ಜಮೀನಿನಲ್ಲಿ ಎರಡು ನಾಡಬಾಂಬ್ ಪತ್ತೆಯಾಗಿದ್ದು, ನಾಯಿ ಕಚ್ಚಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಲ್ಲಿಕಾರ್ಜುನ ಗೌಡ ಎಂಬುವವರ ಜಮೀನಿನಲ್ಲಿ ದುಷ್ಕರ್ಮಿಗಳು ಒಟ್ಟು ಮೂರು ನಾಡ ಬಾಂಬುಗಳನ್ನು ಇಟ್ಟಿದ್ದರು. ಇದರಲ್ಲಿ ಇಟ್ಟಿದ್ದ ನಾಡಬಾಂಬ್ ಸ್ಪೋಟಗೊಂಡು ನಾಯಿಯೊಂದು ಸಾವನ್ನಪ್ಪಿದೆ.
‘ಪ್ರಾಣಿಗಳನ್ನು ಬೇಟೆಯಾಡಲು ಬೇಟೆಗಾರರು ನಾಡಬಾಂಬ್ ಇಟ್ಟಿರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ 2 ಜೀವಂತ ನಾಡಬಾಂಬ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ’ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಗದಗ | ಏಪ್ರಿಲ್ ಮೊದಲ ವಾರ ಉದ್ಯೋಗ ಖಾತ್ರಿ ಕೆಲಸ ಆರಂಭ
ನಾಡಬಾಂಬ್ಗಳಿಗೆ ಪ್ರಾಣಿಯ ಕೊಬ್ಬು ಸವರಿದ್ದರಿಂದ ನಾಯಿ ಕಚ್ಚಿದೆ ಎನ್ನಲಾಗುತ್ತಿದೆ. ಸ್ಫೋಟಕ ಅಧಿನಿಯಮದ ಅಡಿಯಲ್ಲಿ ವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
