ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ನ ಆಡಳಿತ ಮಂಡಳಿಯ ಒಟ್ಟು 14 ಸ್ಥಾನಗಳ ಪೈಕಿ ಎರಡಕ್ಕೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗುಡಗೂರ ಹಾಗೂ ಗುಡ್ಡಗುಡ್ಡಾಪುರ ಕ್ಷೇತ್ರಗಳ ಫಲಿತಾಂಶ ಹೊರತುಪಡಿಸಿ (ನ್ಯಾಯಾಲಯದ ಆದೇಶದ ಪ್ರಕಾರ) ಉಳಿದ ಕ್ಷೇತ್ರಗಳ ಫಲಿತಾಂಶ ಪ್ರಕಟಿಸಲಾಯಿತು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು: ರತ್ನವ್ವ ರಾಜಶೇಖರಗೌಡ ಗಂಗನಗೌಡ್ರ (ಮುದೇನೂರು ಕ್ಷೇತ್ರ), ಮಹೇಶ ಕುಬೇರಪ್ಪ ಕಂಬಳಿ (ರಾಣಿಬೆನ್ನೂರು ಕ್ಷೇತ್ರ), ಕುಮಾರ ಸಹದೇವಪ್ಪ ಬತ್ತಿಕೊಪ್ಪದ (ಬಿಲ್ಲಹಳ್ಳಿ ಕ್ಷೇತ್ರ), ಕರೇಗೌಡ ಶಿವಪ್ಪ ಬಾಗೂರ (ಕುಪ್ಪೇಲೂರ ಕ್ಷೇತ್ರ), ವೀರನಗೌಡ ಪುಟ್ಟನಗೌಡ ಪೊಲೀಸಗೌಡ್ರ (ಜೋಯಿಸರಹರಹಳ್ಳಿ ಕ್ಷೇತ್ರ), ಉದಯಕುಮಾರ ಶಿವಪ್ಪ ಕನ್ನಪ್ಪಳ್ಳನವರ (ಹಲಗೇರಿ ಕ್ಷೇತ್ರ), ಶಿವಲೀಲಾ ರಾಜಶೇಖರಯ್ಯ ಸುರಳಿಕೇರಿಮಠ (ರಾಣಿಬೆನ್ನೂರು ಕ್ಷೇತ್ರ) ಹಾಗೂ ಹಾಲಪ್ಪ ಭೀಮಪ್ಪ ಲಮಾಣಿ (ಹೊನ್ನತ್ತಿ ಕ್ಷೇತ್ರ) ಅವಿರೋಧ ಆಯ್ಕೆ
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು: ಮಹದೇವಕ್ಕ ಅಶೋಕ ಓಲೇಕಾರ (ಮೇಡೇರಿ ಕ್ಷೇತ್ರ), ಕಲ್ಪನಾ ಬಸನಗೌಡ ಪಾಟೀಲ (ಇಟಗಿ ಕ್ಷೇತ್ರ), ಬಸವರಾಜ ತಿರಕಪ್ಪ ತೆಂಬದ (ಕರೂರ ಕ್ಷೇತ್ರ) ಹಾಗೂ ರಮೇಶ ವಿರುಪಾಕ್ಷಪ್ಪ ಕೆರೂಡಿ (ಕಾಕೋಳ ಕ್ಷೇತ್ರ) ಅವಿರೋಧ ಆಯ್ಕೆ.
ಸಹಕಾರ ಸಂಘಗಳ ಸಹಾಯಕ ನಿಬಂಧಕರ ವಿಕ್ರಮ ಕುಲಕರ್ಣಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಚುನಾವಣೆಯಲ್ಲಿ ವಿಜೇತ ಕಾಂಗ್ರೆಸ್ ಅಭ್ಯರ್ಥಿಗಳನ್ನು ವಿಧಾನ ಸಭೆ ಮಾಜಿ ಸ್ಪೀಕರ್‌ಕೆ.ಬಿ. ಕೋಳಿವಾಡ ಸನ್ಮಾನಿಸಿದರು.
