ಬಂಕಾಪುರ ಪಟ್ಟಣಕ್ಕೆ ದಿನ ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ಕೆಂದ್ರ ಬಸ್ಸ ನಿಲ್ದಾಣ ಅವ್ಯವಸ್ಥೆಯನ್ನು ನೊಡಿ ಸಂಬಂಧಿಸಿದ ಇಲಾಖೆಗೆ ಹಿಡಿ ಶಾಪ ಹಾಕುತ್ತಿರುವದು ನಾಚಿಕೆಗೇಡಿನ ಸಂಗತಿ. ಬಸ್ಸ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು, ಕುಳಿತುಕೊಳ್ಳಲು ಸುಸಜ್ಜಿತ ಆಸನಗಳು ಇಲ್ಲದೆ ಪ್ರಯಾಣಿಕರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಬಸ್ ನಿಲ್ದಾಣಕ್ಕೆ ಮೂಲಭೂತ ಸೌಕರ್ಯ ಒದಗಿಸಬೇಕು. ಕರವೇ ಗಜಸೇನೆ ಬಂಕಾಪುರ ಶಹರ ಘಟಕ ಅಧ್ಯಕ್ಷ ಶೇಖಪ್ಪ ದೀಪಾವಳಿ ಆಗ್ರಹಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ಕಾರವಾರ-ಇಳಕಲ್ಲ ರಾಜ್ಯ ಹೆದ್ದಾರಿ ರಸ್ತೆ ತಡೆದು ಬೃಹತ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕರವೇ ಗಜಸೇನೆ ಶಹರ ಉಪಾಧ್ಯಕ ಶಿವು ಕಮ್ಮಾರ ಮಾತನಾಡಿ, “ಬಸ್ಸ ನಿಲ್ದಾಣದಲ್ಲಿ ಹಲವಾರು ಬಾರಿ ಪ್ರಯಾಣಿಕರ ಚಿನ್ನಾಬರಣ, ಮೊಬೈಲ ಫೋನ್, ಬ್ಯಾಗುಗಳು ಹಾಡುಹಗಲೇ ಕಳ್ಳತನ ಆಗಿದ್ದು, ಇದುವರೆಗೂ ದರೋಡೆಕೋರರನ್ನು ಪತ್ತೆಹಚ್ಚಲು ಆಗಿಲ್ಲ. ಇದಕ್ಕೆ ಕಾರಣ ಬಸ್ಸ ನಿಲ್ದಾಣದಲ್ಲಿ ಸಿ ಸಿ ಟಿವಿ ಅಳವಡಿಸದೆ ಇರುವುದದ್ದರಿಂದ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ” ಎಂದರು.
ಬಸ್ಸ ನಿಲ್ದಾಣದಲ್ಲಿ ಬಸ್ಸುಗಳ ವೇಳಾಪಟ್ಟಿ ಹಾಗೂ ಧ್ವನಿ ವರ್ಧಕ ಅಳವಡಿಸದೆ ಇರುವುದರಿಂದ ಅನಕ್ಷರಸ್ಥ ಪ್ರಯಾಣಿಕರು ಪರದಾಡುವಂತೆ ಆಗಿದೆ. ಬಸ್ಸ ನಿಲ್ದಾಣದ ಆವರಣದಲ್ಲಿ ದ್ವಿಚಕ್ರ ವಾಹನದ ನಿಗದಿತ ಸ್ಥಳ ಇಲ್ಲದೆ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದಾರೆ. ಇದು ಕಂಡರೂ ಜಾಣ ಕುರುಡರಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸರಿಯಾದ ಬಸ್ಸುಗಳ ವ್ಯವಸ್ಥೆ ಇಲ್ಲದೆ ದಿನ ನಿತ್ಯ ಪರದಾಡುವಂತೆ ಆಗಿದೆ. ವಿದ್ಯಾರ್ಥಿಗಳಿಗೆ ಪ್ರಯಾಣಿಕರ ಅನಕೂಲಕ್ಕಾಗಿ ಹೆಚ್ಚುವರಿಯಾಗಿ ಬಸ್ಸ ಸಂಚರಿಸಲು ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ತರಾಟೆಗೆ ಒತ್ತಾಯಿಸಿದರು.
ಕರವೇ ಗಜಸೇನೆ ತಾಲ್ಲೂಕು ಅಧ್ಯಕ್ಷ ದ್ಯಾಮಣ್ಣ ಮಲ್ಲಾಡದ ಮಾತನಾಡಿ, “ಕೂಡಲೆ ಬಂಕಾಪುರ ಬಸ್ಸ ನಿಲ್ದಾಣಕ್ಕೆ ಅವಶ್ಯವಿರುವ ಸಿ ಸಿ ಟಿ ವಿ. ಪ್ರಯಾಣಿಕರು ಕುಳಿತುಕೊಳ್ಳಲು ಹೆಚ್ಚುವರಿ ಆಸನಗಳು, ಧ್ವನಿರ್ವದಕ, ಆಳವಡಿಸಬೇಕು ಶೌಚಾಲಯಗಳನ್ನು ಸ್ವಚ್ಚತವಾಗಿಡಲು ಸೂಚಿಸಬೇಕು. ದ್ವಿಚಕ್ರ ವಾಹನಗಳನ್ನು ನಿಲ್ಲಿಸಲೂ ಸೂಕ್ತ ವ್ಯವಸ್ಥೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಎಂಟು ದಿನಗಳೊಳಗೆ ಇಡೆರಿಸಬೇಕು. ಇಲ್ಲವಾದರೆ ಬಸ್ ನಿಲ್ದಾಣದ ಆವರಣದಲ್ಲಿ ಅಹೋರಾತ್ರಿ ಧರಣಿ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ ಸವಣೂರ ಪ್ರಭಾರ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡ್ರ ಮಾತನಾಡಿ, ಕೂಡಲೇ ಬಸ್ ನಿಲ್ದಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಹಲ್ಲೆಗೋಳಗಾದ ದಲಿತ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಿ : ಗೋಪಾಲ ಕಟ್ಟಿಮನಿ
ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಮಂಜುನಾಥ ಓಲೇಕಾರ, ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟಪ್ಪ ಹಿತ್ತಲಮನಿ, ಜಿಲ್ಲಾ ಉಪಾಧ್ಯಕ್ಷ ಫಕ್ಕೀರೇಶ ಕಟ್ಟಿಮನಿ, ಸುಭಾನಿ ಹಿತ್ತಲಮನಿ, ಜಿಲ್ಲಾ ಸಂಘಟನಾ ಸಂಚಾಲಕ ಮಾಲತೇಶ ಜಿ.ಕೆ. ರಾಣೇಬೆನ್ನೂರ ತಾಲ್ಲೂಕು ಅಧ್ಯಕ್ಷ ಕುಮಾರ ಸುಳ್ಳನವರ, ಬ್ಯಾಡಗಿ ತಾಲ್ಲೂಕು ಅಧ್ಯಕ್ಷ ಪವನ ವಡ್ಡರ, ಹಾವೇರಿ ತಾಲ್ಲೂಕು ಅಧ್ಯಕ್ಷ ಜಗದೀಶ ಮಲ್ಲಾಡದ, ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ರೇವಣಶೆ ಸುಂಕಾಪೂರ, ಶಿಗ್ಗಾವಿ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಆನಂದ ವಾಲ್ಮೀಕಿ, ಬ್ಯಾಡಗಿ ತಾಲ್ಲೂಕು ಉಪಾಧ್ಯಕ್ಷ ಪ್ರವೀಣ ಶಿಲ್ಪಿ, ಶಿಗ್ಗಾವಿ ತಾಲ್ಲೂಕು ಸಂಚಾಲಕ ಮಂಜುನಾಥ ನೆಲ್ಲಿಕೊಪ್ಪ. ಲಿಂಗಾರಜ ಪವಾಡಿ, ಸುನೀಲ ದೇವಸೂರ, ಮಣಿಕಂಠ ಸವೂರ, ಶರಣಪ್ಪ ಅಂಗಡಿ, ಸಿದ್ದು ಯಲಗಚ್ಚ ಇನ್ನೂ ಅನೇಕರು ಉಪಸ್ಥಿತರಿದ್ದರು.