“ಹಾವೇರಿ ಜಿಲ್ಲಾದ್ಯಂತ ಸರ್ಕಾರದಿಂದ ಪರವಾನಿಗೆ ಪಡೆದ ಕಲವೊಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಇಲಾಖೆಯಿಂದ ಸಂಘ ಸಂಸ್ಥೆಗಳು ಅಧಿಕಾರಿಗಳ ಜೊತೆ ಶಾಮಿಲಾಗಿ ನಿಜವಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಡಗಳನ್ನು ಮಾಡಲು ಹಣ ವಸೂಲಿ ಮಾಡುತ್ತಿದ್ದು, ಮದ್ಯವರ್ತಿಗಳ ಹಾವಳಿ ತಡೆಗಟ್ಟಬೇಕು” ಎಂದು ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕಕ್ಷ ಯಲ್ಲಪ್ಪ ಮರಾಠೆ ಒತ್ತಾಯಿಸಿದರು.
ಹಾವೇರಿ ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ಜಿಲ್ಲಾದ್ಯಂತ ನಿಜವಾದ ಕಟ್ಟಡ ಕಾರ್ಮಿಕರಿಗೆ ಸರರ್ಕಾರದ ಸೌಲಭ್ಯಗಳು ಸಿಗಲಿ, ಮದ್ಯವರ್ತಿಗಳ ಹಾವಳಿ ಕಡಿವಾಣ ಹಾಕುವಂತೆ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಇಲಾಖೆ ಅಧಿಕಾರಿ ಶ್ರೀಮತಿ ತರುಂ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಕಾರ್ಮಿಕರ ಕಾರ್ಡುಗಳನ್ನು ಪಡೆಯಲು ಬೇಡಿಕೆ ಇಟ್ಟಿದ್ದು, ಒಂದು ಸಾವಿರದಿಂದ ಹದಿನೈದು ನೂರು ಪಡೆದು ಕಾರ್ಡಗಳನ್ನು ನೀಡುತ್ತಿದ್ದಾರೆ. ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಮಕ್ಕಳ ಮದುವೆಗೆ ಹಾಗೂ ಹೆರಿಗೆ ಭತ್ತೆ ಮಂಜೂರಮಾಡಿಸಿಕೊಳ್ಳಲು ಹತ್ತುಸಾವಿರದಿಂದ ಹದಿನೈದು ಸಾವಿರವರೆಗೆ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಮದ್ಯವರ್ತಿಗಳ ಸಂಘ ಸಂಸ್ಥೆಗಳ ಪರವಾನಿಗೆಯನ್ನು ರದ್ದುಗೊಳಿಸಬೇಕು” ಎಂದು ಒತ್ತಾಯಿಸಿದರು.
“ಕಾರ್ಮಿಕರಿಗೆ ವಿತರಿಸುವ ಕೀಟ್ ಗಳನ್ನು ಯಾವುದೇ ಮದ್ಯವರ್ತಿಗಳ ಕೈಗೆ ಸಿಗದೆ ನೇರವಾಗಿ ಕಾರ್ಮಿಕರಿಗೆ ತಲುಪುವಂತೆ ಕ್ರಮ ಕೈಗೊಳಬೇಕು. ನಿಜವಾದ ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಬೇಕು” ಎಂದು ಒತ್ತಾಯಿಸಿದರು.
“ಸರ್ಕಾರದ ಸೌಲಭ್ಯಗಳು ನೇರವಾಗಿ ಕಾರ್ಮಿಕರಿಗೆ ಸಿಗವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರವೇ ಸ್ವಾಭಿಮಾನಿ ಬಣ ವತಿಯಿಂದ ಅಕ್ರಮ ಎಸಗುವವರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾಬಾಯಿ ಲಮಾಣಿ, ಜಿಲ್ಲಾಪ್ರಧಾನ ಕಾರ್ಯದರ್ಶಿ ಯೊಸುವ ಸೈಕಲಗಾರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಖಲಂದರ ಎಲೆದಹಳ್ಳಿ, ಹಾವೇರಿ ತಾಲೂಕ ಮಹಿಳಾ ಅಧ್ಯಕ್ಷ ನಾಗಮ್ಮ ಕಾಳೇರ, ಹಾನಗಲ ತಾಲೂಕ ಮಹಿಳಾ ಅಧ್ಯಕ್ಷ ನೇತ್ರಾ ಕಟ್ಟಿಮನಿ, ಬ್ಯಾಡಗಿ ತಾಲೂಕ ಅಧ್ಯಕ್ಷ ಬಸವರಾಜ ಪಟ್ಟಿನಶೆಟ್ಟಿ, ದಾದಾಪೀಠ ಮಲ್ಲಾಡದ, ರಾಜಾಭಕ್ಷ ಮಾನೆಗಾರ, ಮೈಮುದ್ದಿನ ಸಾಬ ಮುಲ್ಲಾ, ಹಬೀಬ ದಾರುಗಾರ, ಚಂದ್ರಕಲಾ ಕಟ್ಟಿಮನಿ, ನೇತ್ರಾವತಿ ಕನವಳ್ಳಿ, ಮಮತಾ ಹೊನ್ನಜ್ಜಿಯವರ, ಸನ್ನಾವುಲ್ಲಾ ಪುರದಗೇರಿ, ದ್ಯಾಮಕ್ಕ ನಾಯಕರ, ಕಮಲ್ಲಮ್ಮ ಲಕಮಾಪುರ, ಹೊನ್ನುರಸಾಬ ಕೊಪ್ಪಳ, ಶರಣಪ್ಪ ಲಕಮಾಪುರ, ರವಿ ಮಾಮುನಿ, ಯಲ್ಲಮ್ಮ ಹಂಚಿನಮನಿ, ನಿಂಗಮ್ಮ ಕಟ್ಟಿಮನಿ, ಶಾಂತಮ್ಮ ವಾಲ್ಮೀಕಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.