ಮಾಂಗಲ್ಯ ಸರಗಳ್ಳತನ ಮಾಡಿ ತಲೆಮಾರಿಸಿಕೊಂಡಿದ್ದ ಆರೋಪಿಯನ್ನು ಹಾವೇರಿ ದನದ ಮಾರುಕಟ್ಟೆಯ ಹತ್ತಿರ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಕುಮಾರ ನಗರದ ಮಹಿಳೆಯ ಮಾಂಗಲ್ಯ ಸರವನ್ನು ಕಳ್ಳತನ ಮಾಡಿದ್ದು, ಹಾನಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಪಿಐ ಆಂಜನೇಯ ಎನ್ ಹೆಚ್ ನೇತೃತ್ವದಲ್ಲಿ ತಂಡ ರಚಿಸಿ, ಆರೋಪಿಯಾದ ನಾಗರಾಜಪ್ಪ ಮರಾಠಿ ಹಾವೇರಿ ಪಟ್ಟಣದ ದನದ ಮಾರುಕಟ್ಟೆ ಹತ್ತಿರದಲ್ಲಿ ವಶಪಡಿಸಿಕೊಂಡಿದ್ದಾರೆ.
ಆರೋಪಿ ನಾಗರಾಜಪ್ಪ ಮರಾಠಿ ವಯಸ್ಸು 24 ಇದ್ದು, ಗೌಂಡಿ ಕೆಲಸ ಮಾಡುತ್ತಾನೆ. ಆರೋಪಿಯಿಂದ 1.14,000/-ಕಿಮ್ಮತ್ತಿನ ಬಂಗಾರದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸೈಬರ್ ವಂಚನೆ ಬಗ್ಗೆ ಎಚ್ಚರವಹಿಸಿ : ಪ್ರೊ.ಬಿ.ಎಸ್.ಬಿರಾದಾರ್
ಆರೋಪಿ ವಿರುದ್ದ ಚಿತ್ರದುರ್ಗ, ತುಮಕೂರ, ಗದಗ, ಬಳ್ಳಾರಿ ಹಾಗೂ ಹಾವೇರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಸುಲಿಗೆ, ರಾತ್ರಿ ಕಳವು ಹಾಗೂ ದೇವಸ್ಥಾನ ಕಳವು ರೀತಿಯ ಸುಮಾರು 35 ಪ್ರಕರಣಗಳು ದಾಖಲಾಗಿಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.