ಹಾವೇರಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಹಂದಿಗನೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಕನ್ನಡಾಂಬೆಯ ಭಾವಚಿತ್ರ ಮೆರವಣಿಗೆ ನಡೆಯಿತು. ನಂತರ ಕನ್ನಡ ತಾಯಿ ಭುವನೇಶ್ವರಿ ಹಾಗೂ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜಿಸಿ, ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಹಾವೇರಿ ತಾಲ್ಲೂಕು ಅಧ್ಯಕ್ಷ ಹಾಲೇಶ್ ಹಾಲಣ್ಣನವರ ಅವರು ಧ್ವಜಾರೋಹಣ ನೇರವೇರಿಸಿ ಮಾತನಾಡಿ, “ನಾವೆಲ್ಲರೂ ಮಾತನಾಡುವ ಭಾಷೆ ತಾಯಿ ಭಾಷೆ ಕನ್ನಡ. ಈ ಭಾಷೆಗೆ ತನ್ನದೇ ಆದ ಚರಿತ್ರೆ, ಹೋರಾಟವಿದೆ. ಕನ್ನಡ ನಾಡು ನುಡಿಯ ರಕ್ಷಣೆಗೆ ನಾವು ಸದಾ ಸಿದ್ಧರಾಗಿರಬೇಕು. ಕನ್ನಡ ಭಾಷೆಗೆ ಅವಮಾನ ಮಾಡಿದಾಗ ಧ್ವನಿ ಎತ್ತಿ ಹೋರಾಡಬೇಕು” ಎಂದರು.

ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಉಪಾಧ್ಯಕ್ಷ ಚನ್ನಪ್ಪ ಹೊನ್ನಮ್ಮನವರ, ವೀರೇಶ ಕಮ್ಮಾರ, ಬಸವರಾಜ ಅರಳಿ, ಕಾಳಪ್ಪ ಬಡಿಗೇರ, ನಾಗಾರ್ಜುನ ಕಾಯಕದ, ದಾದಾಪೀರ ಕಾಲೇಕಾನವರ, ಪಕೃದ್ಧೀನ ಅಂಗಡಿಕಾರ,ಗೌಸಪಾಕ್ ಬಾಲೆಬಾಯಿ, ಮಲ್ಲಿಕಾರ್ಜುನ ಪಾಟೀಲ ದ್ಯಾಮಣ್ಣ ದಿಡಗೂರು, ಶಂಕರ್ ಕಮ್ಮಾರ, ನಿಂಗಪ್ಪ ಕಂಟೆಣ್ಣವರ, ಹಾಗೂ ತಾಲ್ಲೂಕು ಸದಸ್ಯರು, ಹಂದಿಗನೂರು, ಕೊರಡೂರು, ಮೇಲ್ಮೂರಿ ಗ್ರಾಮ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು,ಯುವಘಟಕದ ಅಧ್ಯಕ್ಷರು,ಎಲ್ಲ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಊರಿನ ಹಿರಿಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.
