ಎಸ್‌ಎಫ್‌ಐ ಸಂಘಟನೆ ಇಡೀ ದೇಶದ ಗಮನ ಸೆಳೆದಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳು ಅಂತ ಬಂದರೆ ಮುಂಚೂಣಿಯಲ್ಲಿ ನಿಂತುಕೊಂಡು ಹೋರಾಟ ಮಾಡುತ್ತಾ ಬಂದಿದೆ ಎಂದು ಎಸ್‌ಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಎಸ್ ಹೇಳಿದರು.
ಹಾವೇರಿ ಪಟ್ಟಣದ ಭಾರತ ವಿದ್ಯಾರ್ಥಿ ಫೆಡರೇಷನ್ ಕಚೇರಿಯಲ್ಲಿ ನಡೆದ ಎಸ್‌ಎಫ್‌ಐ 54ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ವಿದ್ಯಾರ್ಥಿ ಚಳವಳಿಗಳು ನಡೆದಿವೆ. ಭಗತ್ ಸಿಂಗ್ ವಾರಸುದಾರಂತೆ ನಾವು ಎಸ್‌ಎಫ್‌ಐ ಮೂಲಕ ಹೋರಾಟದ ಹಾದಿಯಲ್ಲಿದ್ದೇವೆ. ಅನೇಕ ಚಳವಳಿಗಳ ಮೂಲಕ ಇವತ್ತು ಶಿಕ್ಷಣದ ಹಕ್ಕು, ಉದ್ಯೋಗ, ಮೂಲಭೂತ ಹಕ್ಕನ್ನು ಪಡೆಯುವಲ್ಲಿ ಸಂಘಟನೆಯು ಚಳವಳಿ ಮಾಡುತ್ತಿರುವುದು ನಮ್ಮ ಹೆಮ್ಮೆಯ ವಿಚಾರ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕನ್ನಡ ರಕ್ಷಣೆಗೆ ಹೋರಾಡುವ ಹೋರಾಟಗಾರರ ಬಂಧನ ಖಂಡನೀಯ: ಕರವೇ ಕಾರ್ಯಕರ್ತರು
“ಪ್ರಸ್ತುತ ದಿನಗಳಲ್ಲಿ ಒಳ್ಳೆಯ ಶಿಕ್ಷಣ ಪಡೆಯಬೇಕು, ಒಳ್ಳೆಯ ಉದ್ದೋಗ ಪಡೆಯಬೇಕು, ಉತ್ತಮ ರೀತಿಯಲ್ಲಿ ದೇಶ ಕಟ್ಟಬೇಕೆಂಬ ನಿಟ್ಟಿನಲ್ಲಿ ನಮ್ಮ ಎಸ್‌ಎಫ್‌ಐ ನಡೆದುಕೊಂಡು ಬಂದಿದೆ. ಈ ಸಂಘಟನೆಯ ಸಂಸ್ಥಾಪನಾ ದಿನಾಚರಣೆಯನ್ನು ಇಂದು ಸಂಘಟನೆಯ ಕಚೇರಿಗಳಲ್ಲಿ, ವಸತಿ ನಿಲಯಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡುತ್ತಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ವಿಧ್ಯಾರ್ಥಿಗಳು ಇದ್ದರು.