“ಸುಮಾರು ದಿನಗಳಿಂದ ಆನ್ ಲೈನ್ ಬೆಟ್ಟಿಂಗ್ ಹಾಗೂ ಆನ್ಲೈನ್ ಗೇಮ್ ವೆಬ್ಸೈಟಗಳಿಂದ ಹಲವಾರು ವಿದ್ಯಾರ್ಥಿಗಳು, ಯುವಕರು, ರೈತರ ಮಕ್ಕಳು ಹಾಳಾಗಿದ್ದು, ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿವೆ. ಹಾಗಾಗಿ ಆನ್ಲೈನ್ ಬೆಟ್ಟಿಂಗ್ ಗೇಮ್ ನಿಷೇದ ಮಾಡಬೇಕು” ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಮಾರುತಿ ಎಫ್ ಹಾಲಗಿ ಅಗ್ರಹಿದರು.
ಹಾವೇರಿ ಪಟ್ಟಣದ ನಮ್ಮ ಕರ್ನಾಟಕ ಸೇನೆ ವತಿಯಿಂದ ಆನ್ಲೈನ್ ಬೆಟ್ಟಿಂಗ್ ಹಾಗೂ ಆನ್ಲೈನ್ ಬೆಟ್ಟಿಂಗ್ ಗೇಮಗಳನ್ನು ನಿಷೇಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಆನ್ಲೈನ್ ಬೆಟ್ಟಿಂಗ್ ಸಹವಾಸದಿಂದ ಹಲವಾರು ಯುವಕರು, ವಿದ್ಯಾರ್ಥಿಗಳು ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈಗಾಗಲೇ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಅನಧೀಕೃತವಾಗಿ ಬೆಟ್ಟಿಂಗ್ ವ್ಯವಸ್ಥೆ ನಡೆಯುತ್ತಿದ್ದು, ಇಬ್ಬರು ಬುಕ್ಕಿಗಳ ಮೇಲೆ ಎಫ್.ಐ.ಆರ್ ದಾಖಲಾಗಿದೆ” ಎಂದರು.
“ಜನರಿಗೆ ಆನ್ಲೈನ್ ಬೆಟ್ಟಿಂಗ್ ಬಗ್ಗೆ ಅರಿವು ಮೂಡಿಸಬೇಕು. ಮೋಸಮಾಡುವ ಉದ್ದೇಶದಿಂದ ಜನರನ್ನು ವಂಚಿಸುತ್ತಿರುವ ಆನ್ ಲೈನ್ ಗೇಮಿಂಗ್ ವೆಬಸೈಟ್ ಹಾಗೂ ಆಪ್ ಗಳನ್ನು ರಾಜ್ಯಾದ್ಯಂತ ನಿಷೇಧಿಸಬೇಕು” ಎಂದು ಒತ್ತಾಯಿಸಿದರು.
“ಒಂದುವೇಳೆ ರಾಜ್ಯದಲ್ಲಿ ಆನ್ ಲೈನ್ ಗೇಮಿಂಗ್ ವೆಬಸೈಟ್ ಹಾಗೂ ಆಪ್ ಗಳನ್ನು ರಾಜ್ಯ ಸರ್ಕಾರ ನಿಷೇದಮಾಡದೇ ಹೋದಲ್ಲಿ ನಮ್ಮ ಕರ್ನಾಟಕ ಸೇನೆ ವತಿಯಿಂದ ರಾಜ್ಯದಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇವೆ” ಎಂದು ಮಾರುತಿ ಹಾಲಗಿ ಅವರು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಏ.10ರವರೆಗೆ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಹೆದ್ದಾರಿ ತಡೆ
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಯಲ್ಲಪ್ಪ ಕೋಣನತಂಬಿಗೆ ಮತ್ತು ಜಿಲ್ಲಾ ಮಹಿಳಾ ಅಧ್ಯಕ್ಷರಾದ ಅನ್ನಪೂರ್ಣ ವಡ್ಡಟ್ಟಿ, ಹಾವೇರಿ ತಾಲೂಕ ಮಹಿಳಾ ಅಧ್ಯಕ್ಷರಾದ ವೇದಾ, ಹಾಗೂ ಕೊಡಿ ಬಸನಗೌಡ,ರೇಣುಕಾ ಬಡಿಗೇರ,ನಾಗನಗೌಡ ಗೌಡ್ರು ಹೀಗೆ ಇನ್ನು ಅನೇಕ ಸದಸ್ಯರು ಉಪಸ್ಥಿತರಿದ್ದರು.