ರಸ್ತೆಯುದ್ದಕ್ಕೂ ತಗ್ಗು ಗುಂಡಿಗಳು ತುಂಬಿದ್ದು, ಡಾಂಬರ್ ಪೂರ್ತಿ ಕಿತ್ತುಹೋಗಿದೆ. ರಸ್ತೆಗೆ ಅಲ್ಲಲ್ಲಿ ತೇಪೆ ಹಾಕಿದ್ದು, ದ್ವಿಚಕ್ರ ವಾಹನ ಸವಾರರು ಉರುಳಿ ಬೀಳುವ ಭಯದಲ್ಲಿದ್ದಾರೆ. ಹಾಗಾಗಿ ಸ್ಥಳೀಯರು ರಸ್ತೆ ದುರಸ್ತಿಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಹಾವೇರಿಯಿಂದ ಕರ್ಜಗಿಗೆ ಹಾಗೂ ಅಗಡಿ-ಬೂದಗಟ್ಟಿ ಮಾರ್ಗದಿಂದ ಗುತ್ತಲಕ್ಕೆ ತಲುಪುವ ರಸ್ತೆಯ ಡಾಂಬರ್ ಕಿತ್ತು ಹೋಗಿದೆ. ಅಲ್ಲಲ್ಲಿ ತಗ್ಗು ಗುಂಡಿಗಳು ಹೆಚ್ಚಾಗಿವೆ. ಈ ರಸ್ತೆಯಲ್ಲಿ ಸಂಚರಿಸುವ ಸವಾರರು ನಿತ್ಯ ಭಯದಲ್ಲಿಯೇ ಸಂಚರಿಸುತ್ತಿದ್ದಾರೆ.
ಹಾವೇರಿಗೆ ಹೋಗುವ ರಸ್ತೆಯಲ್ಲಿ ಕೆಎಂಎಫ್ ಬಳಿ ಡಾಂಬರ್ ಕಿತ್ತುಹೋಗಿದ್ದು, ಗುಂಡಿಗಳು ಕಂಡುಬರುತ್ತವೆ. ಈ ಮಾರ್ಗದಲ್ಲಿ ಸಂಚರಿಸುವ ಜನರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ದ್ವಿಚಕ್ರ ವಾಹನಸವಾರರು, ಉರುಳಿಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ. ಕರ್ಜಗಿ ಬಸ್ ನಿಲ್ದಾಣದ ಎದುರೇ ಗುಂಡಿಗಳು ಬಿದ್ದು, ಮಳೆಯಾದರೆ ಕೆಸರು ಗದ್ದೆಯಂತಾಗುತ್ತದೆ. ಕಲಕೋಟಿ ಮಾರ್ಗದ ರಸ್ತೆಯೂ ಹಾಳಾಗಿದ್ದು, ಎಲ್ಲೆಂದರಲ್ಲಿ ತಗ್ಗುಗಳು ಬಿದ್ದಿವೆ. ಮಳೆಯಿಂದಾಗಿ ಗುಂಡಿಯಲ್ಲಿ ನೀರು ಸಂಗ್ರಹವಾಗುತ್ತದೆ. ಹೀಗೆ ನಿಂತ ನೀರಿನಿಂದ ಗುಂಡಿಗಳು ಮತ್ತಷ್ಟು ದೊಡ್ಡದಾಗಿ ರಸ್ತೆಗಳು ಹಾಳಾಗುತ್ತಿವೆ.

ಅಗಡಿ, ಬೂದಗಟ್ಟಿ ಗ್ರಾಮಗಳ ಮಾರ್ಗದಿಂದ ಗುತ್ತಲಕ್ಕೆ ತಲುಪುವ ರಸ್ತೆಯ ಡಾಂಬರ್ ಕಿತ್ತುಹೋಗಿದೆ. ರಸ್ತೆಯುದ್ಧಕ್ಕೂ ತಗ್ಗು ಗುಂಡಿಗಳು, ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಈ ಮಾರ್ಗದಲ್ಲಿ ದೊಡ್ಡ ದೊಡ್ಡ ಲಾರಿಗಳು, ಟಿಪ್ಪರ್‌ಗಳ ಉಸುಗು, ಕಡಿ ಹೇರಿಕೊಂಡು ಹೆಚ್ಚು ಓಡಾಡುವುದರಿಂದ, ತಗ್ಗು ಗುಂಡಿಗಳು ಹೆಚ್ಚಾಗಿವೆ. ಡಾಂಬರ್ ಕಿತ್ತುಹೋಗಿ, ಡಾಂಬರ್ ಕೆಳಗೆ ಹಾಕಲಾಗಿದ್ದ, ಕಡಿ ಕಲ್ಲುಗಳು ಮೇಲೆ ಬಂದು, ದ್ವಿಚಕ್ರ ವಾಹನ ಸವಾರರು ಕೆಳಗೆ ಬೀಳುವ ಭಯದಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ಸವಾರರು ಸ್ಥಳೀಯರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ರಸ್ತೆಗೆ ತೇಪೆ: ಗುತ್ತಲಕ್ಕೆ ಹೋಗುವ ರಸ್ತೆಯಲ್ಲಿ ಮೂರು ದೊಡ್ಡದಲ್ಲದ ಸೇತುವೆಗಳು ಕಂಡುಬಂದಿದ್ದು, ಅಲ್ಲಲ್ಲಿ, ತಗ್ಗು ಗುಂಡಿಗಳಿಗೆ ಗರಸು ಮಣ್ಣು ಹಾಕಿ ತೇಪೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಗುತ್ತಲ ಹೋಬಳಿ ಪ್ರವೇಶದಿಂದ ಬಸ್ ನಿಲ್ದಾಣದವರೇ ತಗ್ಗು ಗುಂಡಿಗಳಿಗೆ ಗರಸು, ಕಡಿ ಹಾಕಿದ್ದಾರೆ. ಟಿಪ್ಪರ್ ಲಾರಿ ಹೆಚ್ಚು ಓಡಾಡುವುದರಿಂದ ಗರಸು ಮಣ್ಣು, ಕಡಿ ಮೇಲೆ ಎದ್ದು ಸವಾರರ ಜೀವಕ್ಕೆ ಕುತ್ತಾಗುವೆ.

ಕರ್ನಾಟಕ ರಕ್ಷಣಾ ವೇದಿಕೆ ಹಾವೇರಿ ತಾಲೂಕು ಅಧ್ಯಕ್ಷ ಹಾಲೇಶ್ ಹಾಲಣ್ಣವರ ಮಾತನಾಡಿ, “ಸುಮಾರು ವರ್ಷಗಳಿಂದ ರಸ್ತೆ ಸಮಸ್ಯೆ ಇದೆ. ಎಷ್ಟೋ ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲುಗಳಿಗೆ ಪೆಟ್ಟಾಗಿದೆ. ಅಲ್ಲಲ್ಲಿ ತಗ್ಗು ಗುಂಡಿಗಳಿಗೆ ಗರಸು ತೇಪೆ ಹಾಕಿ ರಿಪೇರಿ ಮಾಡಿದ್ದಾರೆ. ಈ ರಸ್ತೆ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳು ಕೂಡಲೇ ಎಚ್ಛೆತ್ತು ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಘಟಪ್ರಭಾದಲ್ಲಿ ಹದಗೆಟ್ಟ ರಸ್ತೆ; ಸ್ಥಳೀಯ ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ
ದ್ವಿಚಕ್ರ ವಾಹನಸವಾರ ಯಲ್ಲಪ್ಪ ಎಸ್ ಮಾತನಾಡಿ, “ನಮ್ಮೂರಿಂದ ಗುತ್ತಲವರೆಗೂ ರಸ್ತೆ ಸರಿಯಿಲ್ಲ. ನಿತ್ಯವೂ ಗುತ್ತಲ್ಲಕ್ಕೆ ಓಡಾಡುತ್ತೇವೆ. ಹದಿನೈದು ನಿಮಿಷದ ದಾರಿ ತಲುಪುವಷ್ಟರಲ್ಲಿ ಹೆಚ್ಚು ಕಮ್ಮಿ ಒಂದು ಗಂಟೆ ಬೇಕಾಗುತ್ತೆ. ಇದರಿಂದ ತುಂಬಾ ಬೇಸರವಾಗುತ್ತದೆ” ಎಂದು ಹೇಳಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.