“ಇಂದು ನಮ್ಮ ದೇಶ ವೈರುಧ್ಯಮ ಯುಗಕ್ಕೆ ಪ್ರವೇಶಿಸುತ್ತಿದೆ. ಎಲ್ಲರಿಗೂ ಒಂದು ಮತ ಎನ್ನುವುದು ರಾಜಕೀಯ ಸಮಾನತೆಯನ್ನು ಕಲ್ಪಿಸಿದರೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಹಾಗೆಯೇ ಮುಂದುವರೆಯುತ್ತಿದೆ” ಎಂದು ಸಾಹಿತಿ ಶಿಕ್ಷಕ ಪ್ರವೀಣ ಕೆಳಗಿನಮನಿ ಹೇಳಿದರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲ್ಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಸ್ವಾತಂತ್ರ್ಯ ಯೋಧ ಕನವಳ್ಳಿ ಯಲ್ಲಪ್ಪ ಅಭಿಮಾನಿ ಬಳಗ ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
“ಬಡವನಿಗೆ ಬದುಕಿನ ಆಯ್ಕೆ ಸಿಗುವವರೆಗೆ ಪ್ರಭುತ್ವ ಆತನ ಬೆಂಬಲಕ್ಕೆ ನಿಲ್ಲುವವರೆಗೆ ಸ್ವಾತಂತ್ರ್ಯ ಅವನಿಗೆ ಬದುಕಾಗದೆ ಕೇವಲ ಆಚರಣೆಯ ಕಾರಣವಾಗುತ್ತದೆ. ಇದಕ್ಕೆ ಪೂರಕವಾಗಿ ಪ್ರಜಾತಾಂತ್ರಿಕ ಸೌಲಭ್ಯಗಳು ಸಮಾಜದ ಅತ್ಯಂತ ಅಲಕ್ಷಿತನಿಗೂ ತಲುಪುವ ಚಿಂತನೆಗಳು ಮುನ್ನೆಲೆಗೆ ಬರಬೇಕು” ಎಂದು ನುಡಿದರು.

“ರಾಷ್ಟ್ರ ಧ್ವಜಾರೋಹಣವನ್ನು ನಿವೃತ್ತ ಸೈನಿಕ ನಾಗಪ್ಪ ಭಜಂತ್ರಿ ನೆರವೇರಿಸಿದರು. ನಂತರ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕೋಟೆಯ ಸಿಂಹಾಸನ ಕಟ್ಟೆಯ ವರೆಗೂ ನೂರು ಮೀಟರ್ ಉದ್ದದ ರಾಷ್ಟ್ರ ಧ್ವಜವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಡಗರ ಸಂಭ್ರಮದಿಂದ ಮೆರವಣಿಗೆ ನಡೆಸಲಾಯಿತು.
ಈ ಸುದ್ದಿ ಓದಿದ್ದೀರಾ? ಗದಗ | ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಶ್ರೀರಾಮ ಸೇನೆ
ಸಮಾರಂಭದಲ್ಲಿ ಮಾದರಿ ಕೇಂದ್ರ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ದಿಳ್ಳೆಪ್ಪ ಚಿನ್ನಿಕಟ್ಟಿ, ಮುಖ್ಯ ಶಿಕ್ಷಕ ನಾಗೇಶ್ ಚಿನ್ನಿಕಟ್ಟಿ, ಕನ್ನಡ ಹೆಣ್ಣು ಮಕ್ಕಳ ಶಾಲೆಯ ಅಧ್ಯಕ್ಷ ನೀಲಪ್ಪ ಗೊರಮಾಳರ, ಶಿಕ್ಷಕಿ ರತ್ನಮ್ಮ ಡೊಂಬರ, ಕಸಾಪ ಗ್ರಾಮ ಘಟಕದ ಅಧ್ಯಕ್ಷ ಮಾರುತಿ ತಳವಾರ, ಶ್ರೀಮತಿ ಜಬೀನಾ ನಾಶಿಪುಡಿ, ಚಂದ್ರು ದೇವರಗುಡ್ಡ, ನಾಗಚಂದ್ರ ಗೊರಮಾಳರ, ಬೀರೇಶ ಮೆಟೆಪ್ಳವರ, ದೈಹಿಕ ಶಿಕ್ಷಣ ಶಿಕ್ಷಕರು ಪ್ರಕಾಶ್ ಕೊಕ್ಕನವರ, ವಿ ಎಂ ಶಿಡಗನಾಳ, ರಾಘವೇಂದ್ರ ದೇವರಮನಿ, ವಿಧ್ಯಾವತಿ ಜಂಗಿನ, ಮಂಜುನಾಥ್ ಭಾರ್ಕಿ, ಮಂಜು ಅಂಬಿಗೇರ, ಮನೋಜ್ ಅಂಬಿಗೇರ, ಕೃಷ್ಣ ಗೊಲ್ಲರ, ನವೀನ ಬಡಿಗೇರ, ಚಂದ್ರು ಜಲ್ಲೇರ, ಅರುಣಕುಮಾರ ಹೊನ್ನಪ್ಪಳವರ, ಮಾರುತಿ ಭಾರ್ಕಿ, ಮನ್ಸೂರ್ ಅಲಿ ಚಿಗರೇಲಿ, ಹನುಮಂತ ಅಂಬಿಗೇರ, ಬಸವರಾಜ ಹುಲ್ಲತ್ತಿ, ಮಾಲತೇಶ ಕುಮ್ಮೂರ, ಶಿಕ್ಷಕ ಮಹೇಶ್ವರಪ್ಪ, ಅಶೋಕ, ಚನ್ನಪಗೌಡ, ಅರ್ಚನ ಜಾಡರ, ರತ್ನಮ್ಮ ಅರಳಿಕಟ್ಟಿ ಹಾಗೂ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸರ್ಕಾರಿ ಮಾದರಿ ಕೇಂದ್ರ ಶಾಲೆ. ಕನ್ನಡ ಹೆಣ್ಣು ಮಕ್ಕಳ ಶಾಲೆ ವಿವೇಕಾನಂದ ಪ್ರಾಥಮಿಕ ಶಾಲೆ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ ಶಿಕ್ಷಕರು ಮಕ್ಕಳು ಪಾಲ್ಗೊಂಡಿದ್ದರು