ಬಡತನದಲ್ಲಿ ಇರುವ ಫಲಾನುಭವಿಗಳು ಸಂಧ್ಯಾ ಸುರಕ್ಷಾ ವೃದ್ದಾಪ ವಿಕಲಚೇತನ, ವಿಧವಾವೇತನ ಪಡೆದುಕೊಳ್ಳಬೇಕಾದರೆ ಹಣ ನೀಡಬೇಕು. ಇಲ್ಲದಿದ್ದರೆ ಅರ್ಜಿಯನ್ನು ರದ್ದುಗೊಳಿಸಿ ಬಡವರನ್ನು ಸತಾಯಿಸುತ್ತೀದ್ದಾರೆ. ಅಥವಾ ನಿಮಗೆ ಗಂಡು ಮಕ್ಕಳಿದ್ದಾರೆ. ಅವರು ನಿಮ್ಮ ಲಾಲನೆ-ಪಾಲನೆ ಮಾಡುತ್ತಾರೆ. ನಿಮಗೆ ಮಾಶಾಸನ ಮಂಜೂರು ಮಾಡಲು ಆಗುವುದಿಲ್ಲ ಅಂತಾ ಉಡಾಪೆ ಉತ್ತರ ನೀಡುತ್ತಾರೆ” ಎಂದು ಕರವೇ ಗಜಸೇನೆ ತಾಲ್ಲೂಕು ಅಧ್ಯಕ್ಷ ಜಗದೀಶ ಮಲ್ಲಾಡದ ಅಸಮಾಧಾನ ವ್ಯಕ್ತಪಡಿಸಿದರು.
ಹಾವೇರಿ ಪಟ್ಟಣದ ತಹಸೀಲ್ದಾರ್ ಕಛೇರಿ ಎದುರು ಸಂಧ್ಯಾ ಸುರಕ್ಷಾ ವೃದ್ದಾಪ ವಿಕಲಚೇತನ, ವಿಧವಾವೇತನ ಮಂಜೂರು ಮಾಡಲು ತಹಶೀಲ್ದಾರ ಕಛೇರಿಯ ಸಿಬ್ಬಂದಿ ಹಣ ಕೇಳುತ್ತಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಪ್ರತಿಭಟಿಸಿ ತಹಶೀಲ್ದಾರ ಶರಣಮ್ಮ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಹಣವನ್ನು ಕೊಟ್ಟರೇ ಗಂಡು ಮಕ್ಕಳಿದ್ದರು ಆದಾಯ ಹೆಚ್ಚಿಗೆ ಇದ್ದರೂ ಮಾಶಾಸನ ಮಂಜೂರು ಮಾಡುತ್ತಾರೆ. ’60-65 ವರ್ಷ ಆಗದೇ ಇದ್ದರೂ ಸಹ ಅಂತವರಿಗೆ ವೈದ್ಯರು ವಯಸ್ಸಾಗಿದೆ’ ಎಂದು ಪ್ರಮಾಣ ಪತ್ರ ನೀಡುತ್ತಾರೆ. ಅಂತವರಿಗೂ ಸಹ ದುಡ್ಡು ತೆಗೆದುಕೊಂಡು ಮಾಶಾಸನ ಮಂಜೂರು ಮಾಡಿರುವ ಅನೇಕ ಉದಾಹರಣೆಗಳಿವೆ” ಎಂದರು.
ಸಂಬಂಧಿಸಿದ ಅಧಿಕಾರಿಗಳಿಗೆ ಅರ್ಜಿ ಸ್ವೀಕರಿಸುವ ಕಂಪ್ಯೂಟರ್ ಕೇಂದ್ರದ ಸಿಬ್ಬಂದಿ ಮೂಲಕ ಹಣ ವಸೂಲಿಗೆ ಇಳಿದಿರುವ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಜಗದೀಶ ಮಲ್ಲಾಡದ ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ್ ಮಾತನಾಡಿ, “ಸೂಕ್ತ ತನಿಕೆ ನಡೆಸಿ ಸಂಬಂಧಿಸಿದ ಅರ್ಹ ಫಲಾನುಭವಿಗಳಿಗೆ ಮಾಶಾಸನ ಮಂಜೂರು ಮಾಡಬೇಕು. ಹಾಗೂ ಈಗಾಗಲೇ ಅನರ್ಹ ಫಲಾನುಭವಿಗಳಿಂದ ಹಣ ತೆಗೆದುಕೊಂಡು ಮಾಶಾಸನ ಮಂಜೂರು ಮಾಡಿರುವ ಕಂಪ್ಯೂಟರ್ ಕೇಂದ್ರದ ಸಿಬ್ಬಂದಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಒಂದು ವಾರದ ನಂತರ ತಮ್ಮ ಕಛೇರಿಯ ಮುಂದೆ ಅನಿರ್ಧಿಷ್ಟವಾಗಿ ಧರಣಿ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವಿಕರಿಸಿದ ತಹಶೀಲ್ದಾರ್ ಶರಣಮ್ಮ ಮಾತನಾಡಿ, “ಈ ಬಗ್ಗೆ ನಾನು ಹಲವಾರು ಬಾರಿ ಫಲಾನುಭವಿಗಳಿಗೆ ಹಣ ನೀಡಬೇಡಿ. ಯಾರಾದರೂ ಹಣ ಕೇಳಿದರೆ ನನ್ನ ಗಮನಕ್ಕೆ ತನ್ನಿ ಎಂದು ಅನೇಕ ಭಾರಿ ಹೇಳಿದ್ದೇನೆ. ಅಲ್ಲದೇ ಈ ಬಗ್ಗೆ ವಿಚಾರಣೆ ಮಾಡಿ ನಮ್ಮ ಕಛೇರಿಯ ಸಿಬ್ಬಂದಿ ಹಣ ಪಡೆದುಕೊಂಡಿರುವುದು ನಿಜವಾದರೆ ಅಂತವರ ಮೇಲೆ ಸೂಕ್ತ ಕ್ರಮ ಕೈಗೊಂಡು ಮೇಲಾಧಿಕಾರಿಗಳಿಗೆ ವರದಿ ನೀಡುತ್ತೇನೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕಾಯಕದಲ್ಲಿ ಕೈಲಾಸ ಕಂಡ ಶರಣರು : ಸುರೇಖಾ ಕೆ.ಎ.ಎಸ್.
ಪ್ರತಿಭಟನೆಯಲ್ಲಿ ಕರವೇ ಗಜಸೇನೆ ಜಿಲ್ಲಾ ಕಾರ್ಯಧ್ಯಕ್ಷ ಪುಟ್ಟಪ್ಪ ಹಿತ್ತಲಮನಿ, ಜಿಲ್ಲಾ ಉಪಾಧ್ಯಕ್ಷ ಫಕ್ಕೀರೇಶ ಕಟ್ಟಿಮನಿ, ತಾಲೂಕ ಮಹಿಳಾ ಘಟಕದ ಅಧ್ಯಕ್ಷೆ ಮಾಹಾಬೂಬಿ ಹಿತ್ತಲಮನಿ, ಸುಧಾ ಪಾಟೀಲ. ಕುಮಾರ ಸುಳ್ಳನವರ, ಪವನ ವಡ್ಡರ, ಲಲಿತಾ ಗೊರವರ, ಮಾಂತೇಶ ಮಕರಬ್ಬಿ, ನಾಗರಾಜ ವಾಲಿಕಾರ, ದ್ಯಾಮಣ್ಣ ಮಲ್ಲಾಡದ, ಫಕ್ಕೀರೇಶ ತಹಶೀಲ್ದಾರ, ಚಿಕ್ಕಪ್ಪ ಬಿಟ್ಟೂರ, ಲಕ್ಷ್ಮೀ ಗಂಗಮ್ಮನವರ ಆಶಾ ಬಿ ಕೋಳೂರ, ಶಮಶಾನಬಿ ಬಡಿಗೇರ, ಶೇಖಪ್ಪ ದೀಪಾವಳಿ, ಶಿವಕುಮಾರ, ಅಕ್ಕಮಹಾದೇವಿ ಹರ್ತಿ, ಭಾಗ್ಯಶ್ರೀ ಮೋರೆ, ಶ್ರೀದೇವಿ ಹಿರೇಮಠ, ದರ್ಶನ ಹಾವನೂರು, ವೆಂಕಟೇಶ ದಾಸರ, ಗೌರಮ್ಮ ನೇರ್ತಿ, ಮಲ್ಲವ್ವ ಮಕರಬ್ಬಿ, ವಿಜಯ ಹೆಡಿಯಾಲ, ರೇಣುಕಾ ಮಕರಳ್ಳಿ ಅನೇಕರು ಉಪಸ್ಥಿತರಿದ್ದರು.

ಎಲ್ಲ ಸರಕಾರಿ ಕೆಲಸಗಳು ಜನರಿಂದ ದೇಣಿಗೆ ರೂಪದಲ್ಲಿ ಹಣ ಪಡೆದು, ಗುಪ್ತವಾಗಿ ಕಂಪ್ಯೂಟರ್ ಕೇಂದ್ರಗಳಿಂದ ವಸೂಲಿ ಮಾಡುತ್ತಾರೆಂದು ತಿಳಿದುಬಂದಿದೆ. ಅದಕ್ಕೆ ಕರ್ವೆ ಗುಂಪಿನವರು ಸರಿಯಾದ ಕ್ರಮಕೈಗೊಳ್ಳಲು ಮುಂದಾಗಿದ್ದು ಉತ್ತಮ ಬೆಳವಣಿಗೆ. ಈ ಎಲ್ಲ ಮುಂದಾಳುಗಳಿಗೆ ಧನ್ಯವಾದಗಳು. ಎಲ್ಲ ತಾಲೂಕುಗಳಲ್ಲಿ ಈ ರೀತಿ ಅಭಿಯಾನ ಮುಂದುವರೆಯಲಿ.