ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ದರ್ಗಾ ಪ್ರದೇಶದಲ್ಲಿ ಪವಿತ್ರ ರಂಜಾನ್ ಹಬ್ಬದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ ಮುಸ್ಲಿಂ ಬಾಂಧವರನ್ನು ಶಾಸಕ ಶ್ರೀನಿವಾಸ ಮಾನೆ ಭೇಟಿ ಮಾಡಿ, ಶುಭಕೋರಿ ಮಾತನಾಡಿದರು.
“ದ್ವೇಷ, ಅಸೂಯೆ ಸುಡುವ ಮೂಲಕ ಪ್ರೀತಿ ಬಾಂಧವ್ಯಗಳನ್ನು ಬೆಸೆಯುವ, ಸಹೋದರತೆ, ಸೌಹಾರ್ದತೆಯ ಸಂದೇಶಗಳನ್ನು ಸಾರುವ ಪ್ರವಿತ್ರ ರಂಜಾನ್ ಹಬ್ಬ ದೇಶದ ಐಕ್ಯತೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿ ಎಲ್ಲೆಡೆ ಶಾಂತಿ, ಸಹಬಾಳ್ವೆ, ಸಾಮರಸ್ಯ ಮೂಡಲಿ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಕೋಮುವಾದಿ ಪಕ್ಷ ಹಾಗೂ ಸಂಘಟನೆ ಅಂಬೇಡ್ಕರ್ ಜಯಂತಿ ಆಚರಣೆ ಹಿಂದೆ ರಾಜಕೀಯ ಹುನ್ನಾರ : ಮುತ್ತು ಬಿಳಿಯಲಿ
ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಮಾಜಿ ಅಧ್ಯಕ್ಷ ಖುರ್ಷಿದ್ ಹುಲ್ಲತ್ತಿ, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಮುಖಂಡರಾದ ಸಿಕಂದರ್ ವಾಲಿಕಾರ, ಮಕ್ಯೂಲ್ ಾಬ ಬಡಗಿ, ಅರ್ನಾನ್ ಸೌದಾಗರ ಇಲಿಯಾಸ್ ಮಿಠಾಯಿಗಾರ, ಈರಣ್ಣ ಬೈಲವಾಳ, ಆದರ್ಶ ಶೆಟ್ಟಿ, ಪ್ರವೀಣ ಹಿರೇಮಠ, ಬಸವನಗೌಡ ಪಾಟೀಲ, ಲಿಂಗರಾಜ ಮಡಿವಾಳರ, ರಾಜೂ ಗಾಡಿಗೇರ, ರಾಮಚಂದ್ರ ಕಲ್ಲೇರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
