“ಅವಿಭಜಿತ ಧಾರವಾಡ ಜಿಲ್ಲೆಯ ಜೈನ ಮತ ಪಂಥದ ಇತಿಹಾಸ-ಪುರಾತತ್ವ ಮತ್ತು ಸಂಸ್ಕೃತಿ: ಸಂಶೋಧನಾ ಸಾಧ್ಯತೆ ಮತ್ತು ಸವಾಲುಗಳು ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ 3, 4ನೆಯ ಹಮ್ಮಿಕೊಳ್ಳಲಾಗಿದೆ” ಎಂದು ಇತಿಹಾಸ ಪ್ರಧ್ಯಾಪಕರು ಡಾ. ಶಿವಯೋಗಿ ಆರ್ ಕೋರಿಶೆಟ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿದ್ದಾರೆ.
“ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಹಾಗೂ ಶ್ರೀ ಅಭೇರಾಜ್ ಬಲ್ಡೋಟ ಜೈನ ಸಂಸ್ಕೃತಿ ಅಧ್ಯಯನ ಪೀಠ ಸಹಯೋಗದಲ್ಲಿ ಹಾವೇರಿ ಪಟ್ಟಣದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
“ಈ ವಿಚಾರ ಸಂಕಿರಣದಲ್ಲಿ ಜೈನ ಶಾಸನಗಳು, ಬಸದಿಗಳು, ಶಿಲ್ಪಗಳು ಹಾಗೂ ಜೈನ ಪರಂಪರೆಯ ಕುರಿತು ನಾಡಿನ ವಿದ್ವಾಂಸರು, ಸಂಶೋಧಣಾರ್ಥಿಗಳು ವಿಷಯ ಮಂಡನೆ ಮಾಡಲಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಪ್ರೊ. ಬಿ. ಕೃಷ್ಣಪ್ಪ ಸಭಾಭವನ ನಿರ್ಮಿಸಲು ಸಚಿವರು ಹೆಚ್. ಕೆ. ಪಾಟೀಲರಿಗೆ ಒತ್ತಾಯ
“ಈ ವಿಚಾರ ಸಂಕಿರಣದಲ್ಲಿ ಆಸಕ್ತರು ಭಾಗವಹಿಸಬೇಕು” ಎಂದು ಮನವಿ ಮಾಡಿದ್ದಾರೆ.