“ವಿದ್ಯಾರ್ಥಿಗಳು ಕೇವಲ ಆಟ, ಪಾಠಕ್ಕೆ ಸೀಮಿತವಾಗದೇ ಸಾಮಾಜಿಕ ಪರಿವರ್ತನೆಯ ಭಾಗವಾಗಬೇಕಿದೆ. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿದೆ. ಸಾಮಾಜಿಕ ಹೊಣೆಗಾರಿಕೆಯಿಂದ ವಂಚಿತರಾಗದೇ ಬದಲಾವಣೆಯ ಭಾಗವಾಗಬೇಕಿದೆ” ಎಂದು ಬೇಸಿಗೆ ಶಿಬಿರದ ವಿದ್ಯಾರ್ಥಿಗಳೊಂದಿಗೆ ಶಾಸಕ ಶ್ರೀನಿವಾಸ ಮಾನೆ ಮಾತು ಕತೆ ನಡೆಸಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಲೋಯಲಾ ವಿಕಾಸ ಕೇಂದ್ರ ಆಯೋಜಿಸಿದ್ದ ಬೇಸಿಗೆ ಶಿಬಿರದ ವಿದ್ಯಾರ್ಥಿಗಳೊಂದಿಗೆ ಜನ ಸಂಪರ್ಕ ಕೇಂದ್ರದಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾತುಕತೆ ನಡೆಸಿದರು.
“ಪ್ರಪಂಚದ ಸ್ಪರ್ಧೆಗೆ ತಾಲೂಕಿನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಭವಿಷ್ಯ ಗಟ್ಟಿಗೊಳಿಸುವ ದೃಢಸಂಕಲ್ಪದೊಂದಿಗೆ ಗಟ್ಟಿ ಹೆಜ್ಜೆ ಇಡಲಾಗಿದೆ. ಈ ನಿಟ್ಟಿನಲ್ಲಿ ಪರಿವರ್ತನ ಕಲಿಕಾ ಕೇಂದ್ರ ಆರಂಭಿಸಿ ಪರಿಣಿತರಿಂದ ತರಬೇತಿ ದೊರಕಿಸಲಾಗುತ್ತಿದೆ” ಎಂದು ಹೇಳಿದರು.
“ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಿ ಕಲಿಕಾ ಪೂರಕ ವಾತಾವರಣ ಸೃಷ್ಟಿಗೆ ಕಾಳಜಿ ವಹಿಸಲಾಗಿದೆ. ನಾನಾ ಸಂಘ ಸಂಸ್ಥೆಗಳ ಮನವೊಲಿಸಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸುವ ಕಾರ್ಯವೂ ಪಗತಿಯಲ್ಲಿದೆ” ಎಂದು ಹೇಳಿದರು.
ವಿಧಾನಸಭೆ, ವಿಧಾನ ಪರಿಷತ್ತು, ಸಂಸತ್ತಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಲವಾರು ಪ್ರಶ್ನೆ, ಸಂದೇಹ, ಗೊಂದಲಗಳಿಗೆ ಇದೇ ಸಂದರ್ಭದಲ್ಲಿ ಉತ್ತರ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಕ್ಕ ಮಹಾದೇವಿ ವಚನ ಮನುಕುಲಕ್ಕೆ ದಾರಿದೀಪ : ಪ್ರಭುದೇವ ಸ್ವಾಮೀಜಿ
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಣುಕಾ ಎಸ್., ಲೋಯಲಾ ವಿಕಾಸ ಕೇಂದ್ರದ ಸಹ ನಿರ್ದೇಶಕ ಫಾ.ವಿನ್ಸಂಟ್ ಜೇಸನ್, ಸಿಬ್ಬಂದಿಗಳು ಲೋಹಿತ್ ಕಾಟಣ್ಣನವರ, ಮೈಲಾರಿ ಜಾಡರ, ಗೀತಾ ಬಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುಖಂಡರಾದ ಆದರ್ಶ ಶೆಟ್ಟಿ, ರಾಮಚಂದ್ರ ಕಲ್ಲೇರ, ಉಮೇಶ ದೊಡ್ಡಮನಿ, ಸುರೇಶ ನಾಗಣ್ಣನವರ, ಯಲ್ಲಪ್ಪ ನಿಂಬಣ್ಣನವರ, ಮಾಲತೇಶ ಕಾಳೇರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಇದ್ದರು.