“ಉಗ್ರರ ಗುಂಡೇಟಿಗೆ ಬಲಿಯಾದ ಕುಟುಂಬದವರಿಗೆ ಕೇಂದ್ರ ಸರಕಾರ ಕೂಡಲೆ ಆ ಕುಟುಂಬದ ಒಬ್ಬ ಸದಸ್ಯರಿಗೆ ಕೇಂದ್ರ ಸರಕಾರದ ನೌಕರರನ್ನಾಗಿ ಘೋಷಣೆ ಮಾಡಬೇಕು” ಎಂದು ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷರು ಯಲ್ಲಪ್ಪ ಮರಾಠೆ ಒತ್ತಾಯಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತಡಸ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ಪಹಲ್ಗಾಮ್ ಪ್ರವಾಸಕ್ಕೆ ಹೋದವರನ್ನು ಉಗ್ರಗಾಮಿಗಳು 26 ಜನ ಭಾರತೀಯರನ್ನು ಹತ್ತೆಗೈದವರನ್ನು ಖಂಡಿಸಿ ಅರಬೆತ್ತಲೆ ಸ್ಪಂಜಿನ ಮೆರವಣಿಗೆ ಮಾಡಲಾಯಿತು.
ನಂತರ ಶಿಗ್ಗಾಂವಿ ತಾಲೂಕ ದಂಡಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಮಾತನಾಡಿದರು.
“ಉಗ್ರರ ಗುಂಡೇಟಿಗೆ ಬಲಿಯಾದ ಆಯಾ ರಾಜ್ಯದ ಪ್ರವಾಸಕ್ಕೆ ಕುಟುಂಬದವರಿಗೆ ರಾಜ್ಯ ಸರ್ಕಾರವು ತಲಾ ಒಂದೊಂದು ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು. ಉಗ್ರಗಾಮಿಗಳನ್ನು ಹುಟ್ಟು ಹಾಕುತ್ತಿರುವ ಪಾಕಿಸ್ತಾನವನ್ನು ಭೂಪಟದಿಂದ ನಿರ್ನಾಮ ಮಾಡಬೇಕು. ಕೂಡಲೇ ಕೇಂದ್ರ ಸರ್ಕಾರ ಯುದ್ಧ ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸಂವಿಧಾನದ ಆಶಯ ಹಾಗೂ ಬಸವ ತತ್ವ ಒಂದೇ: ಸಚಿವ ಎಚ್.ಕೆ. ಪಾಟೀಲ
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣ ಶಿಗ್ಗಾವಿ ತಾಲೂಕು ಅಧ್ಯಕ್ಷರು ಶಂಕರ ಬಡಿಗೇರ, ಜಿಲ್ಲಾ ಉಪಾಧ್ಯಕ್ಷರು ಯೂಸುಫ್ ಸೈಕಲಗಾರ, ಮುಖಂಡರು ಇಲಂದ ಎಲೆದಹಳ್ಳಿ, ರೇವನಸಿದ್ದಯ್ಯ ಹಿರೇಮಠ, ನಸೀರ್ಖಾನ ಪಠಾಣ, ಮಹಾವೀರ ಹಳ್ಳಿಯವರ, ದೇವೇಂದ್ರ ಗಣಪತಿ, ಮುಲಾಲಿ ಹುಚ್ಚಸಂಬನ್ನವರ, ಆಯಲೇ ಬೆಣ್ಣೆ, ರಜಾಕ್ ಪುರತಗೇರಿ ಇನ್ನೂ ಅನೇಕರು ಉಪಸ್ಥಿತರಿದ್ದರು.