮಹಾದೇವಿ ಹಾನಗಲ್ಲ, ನೇತ್ರಾ ಅಂಗಡಿ, ಭಾರತಿ ಯಾವಗಲ್, ರೇಣುಕಾ ಗುಡಿಮನಿ, ಶಿವರಾಜ ಅರಳಿ, ಜಯಶ್ರೀ ಬುಡಪನಹಳ್ಳಿ, ಎಸ್.ವ್ಹಿ. ಬಾರ್ಕಿ ಹಾಗೂ ಜ್ಯೋತಿ ಬಿಶೆಟ್ಟಿಯವರ ಕವನ ವಾಚಿಸಿದರು.
ಸಾಹಿತಿ ಸತೀಶ ಕುಲಕರ್ಣಿ, ಹನುಮಂತಗೌಡ ಗೊಲ್ಲರ, ವೈ.ಬಿ. ಆಲದಕಟ್ಟಿ, ಎಸ್.ಎನ್. ದೊಡ್ಡಗೌಡರ ಇದ್ದರು.
