“ಜಾತಿ ಗಣತಿ ಮಾಡಲು ಅಧಿಕಾರಿಗಳು ಮನೆಗೆ ಬಂದಾಗ ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿಯೆಂದು, ಉಪಜಾತಿ ಕಾಲಂನಲ್ಲಿ ತಮ್ಮ ಮೂಲ ಜಾತಿಯಾದ ‘ಛಲವಾದಿ’ ಎಂದು ನಮೂದಿಸಬೇಕು” ಎಂದು ಜಿಲ್ಲಾ ಛಲವಾದಿ ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷರು ಶಂಭು ಕಳಸದ ಮನವಿ ಮಾಡಿದರು.
ಹಾವೇರಿ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು “ಕರ್ನಾಟಕ ರಾಜ್ಯ ಸರ್ಕಾರ ಮೇ ೫ ರಿಂದ ಜಾತಿ ಜನಗಣತಿ ಸಮೀಕ್ಷಾ ಕಾರ್ಯವನ್ನು ಪ್ರಾರಂಭಿಸಿದೆ ಛಲವಾದಿ ಸಮುದಾಯದ ಬಾಂದವರು, ಸಮೀಕ್ಷೆಯಲ್ಲಿ ‘ಛಲವಾದಿ’ ಎಂದೇ ನಮೂದಿಸಬೇಕು” ಎಂದು ಹೇಳಿದರು.
“ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಬೇಕೆಂಬುದು ದಲಿತಪರ ಸಂಘಟನೆಗಳ ಕಳೆದ ಮೂರು ದಶಕಗಳ ಹೋರಾಟ ಮಾಡುತ್ತಾ ಬಂದಿದ್ದಾರೆ ಸಾಕಷ್ಟು ಒತ್ತಡಗಳ ಮಧ್ಯ ರಾಜ್ಯ ಸರ್ಕಾರ ಒಳಮೀಸಲಾತಿ ನೀಡಲು ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳ ಜನಸಂಖ್ಯೆಯನ್ನು ಗಣತಿ ಮಾಡಲು ಮುಂದಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಭೀಷ್ಮಕೆರೆಯಲ್ಲಿ ಶೀಘ್ರ ಸೈಕ್ಲೀಂಗ್ ವ್ಯವಸ್ಥೆ : ಸಚಿವ ಎಚ್ ಕೆ ಪಾಟೀಲ
“ಗಣತಿಯಲ್ಲಿನ ಜನಸಂಖ್ಯೆಯನ್ನು ಆಧರಿಸಿ ಒಳಮೀಸಲಾತಿ ನೀಡುವ ಕುರಿತು ಸಾಧ್ಯತೆಯಿದೆ. ಆದ್ದರಿಂದ ಛಲವಾದಿ ಸಮುದಾಯದ ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ಸಮೀಕ್ಷೆ ವೇಳೆ ಸಮುದಾಯದ ಮುಖಂಡರು ಸ್ವಯಂ ಸೇವಕರಾಗಿ ಸರ್ವೇ ಮಾಡಲು ಬಂದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ಒದಗಿಸುವ ಕಾರ್ಯ ಮಾಡಬೇಕು” ಎಂದು ಶಂಭು ಅವರು ಮನವಿ ಮಾಡಿದರು.
