ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಿಂದ ಮಂಜಪ್ಪ ಹೊನ್ನಕ್ಕಳವರ ಅವರಿಗೆ ಪಿಎಚ್.ಡಿ ಪದವಿ ಘೋಷಣೆ.
ಕನ್ನಡ ಅಧ್ಯಯನ ಪೀಠದ ಹಿರಿಯ ಪ್ರಾಧ್ಯಾಪಕರಾದ ಡಾ. ನಿಜಲಿಂಗಪ್ಪ ಮಟ್ಟಿಹಾಳ ಅವರ ಮಾರ್ಗದರ್ಶನದಲ್ಲಿ “ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ದಲಿತ ಸಂಸ್ಕೃತಿ” ಎಂಬ ವಿಷಯದ ಮಹಾಪ್ರಬಂಧವನ್ನು ಮಂಡಿಸಿರುವ ಸಂಶೋಧಕ ಮಂಜಪ್ಪ ಹೊನ್ನಕ್ಕಳವರ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ, ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ, ಅಧ್ಯಕ್ಷರು, ಕಲಾ ನಿಖಾಯದ ಡೀನರು ಹಾಗೂ ಅಧ್ಯಯನ ಪೀಠದ ಎಲ್ಲಾ ಪ್ರಾಧ್ಯಾಪಕರು ಪಿಎಚ್.ಡಿ ಪದವಿಯನ್ನು ಘೋಷಣೆ ಮಾಡಿದರು.
ಹಾವೇರಿ ಜಿಲ್ಲೆಯ, ರಾಣೆಬೆನ್ನೂರು ತಾಲೂಕಿನ, ಚಳಗೇರಿ ಗ್ರಾಮದ ತಾಯಿ- ನೀಲಮ್ಮ, ತಂದೆ -ಬಸವರಾಜಪ್ಪ ಹೊನ್ನಕ್ಕಳವರ ದಂಪತಿಗಳ ಮಗನಾದ ಮಂಜಪ್ಪ ಹೊನ್ನಕ್ಕಳವರ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನ ಪ್ರದಾನ ಮಾಡಿದ್ದಕ್ಕೆ ತಂದೆ- ತಾಯಿ, ಸಂಬಂಧಿಕರು, ಗುರುಗಳು, ಸ್ನೇಹಿತರು ಹಾಗೂ ಊರಿನ ಗ್ರಾಮಸ್ಥರೆಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ.
