“ಸರ್ಕಾರದ ಕಂದಾಯ ಇಲಾಖೆಯಲ್ಲಿನ ಯೋಜನೆಗಳ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸಮಾಡಬೇಕು” ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.
ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಇಂದು ಸೋಮವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
“ಜಿಲ್ಲೆಯ ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಂಡು ಬಂದಾಗ ಅವರ ಸಮಸ್ಯೆವನ್ನು ಆಲಿಸಿ ಪರಿಹರಿಸಿ. ಜನರು ಸರ್ಕಾರದ ಯೋಜನೆಗಳ ಕುರಿತು ಗೊಂದಲಕ್ಕೆ ಒಳಗಾದಲ್ಲಿ ಅದನ್ನು ಬಗೆಹರಿಸಿ ಯೋಜನೆಯ ಉಪಯುಕ್ತತೆಯನ್ನು ಅವರಿಗೆ ತಲುಪುವಂತೆ ಮಾಡಿ” ಎಂದರು.
“ಜಿಲ್ಲೆಯಲ್ಲಿ ಬಗರ್ ಹುಕುಂ ಅರ್ಜಿಗಳು ವಿಲೇ ಆಗದೇ ಉಳಿದಿದ್ದರೆ ಅವುಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಗ್ರಾಮಾಡಳಿತ ಅಧಿಕಾರಿಗಳು ಇ ಆಫೀಸ್ ನಿರ್ವಹಣೆಯೊಂದಿಗೆ ತ್ವರಿತಗತಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಬೇಕು. ಕಂದಾಯ ಗ್ರಾಮ, ಪಾವತಿ ಆಂದೋಲನ, ಭೂ ಸುರಕ್ಷೆ ಮೊದಲಾದವುಗಳ” ಕುರಿತು ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆಗಳನ್ನು ನೀಡಿದರು.
“ಜಿಲ್ಲೆಯ ಸಾರ್ವಜನಿಕರು ಒಂದೇ ವಿಷಯವಾಗಿ ಪದೆ ಪದೆ ಕಚೇರಿಗೆ ಅಲೆಯುಂತೆ ಆಗಬಾರದು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ, ಮುಂದಿನ ಸಭೆಯಲ್ಲಿ ಪ್ರಗತಿ ವರದಿ ಸಲ್ಲಿಸುವಂತೆ ಸೂಚನೆ ನೀಡಿ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಲಕ್ಷ್ಮೇಶ್ವರ ರಸ್ತೆಯುದ್ಧಕ್ಕೂ ನೂರಾರು ತಗ್ಗು ಗುಂಡಿಗಳು: ರಸ್ತೆ ಅಭಿವೃದ್ಧಿಪಡಿಸಲು ಸಾರ್ವಜನಿಕರು ಒತ್ತಾಯ
ಸಭೆಯಲ್ಲಿ ತಹಶೀಲ್ದಾರ್ ಶ್ರೀಮತಿ ರೇಣುಕಮ್ಮ, ಉಪ ತಹಶೀಲ್ದಾರ. ಕಂದಾಯ ನೀರಿಕ್ಷಕರು ಮತ್ತು ಗ್ರಾಮಾಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.