ಕರ್ತವ್ಯಲೋಪ, ಅನಧೀಕೃತ ಗೈರು ಹಾಜರಿ ಹಿನ್ನಲೆಯಲ್ಲಿ ಗುತ್ತಲ ಪಟ್ಟಣ ಪಂಚಾಯತಿಯ ಕರವಸೂಲಿಗಾರ ನಂಜುಂಡಪ್ಪ ಎಫ್. ಗಂಗಮ್ಮನವರ ಸೇವೆಯಿಂದ ಅಮಾನತ್ತಗೊಳಿಸಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗುತ್ತಲ ತಾಲ್ಲೂಕು ಪಟ್ಟಣ ಪಂಚಾಯಿತಿ ಕರವಸೂಲಿಗಾರ ನಂಜುಂಡಪ್ಪ ಎಫ್. ಗಂಗಮ್ಮನವರ ಸಾರ್ವಜನಿಕರಿಂದ ತೆರಿಗೆ ಹಣ ವಸೂಲಿ ಮಾಡಿ, ಪಟ್ಟಣ ಪಂಚಾಯತಿಗೆ ಪಾವತಿಸದೇ ಹಣ ದುರುಪಯೋಗಪಡಿಸಿಕೊಂಡ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತಿಗೆ ದೂರು ಸಲ್ಲಿಸಿದ್ದರು.
ಸಾರ್ವಜನಿಕರ ಹಣ ದುರುಪಯೋಗ ಮೇಲ್ನೋಟಕ್ಕೆ ಕಂಡುಬಂದ ಹಿನ್ನಲೆಯಲ್ಲಿ ಹಾಗೂ ದಿನಾಂಕ 21-03-2024ರಿಂದ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿ ಸಾರ್ವಜನಿಕ ಕೆಲಸಕ್ಕೆ ತೊಂದರೆ ಉಂಟು ಮಾಡಿದ್ದ ದೋಷಾರೋಪಣಾ ಪಟ್ಟಿಯನ್ನು ಜಾರಿ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮೊಹರಂ ಆಚರಣೆ; ಜು.5 ರಿಂದ ಮದ್ಯ ಮಾರಾಟ ನಿಷೇಧ
“ನೌಕರನು ದಿನಾಂಕ 20-06-2024 ರಂದು ದೋಷಾರೋಪಣ ಪಟ್ಟಿ ಸ್ವೀಕರಿಸಿದರೂ ಈವರೆಗೆ ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಈ ನೌಕರನು ಕಚೇರಿ ಕೆಲಸ ಕಾರ್ಯಗಳಲ್ಲಿ ಕರ್ತವ್ಯಲೋಪ ವೆಸಗಿರುವುದರಿಂದ ಮತ್ತು ಸಾರ್ವಜನಿಕರ ಹಣ ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಸೇವೆಯಿಂದ ಅಮಾನತ್ ಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.