ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮ ಪಂಚಾಯತಿಯಲ್ಲಿ ಕಳೆದ 2021 ರಿಂದ 2024ವರೆಗೆ 14,15 ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಸಾರ್ವಜನಿಕ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರ ಕುರಿತು ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಅಕ್ಷಯ್ ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದೆ.
ಮನವಿ ಸಲ್ಲಿಸಿ ದಸಂಸ ರಾಜ್ಯ ಸದಸ್ಯ ಉಡಚಪ್ಪ ಮಳಗಿ ಮಾತನಾಡಿ, “ಬಾಳಂಬೀಡ ಗ್ರಾಮ ಪಂಚಾಯತಿಯಲ್ಲಿ 14,15 ನೇ ಹಣಕಾಸು ಯೋಜನೆ ಅಡಿಯಲ್ಲಿ ಸಾರ್ವಜನಿಕ ಹಣ ದುರುಪಯೋಗ ಮಾಡಲಾಗಿದ್ದು, ಕುಡಿಯುವ ನೀರು, ಬೊರ್‌ವೆಲ್ ದುರಸ್ತಿ, ವಿದ್ಯುತ್ ಬಿಲ್, ಚರಂಡಿ ದುರಸ್ತಿ ಹಾಗೂ ಸ್ವಚ್ಛತೆ, ಬೀದಿ ದೀಪ, ನೈರ್ಮಲೀಕರಣ, ಹೈ ಮಾಸ್ಟ್ ಬೀದಿ ದೀಪ ಸಾಮಗ್ರಿಗಳ ಖರೀದಿ, ಮಿನಿ ವಾಟರ್ ನಿರ್ವಹಣೆ ಕಾಮಗಾರಿಗಳಿಗೆ ಬಳಸಬೇಕಾದ ಹಣದಲ್ಲಿ ಯಾವುದನ್ನು ಸರಿಯಾಗಿ ನಿರ್ವಹಣೆ ಮಾಡದೇ ಹಣವನ್ನು ಖರ್ಚು ಹಾಕಿ ಸಾರ್ವಜನಿಕ ಹಣ ದುರುಪಯೋಗ ಪಡೆಸಿಕೊಂಡು ಲೂಟಿ ಮಾಡಿದ್ದಾರೆ” ಎಂದು ಆರೋಪಿಸಿದರು.
ಈ ವಿಚಾರದಲ್ಲಿ ಜಿಲ್ಲಾ ಪಂಚಾಯತ್ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ಕುಂದಗೋಳ ತಾಲೂಕಿನಲ್ಲಿ ಸಮಸ್ಯೆಗಳದ್ದೇ ಕಾರುಬಾರು; ಕ್ಯಾರೇ ಎನ್ನದ ಅಧಿಕಾರಿಗಳು!
ಮನವಿ ಸಲ್ಲಿಸುವ ಸಂದರ್ಭದಲ್ಲಿ ದಸಂಸ ಮುಖಂಡರಾದ ಮಂಜಪ್ಪ ಮಾರೋಳ, ವೈ. ಎನ್.ಮಾಸೂರ, ಜಗದೀಶ್ ಹರಿಜನ, ಮಂಜುನಾಥ ದೊಡ್ಡಮರಿಯಮ್ಮನವರ, ಮಹೇಶಪ್ಪ ಶಾಕಾರ, ಶಿವು ಮುದಿಮಲ್ಲಣ್ಣವರ, ಶ್ರೀಮತಿ ರೇಣುಕಾ ಬಡಕಣ್ಣವರ, ಬಸವಣ್ಣಪ್ಪ ಅರಳಿಹಳ್ಳಿ,ಶಂಭುಲಿಂಗಪ್ಪ ದಿವಟರ,ಕೃಷ್ಣಕಾಂತ ಹೊಳಿಯಪ್ಪನವರ, ಮಂಜುನಾಥ್ ಮಾಸೂರ,ಹನಮಂತಪ್ಪ ಹೌಶಿ, ಗೀತಾ ಹಳೆಶಿಡೆನೂರ,ರತ್ನವ್ವ ದೊಡ್ಡಮನಿ ಇತರರು ಇದ್ದರು.
